ಚಿತ್ರದುರ್ಗ: ಕಲುಷಿತ ನೀರು ಸೇವನೆ ಕೇಸ್‌, ಸಾವಿನ ಸಂಖ್ಯೆ 3ಕ್ಕೇರಿಕೆ, ಪ್ರಕರಣಕ್ಕೆ ಹೊಸ ಟ್ವಿಸ್ಟ್..!

By Girish Goudar  |  First Published Aug 2, 2023, 9:03 PM IST

ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವನೆ ಕೇಸ್, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ, ಟ್ಯಾಂಕರ್‌ಗೆ ವಾಟರ್ ಮ್ಯಾನ್ ವಿಷ ಬೆರೆಸಿದ್ದಾನೆಂದು ಮೃತ ಕುಟುಂಬಸ್ಥರ ಆರೋಪ.


ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿತ್ರದುರ್ಗ(ಆ.02):  ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೊ ಶಿಕ್ಷೆ ಎಂಬಂತೆ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿರೋ ಪ್ರಕರಣದಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ. ಇದರ ಬೆನ್ನಲ್ಲೇ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ನೀರಗಂಟಿಯ ಮಗಳು ದಲಿತ ಹುಡುಗನನ್ನು ಪ್ರೀತಿಸಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಈ ಕುರಿತಾ ಒಂದು ವರದಿ ಇಲ್ಲಿದೆ‌...

Latest Videos

undefined

ನೋಡಿ ಹೀಗೆ ಕಣ್ಣೀರಿಡ್ತಿರೊ ಮೃತರ ಕುಟುಂಬಸ್ಥರು. ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಮಕ್ಕಳು ಹಾಗು ನಾಗರಿಕರು. ಈ ದೃಶ್ಯಗಳು ಕಂಡು ಚಿತ್ರದುರ್ಗದ ಕವಾಡಿಗರಹಟ್ಟಿ ಬಳಿ. ಹೌದು, ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಮಂಜುಳ(23), ರಘು(29) ಹಾಗು ಪ್ರವೀಣ್(25)  ಸಾವನ್ನಪ್ಪಿದಾರ ಎಂದು ಗುರುತಿಸಲಾಗಿದೆ. ಅಲ್ಲದೇ, ಅಸ್ವಸ್ಥರ ಸಂಖ್ಯೆ ಸಹ ಮಕ್ಕಳ ಸಹಿತ 79 ದಾಟಿದೆ. ಇದರ ಬೆನ್ನಲ್ಲೇ ಈ ದುರಂತ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈ ಪ್ರಕರಣಕ್ಕೆ ದಲಿತರು ಹಾಗೂ ಸವರ್ಣಿಯರ ನಡುವಿನ ಹಳೇ‌ ದ್ವೇಷವೇ ಕಾರಣವಾಗಿದೆ. ಕವಾಡಗರಹಟ್ಟಿಯ ನೀರಗಂಟಿ ಸುರೇಶನ ಮಗಳ ವಿರುದ್ಧ ದಲಿತ ಯುವಕನು ದೌರ್ಜನ್ಯ ಎಸಗಿದ್ದಾನೆಂದು ಆರೋಪಿಸಿ ಒಂದು ವರ್ಷದ ಹಿಂದೆ ಪೋಕ್ಸೊಕೇಸ್ ದಾಖಲಾಗಿದ್ದ ಹಿನ್ನಲೆಯಲ್ಲಿ ಆ ವೈಷಮ್ಯದಿಂದ ಈ ಕೃತ್ಯವನ್ನು ಎಸಗಿದ್ದಾರೆಂದು ಮೃತ ಮಂಜುಳ ಅವರ ಮಾವ ರಾಮಣ್ಣ ಗಂಭೀರವಾಗಿ ಆರೋಪಿದ್ದಾರೆ.

ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಮಹಿಳೆ ಸಾವು, ಇಡೀ ಏರಿಯಾ ಜನ ಆಸ್ಪತ್ರೆಗೆ ದಾಖಲು!

ಇನ್ನು ಈ ಪ್ರಕರಣದಿಂದಾಗಿ ಬೇಸತ್ತ ಕವಾಡಿಗರಹಟ್ಟಿ ಜನರು ಮೃತರ ಕುಟುಂಬಸ್ಥರಿಗೆ ಸರ್ಕಾರದಿಂದ ಪರಿಹಾರ ನೀಡುವವರೆಗೆ ಅಂತ್ಯ ಸಂಸ್ಕಾರ ನಡೆಸುವುದಿಲ್ಲ ಎಂದು ಪಟ್ಟುಹಿಡಿದಿದ್ದರು. ಈ ವೇಳೆ ಸ್ಥಳಕ್ಕೆ ಧಾವಿಸಿದ ಡಿಸಿ ದಿವ್ಯಪ್ರಭು ಹಾಗೂ ಎಸ್ಪಿ ಪರಶುರಾಮ್ ಕುಟುಂಬಸ್ಥರ ಮನವೊಲಿಸಿದರು. ಅಲ್ಲದೆ ಸಚಿವರು ನುಡಿದಂತೆ 10 ಲಕ್ಷ ಪರಿಹಾರ ಕೊಡಿಸುವ ಭರವಸೆ ನೀಡಿದ್ರು. ಬಳಿಕ ಮೃತರ ಅಂತ್ಯಕ್ರಿಯೆ ನೆರವೇರಿದ್ದು, ಇಲ್ಲಿಯವರೆಗೂ ಮೃತರ ಸಂಖ್ಯೆ ಎರಡಿತ್ತು, ಮರ್ತೋರ್ವ ಪ್ರವೀಣ್ ಎಂಬಾತ ಈ ಗ್ರಾಮಕ್ಕೆ ಬಂದು ಹೋದ ಬಳಿಕ ವಾಂತಿ, ಬೇಧಿ ಆಗಿರುವ ಪರಿಣಾಮ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ಮೃತನ ಮರಣೋತ್ತರ ರಿಪೋರ್ಟ್ ಬಂದ ಬಳಿಕವಷ್ಟೇ ಸತ್ಯಾಂಶ ತಿಳಿಯಲಿದೆ. ಒಟ್ಟಾರೆ ಪ್ರಕರಣ‌ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಡಿಸಿ, ಎಸ್ಪಿ ನೀಡಿದರು.

ಒಟ್ಟಾರೆ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿದ ಪ್ರಕರಣವೀಗ ದಲಿತರು ಹಾಗೂ ಸವರ್ಣಿಯರ ನಡುವಿನ ಹಳೇ ದ್ವೇಷದಿಂದ ಘಟನೆ ನಡೆದಿದೆ ಎಂಬ ಆರೋಪ‌ ಕೇಳಿ ಬಂದಿದೆ. ಆದ್ರೆ ಪ್ರಯೋಗಾಲಯದ ವರದಿ ಬಂದ ಬಳಿಕವಷ್ಟೇ ಸತ್ಯಾಸತ್ಯತೆ ಹೊರ ಬೀಳಬೇಕಿದೆ.

click me!