Kalaburagi ಮಹಾನಗರ ಪಾಲಿಕೆಗೆ ನೂತನ ಮೇಯರ್, ಉಪ ಮೇಯರ್ ಆಯ್ಕೆ: ಗೆದ್ದ ಕಾಂಗ್ರೆಸ್

Published : Aug 30, 2026, 08:34 AM IST
Kalaburgi Mayor

ಸಾರಾಂಶ

ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಜ್ಮಲ್ ಅಹಮದ್ ಗೋಳಾ ಅವರು ನೂತನ ಮೇಯರ್ ಆಗಿ ಮತ್ತು ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ.

ಕಲಬುರಗಿ: ರಾಜಕೀಯವಾಗಿ ತೀವ್ರ ಕುತೂಹಲ ಮೂಡಿಸಿದ್ದ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್‌ ಪಕ್ಷವೇ ಮೇಲುಗೈ ಸಾಧಿಸಿದ್ದು, ಅದೇ ಪಕ್ಷದ ಪಾಲಿಕೆ ಪುರಪಿತೃಗಳು ಇಬ್ಬರು ಆಡಳಿತದ ಚುಕ್ಕಾಣಿ ಮತ್ತೊಮ್ಮೆ ಹಿಡಿಯುವಲ್ಲಿ ಯಶಸ್ಸು ಕಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ, 21ನೇ ವಾರ್ಡ್‌ನ ಅಜ್ಮಲ್ ಅಹಮದ್ ಗೋಳಾ ಅವರು ನೂತನ ಮೇಯರ್ ಆಗಿ ಹಾಗೂ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆಯ ಅಜ್ಮಲ್ ಅಹಮದ್ ಗೋಳಾ ಅವರು ಮೇಯರ್ ಸ್ಥಾನಕ್ಕೆ ಹಾಗೂ 20ನೇ ವಾರ್ಡ್‌ನ ಸದಸ್ಯೆ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿ

ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಆಗಸ್ಟ್ 7ರಂದು ಚುನಾವಣೆ ನಡೆಯಬೇಕಾಗಿತ್ತು. ಆದರೆ ಕೆಲ ಕಾರಣಗಳಿಂದ ಚುನಾವಣೆ ಮುಂದೂಡಿಕೆಯಾಗಿದ್ದು, ಪ್ರಾದೇಶಿಕ ಆಯುಕ್ತೆ ಜಾಹೀರಾ ನಶೀಮ್ ಅವರು ಆಗಸ್ಟ್ 29ರಂದು ಚುನಾವಣೆ ನಡೆಸುವಂತೆ ಪರಿಷ್ಕೃತ ಅಧಿಸೂಚನೆ ಹೊರಡಿಸಿದ್ದರು. ಇದರಂತೆ ಶನಿವಾರ ನಡೆದ ಚುನಾವಣೆಯಲ್ಲಿ ಅಜ್ಮಲ್ ಅಹಮದ್ ಗೋಳಾ ಹಾಗೂ ಫರ್ಹಾನಾಜ್ ಖುಸ್ರೋ ಜಹಗೀರ್ದಾರ್ ಅವರು ಕ್ರಮವಾಗಿ ಮೇಯರ್ ಮತ್ತು ಉಪ ಮೇಯರ್ ಆಗಿ ಆಯ್ಕೆಯಾಗುವ ಮೂಲಕ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಆಡಳಿತದ ಹೊಣೆ ಹೊತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ 35 ಮತಗಳು ಪಡೆದರೆ ಬಿಜೆಪಿ ಅಭ್ಯರ್ಥಿ 29 ಮತಗಳನ್ನು ಪಡೆದರು.

ನೂತನ ಮೇಯರ್‌ ಅಜ್ಮಲ್ ಗೋಳಾ ಅವರ ತಂದೆ ಜಮೀರ್ ಅಹ್ಮದ್‌ ಗೋಳಾ ಅವರು ಈ ಹಿಂದೆ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಆಗಿದ್ದರು. ಇದೀಗ ಅವರ ಪುತ್ರ ಅಜ್ಮಲ್ ಗೋಳಾ ಅವರು ಮೇಯರ್ ಆಗಿ ಆಯ್ಕೆಯಾಗಿದ್ದು, ತಂದೆ-ಮಗ ಮೇಯರ್ ಹುದ್ದೆ ಅಲಂಕರಿಸಿದ್ದು ವಿಶೇಷವಾಗಿದೆ.

ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಹುದ್ದೆಗೆ ಕಾಂಗ್ರೆಸ್ ಪಕ್ಷದಿಂದ ಅಜ್ಮಲ್ ಗೋಲಾ ಹಾಗೂ ಉಪಮೇಯರ್ ಹುದ್ದೆಗೆ ಫರ್ಜಾನಾ ಖುಸ್ರೋ ಜಾಗೀರದಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಮನಿ, ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್‌, ಉತ್ತರ ಮತಕ್ಷೇತ್ರದ ಶಾಸಕಿ ಖನೀಜ್‌ ಫಾತೀಮಾ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಪಾಲಿಕೆಯ ಇತರ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಹಾಜರಿದ್ದು, ನೂತನ ಮೇಯರ್ ಹಾಗೂ ಉಪಮೇಯರ್ ಅವರಿಗೆ ಶುಭ ಹಾರೈಸಿದರು.

PREV
Read more Articles on
click me!

Recommended Stories

Jarkiholi: 'ಪಕ್ಷಕ್ಕೆ ಮುಜುಗರವಾಗಿದ್ದು ನಿಜ..' ಬಿ ನಾಗೇಂದ್ರ ರಾಜೀನಾಮೆ, ಡಿಸಿಎ ಸ್ಥಾನದ ಬಗ್ಗೆ ಸಚಿವ ಜಾರಕಿಹೊಳಿ ಮಹತ್ವದ ಹೇಳಿಕೆ
Bengaluru: ನೆಕ್ಸಸ್ ಮಾಲ್‌ನಲ್ಲಿ ಮುಂದುವರಿದ ಶೋಧ; 6 ಮಳಿಗೆಗಳಲ್ಲಿ 45 ಸಾವಿರ ದಂಡ