ಕೊರೋನಾ ಭೀತಿ, ಚೀನಾ ರೀತಿಯೇ ಮೈಸೂರಲ್ಲೂ ಹೊಸ ಆಸ್ಪತ್ರೆ

By Suvarna News  |  First Published Mar 15, 2020, 10:35 AM IST

ಕೊರೋನಾ ವೈರಸ್‌ ವ್ಯಾಪಿಸಿದಾಗ ಚೀನಾ ಕೇವಲ ಹತ್ತೇ ದಿನಗಳಲ್ಲಿ ಆಸ್ಪತ್ರೆ ಕಟ್ಟಿಸಿ ಗಮನ ಸೆಳೆದಿತ್ತು. ಇದೀಗ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಯೂ ಕೊರೋನಾ ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆ ನಿರ್ಮಾಣವಾಗಿದೆ.


ಮೈಸೂರು(ಮಾ.15): ಕೊರೋನಾ ವೈರಸ್‌ ವ್ಯಾಪಿಸಿದಾಗ ಚೀನಾ ಕೇವಲ ಹತ್ತೇ ದಿನಗಳಲ್ಲಿ ಆಸ್ಪತ್ರೆ ಕಟ್ಟಿಸಿ ಗಮನ ಸೆಳೆದಿತ್ತು. ಇದೀಗ ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿಯೂ ಕೊರೋನಾ ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆ ನಿರ್ಮಾಣವಾಗಿದೆ.

ಕೊರೊನಾ ವೈರಸ್ ಭೀತಿ ಹಿನ್ನೆಲೆ ಚೀನಾ ನಂತರ ಈಗ ಮೈಸೂರಿನಲ್ಲೂ ಪ್ರತ್ಯೇಕ ಆಸ್ಪತ್ರೆ ಮಾಡಲಾಗಿದೆ. ನೂತನ ಜಿಲ್ಲಾಸ್ಪತ್ರೆ ಕಟ್ಟಡವನ್ನು ಐಸೋಲೇಷನ್ ಹಾಸ್ಪಿಟಲ್ ಎಂದು ಸರ್ಕಾರ ಘೋಷಿಸಿದೆ. ನೂತನ ಜಿಲ್ಲಾ ಆಸ್ಪತ್ರೆ  ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿದೆ.

Latest Videos

undefined

ಕೊರೋನಾ ಕಾಟಕ್ಕೆ ತರಕಾರಿ ಬೆಲೆ ದಿವಾಳಿ: ಕಂಗಾಲಾದ ರೈತ

ಇತ್ತೀಚೆಗೆ ಉದ್ಘಾಟನೆಗೊಂಡು, ವೈದ್ಯಕೀಯ ಸೌಲಭ್ಯಗಳಿಲ್ಲದೆ ಖಾಲಿ ಇರುವ ಕಟ್ಟಡವನ್ನು ಕೊರೋನಾ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ. ಜನದಟ್ಟಣೆ ಇಲ್ಲದ ಕಾರಣಕ್ಕೆ ಜಿಲ್ಲಾಡಳಿತ ಜಿಲ್ಲಾಸ್ಪತ್ರೆ  ಕಟ್ಟಡವನ್ನು ಕೊರೊನಾ ಚಿಕಿತ್ಸೆಗೆ ಮೀಸಲಿಟ್ಟಿದೆ. ತಾತ್ಕಾಲಿಕವಾಗಿ ಬೆಡ್, ನೀರು, ವಿದ್ಯುತ್ ಸೌಕರ್ಯ ಒದಗಿಸಿ ಸವಾಲು ಎದುರಿಸಲು ಸಜ್ಜಾಗಿದೆ.

ಕುಕ್ಕುಟೋದ್ಯಮವನ್ನು ನಡುಗಿಸಿ ಕೊರೋನಾ : ಕೆಜಿ 10 ರು.

ಒಂದು ವಾರ ಕರೊನಾ ಪಾಸಿಟಿವ್ ಕೇಸ್‌ಗಳು ಕಂಡುಬಂದರೆ ಮಾತ್ರ ಐಸೋಲೇಷನ್ ಹಾಸ್ಪಿಟಲ್‌ಗೆ ಸ್ಥಳಾಂತರಕ್ಕೆ ಚಿಂತನೆ ಮಾಡಲಾಗಿದೆ. ಮೂರು ಮಹಡಿಗಳಲ್ಲಿ ಕೊಠಡಿ ರೆಡಿ  ಮಾಡುತ್ತಿರುವ ಸಿಬ್ಬಂದಿ ಪ್ರತಿ ಕೊಠಡಿಗೂ ಎರಡು ಬೆಡ್ ಇಟ್ಟು, ವೈದ್ಯಕೀಯ ಪರಿಕರಣ ಸೇರಿಸುತ್ತಿದ್ದಾರೆ. ಇದುವರೆಗೂ ಹಳೆ ಮೈಸೂರು ಭಾಗದಲ್ಲಿ ಕರೊನಾ ಸೋಂಕು ಕಂಡುಬಂದಿಲ್ಲ.

click me!