ಜ್ಞಾನವ್ಯಾಪಿ ಮ್ಯಾಪ್ ಬದಲಾಯಿಸಲು ಸ್ಕೂಲ್‌ ಮನವಿ: ಸ್ಪಷ್ಟನೆ ನೀಡಿದ ಶಾಲೆ

By Girish Goudar  |  First Published May 25, 2022, 12:14 PM IST

*   ಹೆಸರು ಬದಲಾವಣೆಗೆ ಹಳೆಯ ವಿದ್ಯಾರ್ಥಿಗಳಿಗೆ ಇ-ಮೇಲ್‌ ಕಳಿಸಿ ಪ್ರಮಾದ
*  ಹೇಗೆ ಈ ಬದಲಾವಣೆ ಮಾಡಬೇಕೆಂಬ ಬಗ್ಗೆಯೂ ವಿವರಣೆಯೂ ನೀಡಿದ್ದ ಶಾಲೆ
*  ಸ್ಪಷ್ಟನೆಯಲ್ಲಿ ತಪ್ಪಿಗೆ ಒಂದು ಕ್ಷಮೆ ಕೋರುವ ಸೌಜನ್ಯವನ್ನೂ ತೋರದ ಶಾಲೆ 


ಬೆಂಗಳೂರು(ಮೇ.25): ವಾರಣಾಸಿಯ ಜ್ಞಾನವಾಪಿ ಮಸೀದಿಯನ್ನು ‘ಜ್ಞಾನವಾಪಿ ಮಂದಿರ’ ಎಂದು ಗೂಗಲ್‌ ಮ್ಯಾಪ್‌ನಲ್ಲಿ ಹೆಸರು ಬದಲಾಯಿಸುವಂತೆ ತನ್ನ ಎಲ್ಲ ಹಳೆ ವಿದ್ಯಾರ್ಥಿಗಳಿಗೆ ಇ-ಮೇಲ್‌ ಕಳುಹಿಸಿ ವಿವಾದಕ್ಕೀಡಾಗಿರುವ ಬೆಂಗಳೂರಿನ ನ್ಯೂ ಹಾರಿಜನ್‌ ಪಬ್ಲಿಕ್‌ ಶಾಲೆ, ವಿವಾದದ ಬಳಿಕ ಎಚ್ಚೆತ್ತು ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಸ್ಪಷ್ಟನೆ ನೀಡಿದೆ.

ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ಇ-ಮೇಲ್‌ವೊಂದನ್ನು ಕಳುಹಿಸಿ ಜ್ಞಾನವಾಪಿ ಮಸೀದಿ ಬದಲು ಮಂದಿರ ಎಂದು ಗೂಗಲ್‌ ಮ್ಯಾಪ್‌ನಲ್ಲಿ ಹೆಸರು ಬದಲಿಸಲು ಸಲಹೆ ನೀಡಿ, ಹೇಗೆ ಈ ಬದಲಾವಣೆ ಮಾಡಬೇಕೆಂಬ ಬಗ್ಗೆಯೂ ವಿವರಣೆ ನೀಡಿತ್ತು. ಶಾಲೆಯ ಈ ಎಡವಟ್ಟನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿದ ಕೆಲ ವಿದ್ಯಾರ್ಥಿಗಳು ಕಿಡಿ ಕಾರಿದ್ದಾರೆ. ಈ ಶಾಲೆ ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಇಂತಹ ಶಾಲೆಯಲ್ಲಿ ನಾವು ಓದಿದ್ದೇವೆಯೇ ಎಂದು ನಾಚಿಕೆಯಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಬಳಿಕ ಇದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಶಾಲೆಯ ವಿರುದ್ಧ ಎಲ್ಲೆಡೆ ಆಕ್ರೋಶ ಉಂಟಾಗಿದೆ.

Tap to resize

Latest Videos

undefined

ವಾರಾಣಸಿ: ಗ್ಯಾನವಾಪಿ ಮಸೀದಿಯಲ್ಲಿ ಮತ್ತೊಂದು ಶಿವಲಿಂಗ? ಕಾಶಿ ದೇವಸ್ಥಾನದ ಮಾಜಿ ಮಹಂತ್ ಹೇಳಿದ್ದಿಷ್ಟು

ಬಳಿಕ ಎಚ್ಚೆತ್ತ ಶಾಲೆಯ ಆಡಳಿತ ಮಂಡಳಿ ಶಾಲೆಯ ಇ-ಮೇಲ್‌ನಿಂದ ಕೆಲ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರುವ ಮಾಹಿತಿ ನಮ್ಮ ಗಮನಕ್ಕೆ ಬಂದಿದೆ. ಆದ್ಯತೆ ವಹಿಸಿ ಈ ಸಮಸ್ಯೆಯನ್ನು ಬಗೆಹರಿಸಲಾಗುತ್ತಿದೆ. ಇ-ಮೇಲ್‌ ಸರಿಯಾಗಿ ಪರಿಶೀಲಿಸದೆ ಕಳುಹಿಸಿರುವ ಪರಿಣಾಮ ಈ ತಪ್ಪಾಗಿದೆ. ಇದು ಕಣ್ತಪ್ಪಿನಿಂದ ಆದ ಪ್ರಮಾದ ಎಂದು ಸ್ಪಷ್ಟನೆ ನೀಡಿದೆ. ಆದರೆ, ಸ್ಪಷ್ಟನೆಯಲ್ಲಿ ತಪ್ಪಿಗೆ ಒಂದು ಕ್ಷಮೆ ಕೋರುವ ಸೌಜನ್ಯವನ್ನೂ ಶಾಲೆಯವರು ತೋರಿಲ್ಲ.
 

click me!