* ಪತಾಂಜಲಿ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ ಮಹಿಳೆ
* ತಾಯಿ ಹಾಗೂ ಮೂರು ಮಕ್ಕಳ ಆರೋಗ್ಯ ಸ್ಥಿರ
* ತ್ರಿವಳಿ ಮಕ್ಕಳಿಗೆ ನೀಡಿದ ಸುಮೇಯಾ
ಚಿತ್ರದುರ್ಗ(ಮೇ.25): ಇತ್ತೀಚಿನ ದಿನಗಳಲ್ಲಿ ಸುಮಾರು ದಂಪತಿಗಳು ಸಂತಾನ ಫಲಿಸಿಲ್ಲ ಅಂತ ತಮ್ಮ ನಂಬಿಕೆಯ ದೇವಸ್ಥಾನಗಳನ್ನು ಸುತ್ತೋದು ಕಾಮನ್ ಆಗಿದೆ. ಆದ್ರೆ ನಿತ್ಯ ಎಷ್ಟೋ ಮಂದಿ ಮಹಾ ತಾಯಿಯರು ಒಂದೇ ಬಾರಿ ಎರಡು, ಮೂರು, ನಾಲ್ಕು ಮಕ್ಕಳಿಗೆ ಜನ್ಮ ನೀಡಿರೋ ಉದಾಹರಣೆಗಳು ಕೂಡ ಸಾಕಷ್ಟು ನಮ್ಮ ಕಣ್ಮುಂದೆ ಸಿಗುತ್ತದೆ. ಅದಕ್ಕೆ ತಾಜಾ ನಿದರ್ಶನವೆಂಬಂತೆ ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ದೇವರಹಳ್ಳಿ ಗ್ರಾಮದ ಮಹಿಳೆ ಸುಮೇಯಾ ಚಿತ್ರದುರ್ಗ ನಗರದ ಪತಾಂಜಲಿ ಖಾಸಗಿ ಆಸ್ಪತ್ರೆಯಲ್ಲಿ ಮೂರು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ನಿನ್ನೆ(ಮಂಗಳವಾರ) ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಚಳ್ಳಕೆರೆ ತಾಲ್ಲೂಕಿನ ತನ್ನೂರಾದ ದೇವರಹಳ್ಳಿಯಿಂದ ಸೀದಾ ನಗರದಲ್ಲಿರೋ ಪತಾಂಜಲಿ ಆಸ್ಪತ್ರೆಗೆ ದಾಖಲಿಸಿದ್ದರು. ಕೂಡಲೇ ಆಸ್ಪತ್ರೆ ಸಿಬ್ಬಂದಿಗಳೂ ಸ್ಪಂದಿಸಿದ್ದು, ನಾಳೆ ಆಪರೇಷನ್ ಮಾಡುವುದಾಗಿ ವೈದ್ಯೆ ಡಾ.ಸುಮತಿ ತಿಳಿಸಿದ್ದಾರೆ. ಅಂತೆಯೇ ಇಂದು ಆಪರೇಷನ್ ಸಕ್ಸಸ್ ಆಗಿದ್ದು ಆಶ್ಚರ್ಯ ಎಂಬಂತೆ ಮಹಾತಾಯಿ ಮುದ್ದಾದ ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದು ವಿಶೇಷದಲ್ಲಿ ತುಂಬಾ ವಿಶೇಷವಾಗಿತ್ತು.
Shivamogga: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಭದ್ರಾವತಿಯ ಮಹಾತಾಯಿ!
ಹಲವರಿಗೆ ಹೆರಿಗೆಯಾದ ಸಮಯದಲ್ಲಿ ಮೂರು ಮಕ್ಕಳು ಜನಿಸಿದರೆ, ಅದ್ರಲ್ಲಿ ಒಂದು ಹೆಣ್ಣು, ಗಂಡು ಇಬ್ಬರು ಜನಿಸುತ್ತಾರೆ. ಆದ್ರೆ ಈ ಮಹಾತಾಯಿ ಸುಮೇಯಾ ಹಾಗೂ ಪತಿ ಹುಸೇನ್ ಪೀರ್ ದಂಪತಿಗೆ ಮಾತ್ರ ಲಾಟರಿ ಎಂಬಂತೆ ಮುದ್ದಾದ ಮೂರು ಗಂಡು ಮಕ್ಕಳು ಜನಿಸಿದ್ದು ತಾಯಿ ಮತ್ತು ಮಕ್ಕಳ ಆರೋಗ್ಯ ಸ್ಥಿರವಾಗಿದ್ದು ಸಂತೋಷದಿಂದ ಇದ್ದಾರೆ. ಇನ್ನೂ ಇವರ ಕುಟುಂಬಸ್ಥರ ಸಂತಸ ಮಾತ್ರ ಮುಗಿಲು ಮುಟ್ಟಿದೆ.