ಧರ್ಮಸ್ಥಳದ ಅನ್ನದಾಸೋಹಕ್ಕೂ ತಟ್ಟಿದೆ ಬರದ ಬಿಸಿ

Published : May 18, 2019, 11:42 AM ISTUpdated : May 18, 2019, 11:46 AM IST
ಧರ್ಮಸ್ಥಳದ ಅನ್ನದಾಸೋಹಕ್ಕೂ ತಟ್ಟಿದೆ ಬರದ ಬಿಸಿ

ಸಾರಾಂಶ

ಧರ್ಮಸ್ಥಳದಲ್ಲಿ ನೀರಿನ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಾಡುತ್ತಿದೆ. ನೇತ್ರಾವತಿ ಬತ್ತಿದ ಪರಿಣಾಮ ಅನ್ನದಾಸೋಹಕ್ಕೂ ಸಮಸ್ಯೆ ಎದುರಾಗಿದೆ.

ಧರ್ಮಸ್ಥಳ : ನೀರಿನ ಕೊರತೆಯಿಂದ ಕೆಲ ದಿನಗಳ ಕಾಲ ಭಕ್ತರಿಗೆ ಪ್ರವಾಸ ಮುಂದೂಡುವಂತೆ ಡಾ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. 

ಇನ್ನು ಇಲ್ಲಿ ನಿತ್ಯ ಸಾವಿರಾರು ಮಂದಿಗೆ ಮಾಡಲಾಗುವ ಅನ್ನದಾಸೋಹಕ್ಕೂ ಕೂಡ ನೀರಿನ ಬರದ ಬಿಸಿ ತಟ್ಟಿದೆ. 

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಿತ್ಯ ಅನ್ನದಾಸೋಹಕ್ಕೆ ಪ್ರತಿ ನಿತ್ಯ 3 ಲಕ್ಷ ಲೀ. ನೀರು ಗತ್ಯವಿದ್ದು,  ಬರದ ಹಿನ್ನೆಲೆಯಲ್ಲಿ ನೀರಿನ ಅತಿಯಾದ ಬಳಕೆಗೆ ಬ್ರೇಕ್ ಹಾಕಲಾಗಿದೆ. 

ಅನ್ನದಾಸೋಹಕ್ಕೆ ಸ್ಟೀಲ್ ತಟ್ಟೆಯ ಬದಲಾಗಿ ಎಲೆಗಳ ಬಳಕೆಗೆ ಆಡಳಿತ ಮಂಡಳಿ ಮುಂದಾಗಿದೆ. ಶನಿವಾರ, ಭಾನುವಾರ, ಸೋಮವಾರ ಎಲೆಯ ಬಳಕೆಗೆ ತೀರ್ಮಾನಿಸಿದೆ. 

ನಿತ್ಯ 30ರಿಂದ 40ಸಾವಿರ ಭಕ್ತರಿಗೆ ಇಲ್ಲಿ ಅನ್ನ ದಾಸೋಹ  ನಡೆಯಲಿದ್ದು, ತಯಾರಿಗೆ ಭಾರೀ ಪ್ರಮಾಣದ ಶುದ್ದ ನೀರಿನ ಅಗತ್ಯವಿದೆ. ಆದರೆ ನೀರಿನ ಅಗತ್ಯ ಪೂರೈಸಲು ಕ್ಷೇತ್ರದ ಜಲಮೂಲವಾದ ನೇತ್ರಾವತಿ ಬತ್ತಿದ್ದು, ತೀವ್ರ ಸಮಸ್ಯೆಯಾಗಿದೆ. 

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

PREV
click me!

Recommended Stories

ನಾಳೆ ಬೆಂಗಳೂರಿನ ಹಲೆವೆಡೆ ಪವರ್ ಕಟ್, ಸಾರ್ವಜನಿಕರಿಗೆ ಮಹತ್ವದ ಸೂಚನೆ
ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ