'ದೇಶದ ಅಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದ್ದು ಬಿಜೆಪಿ ಸರ್ಕಾರದಲ್ಲಿ ಮಾತ್ರ'

By Kannadaprabha News  |  First Published Apr 7, 2021, 12:51 PM IST

ಬಿಜೆಪಿ ವಿಶ್ವದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ| ವಂಶ ಪಾರಂಪರೆಯಿಂದ ದೂರವಿದ್ದು, ಕಾರ್ಯಕರ್ತರಿಂದಲೇ ನಡೆಯುವಂತ ಪಕ್ಷ ನಮ್ಮದಾಗಿದೆ| ವಾಜಪೇಯವರು ಪ್ರಧಾನಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ದೇಶದ ಜನ ಎಂದಿಗೂ ಮರೆಯಲಾರರು: ನೆಹರು ಓಲೇಕಾರ| 


ಹಾವೇರಿ(ಏ.07): ವ್ಯಕ್ತಿಗಿಂತ ದೇಶ ಮುಖ್ಯ, ನಂತರ ಪಕ್ಷ ಎಂಬ ಧ್ಯೇಯದೊಂದಿಗೆ ಲಕ್ಷಾಂತರ ಕಾರ್ಯಕರ್ತರು ಯಾವುದೇ ಫಲಾಪೇಕ್ಷೆ ಇಲ್ಲದೇ ಪಕ್ಷಕ್ಕಾಗಿ ದುಡಿಯುತ್ತಿರುವುದು ಬಿಜೆಪಿ ವಿಶೇಷತೆ ಎಂದು ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹೇಳಿದ್ದಾರೆ.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಬಿಜೆಪಿಯ 41ನೇ ಸಂಸ್ಥಾಪನಾ ದಿನದ ಅಂಗವಾಗಿ ಪಕ್ಷದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಜನ ಸಂಘದ ನಂತರ 1980 ಏ. 6ರಂದು ಬಿಜೆಪಿ ಸ್ಥಾಪನೆಯಾಯಿತು. ಪ್ರಥಮ ಅಧ್ಯಕ್ಷರಾಗಿ ದಿ. ಅಟಲ್‌ ಬಿಹಾರಿ ವಾಜಪೇಯವರು ಜವಾಬ್ದಾರಿಯನ್ನು ವಹಿಸಿಕೊಂಡು ದೇಶದ್ಯಾಂತ ಸಂಚರಿಸುವ ಮುಖಾಂತರ ಸಂಘಟನೆ ಮಾಡಿದರು. ಇದರ ಪರಿಣಾಮವಾಗಿ ಇಂದು ದೇಶದಲ್ಲಿ ಬಹುತೇಕ ಕಡೆಗಳಲ್ಲಿ ಪಕ್ಷ ಅಧಿಕಾರದಲ್ಲಿದೆ ಎಂದರು.

Tap to resize

Latest Videos

ಶಾಸಕ ನೆಹರು ಓಲೇಕಾರ ಮಾತನಾಡಿ, ಬಿಜೆಪಿ ವಿಶ್ವದಲ್ಲಿ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಂಶ ಪಾರಂಪರೆಯಿಂದ ದೂರವಿದ್ದು, ಕಾರ್ಯಕರ್ತರಿಂದಲೇ ನಡೆಯುವಂತ ಪಕ್ಷ ನಮ್ಮದಾಗಿದೆ. ವಾಜಪೇಯವರು ಪ್ರಧಾನಿಯಾಗಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ದೇಶದ ಜನ ಎಂದಿಗೂ ಮರೆಯಲಾರರು. ದೇಶದ ಅಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗಿದ್ದು ಬಿಜೆಪಿ ಸರ್ಕಾರದಲ್ಲಿ ಮಾತ್ರ ಎಂದು ಹೇಳಿದರು.

ಹಿರೇಕೆರೂರು: ಕೊರೋನಾ ಲಸಿಕೆ ಪಡೆದಿದ್ದ ಮಹಿಳೆ ಸಾವು

ಆನಂತರ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ದೇಶದಲ್ಲಿನ ಸಮಸ್ತ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿಯವರ ಮಾಡಿದ ಭಾಷಣ ವೀಕ್ಷಣೆ ಮಾಡಲಾಯಿತು. ಸವಣೂರ ಮಂಡಲದ ತವರಮಳ್ಳಿಹಳ್ಳಿ, ಹಳೆಹಲಸೂರು, ಹೊಸಹಲಸೂರ ಗ್ರಾಮಗಳಲ್ಲಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಬಿಜೆಪಿ ಬೂತ್‌ ಅಧ್ಯಕ್ಷರ ಮನೆಗೆ ನಾಮಫಲಕ ಹಾಕುವ ಮೂಲಕ ಚಾಲನೆ ನೀಡಿದರು ಹಾಗೂ ಬಿಜೆಪಿ ಬೂತ್‌ ಅಧ್ಯಕ್ಷರ ಮನೆಗಳ ಮೇಲೆ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ ಮುಳ್ಳೂರ, ಶಶಿಧರ ಹೊಸಳ್ಳಿ, ನಗರ ಮಂಡಲ ಅಧ್ಯಕ್ಷ ಗಿರೀಶ ತುಪ್ಪದ, ಸವಣೂರ ಮಂಡಲ ಅಧ್ಯಕ್ಷ ಗಂಗಾಧರ ಬಾಣದ, ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ರಮೇಶ ಪಾಲನಕರ, ಬಸವರಾಜ ಮಾಸೂರ, ಬಾಬುಸಾಬ ಮೋಬಿನಗಾರ ಇದ್ದರು.
 

click me!