ಸಿರಿಧಾನ್ಯ ಬಳಕೆ ಹೆಚ್ಚಳ ಅಗತ್ಯ: ದರ್ಶನ್‌

By Kannadaprabha News  |  First Published Jul 9, 2023, 5:47 AM IST

ತಾಲೂಕಿನ ಕೊನೇಹಳ್ಳಿ ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನವಣೆ ತಳಿ ಎಸ್‌ಐಎ3159 ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ತಾಲೂಕಿನ ಪರುವಗೊಂಡನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.


 ತಿಪಟೂರು :ತಾಲೂಕಿನ ಕೊನೇಹಳ್ಳಿ ಐಸಿಎಆರ್‌ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನವಣೆ ತಳಿ ಎಸ್‌ಐಎ3159 ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ತಾಲೂಕಿನ ಪರುವಗೊಂಡನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೃಷಿ ವಿಸ್ತರಣಾ ವಿಜ್ಞಾನಿ ಡಾ. ಎಂ. ದರ್ಶನ್‌ ಮಾತನಾಡಿ ರಾಜ್ಯವು ಸಿರಿಧಾನ್ಯಗಳ ಬೆಳೆಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಲ್ಲಿ ಒಂದಾಗಿದ್ದು ಪ್ರಸ್ತುತ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಆಚರಿಸುತ್ತಿದ್ದು, ಇದರ ಭಾಗವಾಗಿ ಜನರಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಬೆಳೆಯನ್ನು ಉತ್ತೇಜಿಸಲಾಗುತ್ತಿದೆ. ಮಕ್ಕಳು ಮತ್ತು ಯುವಕರಲ್ಲಿ ಸಿರಿಧಾನ್ಯಗಳ ಬಳಕೆಯ ಅರಿವು ಮೂಡಿಸಲು ಹಾಗೂ ರೈತರಿಗೆ ಅತಿವೃಷ್ಟಿಹಾಗೂ ಅನಾವೃಷ್ಟಿಸಮಯದಲ್ಲಿ ಆದಾಯವನ್ನು ಪಡೆಯಲು ಸಹಾಯಕವಾಗಲೆಂದು ಕೆವಿಕೆ ವತಿಯಿಂದ ನೂತನ ಹಾಗೂ ಸುಧಾರಿತ ನವಣೆ ಬೆಳೆಯ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.

Tap to resize

Latest Videos

ಗೃಹ ವಿಜ್ಞಾನಿ ಡಾ. ಕೆ. ನಿತ್ಯಶ್ರೀ ಮಾತನಾಡಿ, ಜೋಳ, ಸಜ್ಜೆ, ರಾಗಿ, ಬರಗು, ನವಣೆ, ಹಾರಕ, ಸಾಮೆ, ಕೊರಲೆ, ಊದಲು ಸಿರಿಧಾನ್ಯಗಳಾಗಿ ಗುರುತಿಸಿಕೊಂಡಿದೆ. ಈ ಧಾನ್ಯಗಳು ಬಣ್ಣದ ವ್ಯತ್ಯಾಸವಿದ್ದರೂ ಆಕಾರದಲ್ಲಿ ಸಾಮ್ಯತೆ ಇರುತ್ತದೆ. ಕೆಲವು ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚಿದ್ದರೆ. ಇನ್ನು ಕೆಲವು ಧಾನ್ಯಗಳಲ್ಲಿ ಅಕ್ಕಿ, ಗೋಧಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಮತ್ತು ಖನಿಜಗಳಿರುತ್ತವೆ. ಪ್ರತಿ ಧಾನ್ಯಗಳು ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತವೆ. ಜೊತೆಗೆ ನವಣೆಯು ಪೋಷಕಾಂಶಗಳ ಸಮೃದ್ಧಿ ಮೂಲವಾಗಿದೆ ಎಂದು ತಿಳಿಸಿಕೊಟ್ಟರು.

ಬೇಸಾಯಶಾಸ್ತ್ರ ವಿಜ್ಞಾನಿ ಡಾ. ಪದ್ಮನಾಭನ್‌ ಮಾತನಾಡಿ, ನವಣೆಯಂತಹ ಕಿರಿಧಾನ್ಯಗಳು ಕೀಟ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ಕಡಿಮೆ ಫಲವತ್ತಾದ ಹೊಲಗಳಲ್ಲೂ ಸುಲಭವಾಗಿ ಬೆಳೆಯಬಹುದು ಮತ್ತು ಕಡಿಮೆ ಮಳೆಯಲ್ಲಿಯೂ ಬೆಳೆಯಬಲ್ಲದು ಎಂದು ತಿಳಿಸಿದರು ಜೊತೆಗೆ ಬೆಳೆಯ ಕಾಲಾವಧಿ, ಸುಧಾರಿತ ತಳಿಗಳ ಇಳುವರಿ, ಬಿತ್ತನೆಯ ವಿಧಾನ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ. ಮನೋಜ್‌ ಮಾತನಾಡಿ, ಬಿತ್ತನೆ ಬೀಜಗಳನ್ನು ಜೈವಿಕ ಗೊಬ್ಬರದಿಂದ ಬೀಜೋಪಚಾರ ಮಾಡುವುದರಿಂದ ಅಧಿಕ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ನೆರೆದಿದ್ದ ರೈತರಿಗೆ ನವಣೆ ಬೀಜಗಳನ್ನು ವಿತರಿಸಲಾಯಿತು. ಗ್ರಾಮದ ಪ್ರಗತಿಪರ ರೈತರು ಮತ್ತು ಫಲಾನುಭವಿಗಳು ಭಾಗವಹಿಸಿದ್ದರು.

ಫೋಟೋ 7-ಟಿಪಿಟಿ5: ತಿಪಟೂರು ತಾಲೂಕಿನ ಕೆವಿಕೆ ವತಿಯಿಂದ ಹಮ್ಮಿಕೊಂಡಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ರೈತರಿಗೆ ನವಣೆ ಬೀಜಗಳನ್ನು ವಿತರಿಸಲಾಯಿತು.

ಸಿರಿದಾನ್ಯದಿಂದ ಆರೋಗ್ಯ

 ಶಿರಾ :  ಆಹಾರ ಪದಾರ್ಥಗಳಲ್ಲಿ ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಬಳಸಿದರೆ ಉತ್ತಮ ಆರೋಗ್ಯದಿಂದಿರಲು ಸಾಧ್ಯ. ಇಂದಿನ ಆಹಾರಗಳು ಗುಣಮಟ್ಟದಿಂದ ಇಲ್ಲ. ಆದ್ದರಿಂದ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ನಮ್ಮ ಪೂರ್ವಜರು ಬಳಸುತ್ತಿರುವ ಸಿರಿಧಾನ್ಯಗಳನ್ನು ದಿನ ನಿತ್ಯದ ಆಹಾರದಲ್ಲಿ ಬಳಸಿದರೆ ಆರೋಗ್ಯಕರವಾಗಿರಬಹುದು ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.

ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಜೀನಿ ಹೆಲ್ತಮಿಲೆಟ್‌ ಅವರ ಮತ್ತೊಂದು ಉತ್ಪನ್ನವಾದ ಸಿರಿಧಾನ್ಯಗಳ ಹಾಲಿನ ಸಿರಿ ಉತ್ಪನ್ನ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಿರಾ ತಾಲೂಕಿನಲ್ಲಿ ಯರಗುಂಟೆ ಎಂಬ ಕುಗ್ರಾಮದಿಂದ ದಿಲೀಪ್‌ ಕುಮಾರ್‌ ಅವರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದಂತಹ ಜೀನಿ ಸಿರಿಧಾನ್ಯಗಳ ಉತ್ಪನ್ನವನ್ನು ಪ್ರಸಿದ್ದಿ ಮಾಡಿದ್ದಾರೆ. ಅವರ ಸಾಧನೆ ಇತರರಿಗೆ ಸ್ಪೂರ್ತಿಯಾಗಿದೆ. ಜೀವನದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂಬ ಛಲ, ಶ್ರದ್ಧೆ, ಪ್ರಾಮಾಣಿಕತೆ ಇದ್ದರೆ ಸಾಧನೆ ಸಾಧ್ಯ ಎಂಬುದನ್ನು ತೋರಿಸಿದ್ದಾರೆ ಎಂದ ಅವರು ಕಳೆದ ಬಾರಿ ಕಾಂಗ್ರೆಸ್‌ ಸರಕಾರ ಸಿರಿಧಾನ್ಯಗಳನ್ನು ರೈತರು ಹೆಚ್ಚು ಬೆಳೆಯಬೇಕೆಂದು ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರೋತ್ಸಾಹ ಧನ ನೀಡಿತ್ತು ಎಂದರು.

ಬೆಂಗಳೂರು ಕೃಷಿ ವಿವಿ ನಾಗರಾಜು ಮಾತನಾಡಿ, ದಿಲೀಪ್‌ ಕುಮಾರ್‌ ಅವರು ಒಂದು ಚಿಕ್ಕ ಮನೆಯಲ್ಲಿ ಪ್ರಾರಂಭಿಸಿದ ಸಿರಿಧಾನ್ಯಗಳ ಉತ್ಪನ್ನ ಇಂದು ಆಗಾದಮಟ್ಟದಲ್ಲಿ ಅಭಿವೃದ್ಧಿ ಹೊಂದಿದೆ. ರೈತರು ತಮ್ಮ ಜಮೀನಿನಲ್ಲಿ ಉತ್ತಮ ಬೆಳೆಯನ್ನು ಬೆಳೆಯಿರಿ. ನಿಮಗೆ ಏನಾದರೂ ಮಾರ್ಗದರ್ಶನ ಬೇಕಾದರೆ ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಿ ಎಂದರು.

ಜೀನಿ ಸಂಸ್ಥೆಯ ಮುಖ್ಯಸ್ಥ ದಿಲೀಪ್‌ ಕುಮಾರ್‌ ಮಾತನಾಡಿ, ಜೀನಿ ಉತ್ಪನ್ನವನ್ನು 2017ರಲ್ಲಿ ಪ್ರಾರಂಭಿಸಿದೆವು. ಇಲ್ಲಿಗೆ ಐದು ವರ್ಷಗಳು ಕಳೆದಿವೆ. ನಮ್ಮ ಉತ್ಪನ್ನಗಳು ಎಲ್ಲಾ ಕಡೆಯಲ್ಲೂ ಉತ್ತಮ ಬೇಡಿಕೆ ಇದ್ದು, ಬೇಡಿಕೆಗೆ ತಕ್ಕಂತೆ ನಾವು ಜನರಿಗೆ ನೀಡಲು ಆಗುತ್ತಿಲ್ಲ ಅಷ್ಟುಬೇಡಿಕೆ ಇದೆ. ಇಂದು ಜೀನಿ ಮಿಲೇಟ್‌ ಮಿಲ್‌್ಕ ಪೌಡರ್‌ ಉತ್ಪನ್ನ ಬಿಡುಗಡೆ ಮಾಡಿದ್ದೇವೆ. ನಮ್ಮ ಜೀನಿ ಮನೆ ಮಾತಾಗಲು ನಮ್ಮ ವಿತರಕರೂ ಸಹ ಕಾರಣರಾಗಿದ್ದಾರೆ. ನಮ್ಮೆಲ್ಲಾ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಡಿ.ಎಂ.ಗೌಡ, ಮುಖಂಡರಾದ ಬಾಲೇನಹಳ್ಳಿ ಪ್ರಕಾಶ್‌, ಪಿ.ಬಿ.ನರಸಿಂಹಯ್ಯ, ಹೆಚ್‌.ಎಲ್‌.ರಂಗನಾಥ್‌, ತಿಪ್ಪೇಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

click me!