Wildlife: ನಾಯಿಯನ್ನು ನುಂಗಿದ 13 ಅಡಿ ಉದ್ದದ ಹೆಬ್ಬಾವು!

By Kannadaprabha News  |  First Published Jul 9, 2023, 5:39 AM IST

ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ಸಾರ್ಯ ಗ್ರಾಮದ ಮಾವಿನ ಕುಡಿಗೆಯ ಶ್ರೀಮತಿ ಎಂಬುವರ ಮನೆಯ ಸಮೀಪಕ್ಕೆ ಬಂದ 13 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವು ನಾಯಿಯನ್ನು ನುಂಗಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.


ನರಸಿಂಹರಾಜಪುರ (ಜು.9): ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯ ಸಾರ್ಯ ಗ್ರಾಮದ ಮಾವಿನ ಕುಡಿಗೆಯ ಶ್ರೀಮತಿ ಎಂಬುವರ ಮನೆಯ ಸಮೀಪಕ್ಕೆ ಬಂದ 13 ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವು ನಾಯಿಯನ್ನು ನುಂಗಿದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಶನಿವಾರ ಮಧ್ಯಾಹ್ನ 11.30ರ ಸುಮಾರಿಗೆ ನಾಯಿ ಬೊಗಳುವ ಶಬ್ದ ಮನೆಯವರಿಗೆ ಕೇಳಿದೆ. ನಂತರ ನಾಯಿ ಬೊಗಳುವುದನ್ನು ನಿಲ್ಲಿಸಿದೆ. ಮನೆಯವರು ಹೊರಗಡೆ ಬಂದಾಗ ಮನೆಯಿಂದ 50 ಅಡಿ ದೂರದ ಕಾಲುವೆಯಲ್ಲಿ ಹೆಬ್ಬಾವು ಮಲಗಿತ್ತು. ಹೆಬ್ಬಾವಿನ ಬಾಯಿಯಲ್ಲಿ ನಾಯಿ ಬಾಲ ಮಾತ್ರ ಕಾಣುತ್ತಿತ್ತು. ನಾಯಿಯ ಇಡೀ ದೇಹವನ್ನು ಹೆಬ್ಬಾವು ನುಂಗಿತ್ತು. ತಕ್ಷಣ ಮನೆಯವರು ವನಪಾಲಕ ರಾಘವೇಂದ್ರ ಅವರಿಗೆ ತಿಳಿಸಿದ್ದಾರೆ. ಅರಣ್ಯ ಇಲಾಖೆಯವರು ಕುದುರೆಗುಂಡಿಯ ಉರಗ ತಜ್ಞ ಪಿ.ಜಿ.ಹರೀಂದ್ರ ಅವರನ್ನು ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಹರೀಂದ್ರ ಅವರು ಹೆಬ್ಬಾವಿಗೆ ಪೆಟ್ಟಾಗದಂತೆ ಹಿಡಿದು ಅಭಯಾರಣ್ಯಕ್ಕೆ ಬಿಟ್ಟು ಬಂದಿದ್ದಾರೆ. ಹೆಬ್ಬಾವು ಅಂದಾಜು 60 ರಿಂದ 70 ಕೆಜಿಯಷ್ಟುತೂಕವಿರ ಬಹುದು ಎಂದು ಅಂದಾಜು ಮಾಡಲಾಗಿದೆ.

Latest Videos

undefined

ಓ ಮೈ ಗಾಡ್..! 'ಗೀತಾ' ನಟಿಯ ಮೈ ಮೇಲೆ ಹೆಬ್ಬಾವು ನೋಡಿ ಹೌಹಾರಿದ ಫ್ಯಾನ್ಸ್

ಯಾದಗಿರಿ ಜಿಲ್ಲೆಯಲ್ಲೂ ಹೆಬ್ಬಾವು ದಾಳಿ:

ಕಳೆದ ವಾರ ಯಾದಗಿರಿ ತಾಲೂ​ಕಿನ ಕೊಡಾಲ್‌ ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ಕುರಿಗಾಹಿ ನರಸಪ್ಪ ಪೂಜಾರಿ ಕೊಡಾಲ್‌ ಅವರು ತನ್ನ ಕುರಿಗಳನ್ನು ಮೇಯಿಸುತ್ತಿದ್ದಾಗ ಬೃಹತ್‌ ಗಾತ್ರದ ಹೆಬ್ಬಾವು ಬಂದು ಕುರಿಯನ್ನು ಸುತ್ತಿಕೊಂಡು ಸಾಯಿಸಿರುವ ಘಟನೆ ನಡೆದಿತ್ತು.

ತಾಲೂಕಿನ ಬೆಂಡೆಬೆಂಬಳಿ ಹಾಗೂ ಕೊಡಾಲ್‌ ಗ್ರಾಮಗಳಲ್ಲಿ ಕಳೆದ ಕೆಲವು ದಿನಗಳ ಹಿಂದೆ ಬೆಂಡೆಬೆಂಬಳಿ ಗ್ರಾಮದ ಸಣ್ಣ ಸಿದ್ದಪ್ಪ ರಾಯಕುಂಪಿ ಎಂಬ ವ್ಯಕ್ತಿಯ ಮೂರು ಕುರಿಗಳನ್ನು ಬೆಂಡೆಬೆಂಬಳಿ ಗ್ರಾಮದ ಕೃಷ್ಣಾ ನದಿಯ ತಟದಲ್ಲಿ ಹೆಬ್ಬಾವು ತಿಂದು ಹಾಕಿತ್ತು. ಕೊಡಾಲ್‌ ಗ್ರಾಮದ ಕೃಷ್ಣಾ ನದಿಯ ದಡದಲ್ಲಿ ನರಸಪ್ಪ ಪೂಜಾರಿ ಕೊಡಾಲ್‌ ಅವರ ಕುರಿ​ಯನ್ನು ಹಾವು ತಿನ್ನಬೇಕು ಅಷ್ಟರಲ್ಲಿ ಅಕ್ಕಪಕ್ಕದ ಜನರು ಬಂದ ತಕ್ಷಣ ಗದ್ದಲಕ್ಕೆ ಹೆಬ್ಬಾವು ಹೆದರಿ ಬಿಟ್ಟು ಹೋಗಿತ್ತು.

Vijay Devarakonda : ವಿಜಯ್ ದೇವರಕೊಂಡ ಮೈಮೇಲೆ ಹೆಬ್ಬಾವು: ಫೋಟೋ ವೈರಲ್

click me!