* ರೈತ ಕೃಷಿ ಕಾರ್ಮಿಕರ 2ನೇ ರಾಜ್ಯಮಟ್ಟದ ಸಮ್ಮೇಳನ
* ಎಐಕೆಎಂಎಸ್ ಸಂಘಟನೆ ವತಿಯಿಂದ ನಡೆದ ಸಮ್ಮೇಳನ
* ಆರ್ಥಿಕ ನೀತಿ ಜಾರಿಗೆ ತರುವುದು ಅವಶ್ಯಕವಾಗಿದೆ ಎಂದ ಬರಗೂರು ರಾಮಚಂದ್ರಪ್ಪ
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ, (ಏ.28) : ಧಾರವಾಡದ ಕಡಪಾ ಮೈದಾನದಲ್ಲಿ ರೈತ ಕೃಷಿ ಕಾರ್ಮಿಕರ ರಾಜ್ಯ ಮಟ್ಟದ ಸಮ್ಮೇಳನವನ್ನ ಎಐಕೆಕೆಎಂಎಸ್ ಸಂಘಟನೆಯಿಂದ ನಡೆದ ಬೃಹತ್ ಸಮಾವೇಶದಲ್ಲಿ ರೈತ ಮುಖಂಡ ಬರಗೂರು ರಾಮಚಂದ್ರಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿ, ಬಂಡವಾಳ ಶಾಹಿಗಳ ವಿರುದ್ದ ಕಿಡಿಕಾರಿದರು.
ದೇಶದ ರೈತರು, ಮಹಿಳೆಯರು, ಬಡವರ ಪಾಲಿಗೆ ಅನ್ನ ಮೂಲ ಆರ್ಥಿಕ ನೀತಿ ಜಾರಿಗೆ ತರುವುದು ಅವಶ್ಯಕವಾಗಿದೆ. ಇದು ಬೇರೆ ಯೋಗಿಗಳ ಕಾಲ ಇದು ರೈತರ ಕಷ್ಟಕ್ಕೆ ಆರ್ಥಿಕ ನೀತಿಗಳೇ ಕಾರಣಾಗಿದೆ ಸೈದ್ಧಾಂತಿಕವಾಗಿ ಹೋರಾಟ ನಡೆಯಬೇಕಿದೆ ಸೈದ್ಧಾಂತಿಕವಾಗಿ ದುರ್ಬಲವಾದ ವ್ಯಕ್ತಿಗಳ ವಿರುದ್ಧ ಮಾತನಾಡುತ್ತೇವೆ . ರೈತರು ಕೃಷಿ ಕಾರ್ಮಿಕರ ಹೋರಾಟ ಈ ದೇಶದಲ್ಲಿ ಜಾರಿಗೆ ಬಂದಂತ ಆರ್ಥಿಕ ನೀತಿಗಳ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಯಬೇಕು ಎಂದರು.
Covid Crisis: ಕೋವಿಡ್ ನಿಯಂತ್ರಣಕ್ಕಾಗಿ ಧಾರವಾಡದಲ್ಲಿ ಜೈವಿಕ ಲ್ಯಾಬ್: ಪ್ರಹ್ಲಾದ್ ಜೋಶಿ
24 ಕೋಟಿ 39 ಲಕ್ಷ ಕುಟುಂಬಗಳಿವರ 17 ಕೋಟಿ 90 ಲಕ್ಷ ಜನ ಗ್ರಾಮೀಣ ಜನ ಶೇ 29,30 ರಷ್ಟು ಜನರಿಗೆ ಭೂಮಿ ಇಲ್ಲ ಭೂಮಿ ಇಲ್ಲದವರ ಪರವಾಗಿಯೂ ಹೋರಾಟ ನಡೆಯಬೇಕು ನೀರು ಸಿಗದೇ ಇರುವ ರೈತರ ಪರವಾಗಿ ಹೋರಾಟ ನಡೆಯಬೇಕು ಗ್ರಾಮೀಣ ಭಾಗದ ಜನರ ಪರವಾಗಿ ಆರ್ಥಿಕ ನೀತಿ ಬರದೇ ಇದ್ದರೆ ಎಲ್ಲವೂ ಉಳ್ಳವರ ಪರವಾಗಿ ಹೋಗುತ್ತವೆ ಗ್ರಾಮೀಣ ಭಾಗದ ಆದಾಯ ಶೇ.89 ರಷ್ಟಿದೆ ಶೇ.5 ರಷ್ಟು ರೈತರಿಗೆ,ಬಜೆಟ್ ಗ್ರಾಮೀಣ ಉದ್ಯೋಗ ಖಾತ್ರಿಗೆ ಶೇ.25 ರಷ್ಟು ಅನುದಾನ ಕಡಿತಗೊಳಿಸಲಾಗಿದೆ
ಗ್ರಾಮೀಣಾಭಿವೃದ್ಧಿಗೆ ಶೇ.10-5 ರಷ್ಟು ಅನುದಾನ ಕಡಿತಗೊಳಿಸಿದೆ ಸತ್ಯಕ್ಕೆ ಸಾಕ್ಷಿ ಕೇಳೋ ಕಾಲ ಇದು ಇಂದು ಸುಳ್ಳಿನ ಭರಾಟೆ ನಡೆದಿದೆ ಅನುದಾನ ಕಡಿಮೆಯಾಗಿದೆ. ನಮ್ಮ ಆರ್ಥಿಕ ನೀತಿ ಗ್ರಾಮೀಣರ , ಕೃಷಿಕರ ಬಡವರ ಪರವಾಗಿಲ್ಲ 1952ರಲ್ಲಿಬೇಸಾಯಕ್ಕೆ 12,5 ರಷ್ಟು ಅನುದಾನ ಕೊಡಲಾಗಿದೆ. ಇಂದು ಶೇ.3 ರಷ್ಟೂ ಇಲ್ಲ. ಸ್ವಾತಂತ್ರ್ಯ ನಂತರ ಕೃಷಿಗೆ ಪ್ರಾಧಾನ್ಯತೆ ಸಿಕಿಲ್ಲ ಉದ್ಯಮಪತಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಸಣ್ಣ ಅತೀ ಸಣ್ಣ ರೈತರಿಗೆ ಇಂದು ಸಾಲ ಸಿಗುತ್ತಿಲ್ಲ ನಾವು ವಿರೋಧ ಮಾಡಬೇಕಾಗಿದ್ದು ಸೈದ್ದಾಂತಿಕವಾಗಿ ಬಂಡವಾಳ ಶಾಹಿ ಆರ್ಥಿಕ ನೀತಿ ವಿರುದ್ಧ, ಸಣ್ಣ ಮತ್ತು ಅತೀ ಸಣ್ಣ ರೈತರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಶೇ.74 ರಷ್ಟಯ ಈ ದೇಶದ ಸಂಪತ್ತನ್ನು ಶೇ.1 ರಷ್ಟು ಜನ ಅನುಭವಿಸುತ್ತಿದ್ದಾರೆ ಕೊರೊನಾ ಸಂದರ್ಭದಲ್ಲಿ ಕೋಟ್ಯಾಧಿಪತಿಗಳು 13 ಪಟ್ಟು ಲಾಭ ಪಡೆದರು ಆದರೆ, ನಿಜವಾದ ಬಡವರು ದಾರಿಯಲ್ಲಿ ಬಿದ್ದು ಸತ್ತರು ಶೋಷಿತರು, ಬಡವರಿಗೆ ಕರಳು ಬಳ್ಳಿಯಾಗೋದು ಪ್ರಜಾಪ್ರಭುತ್ವ ಕೋಟ್ಯಾಧಿಪತಿಗಳ ನಿಯಂತ್ರಣದಲ್ಲಿ ಕೋಟ್ಯಾಧಿಪತಿಗಳಿದ್ದಾರೆ ಅನ್ನಮೂಲ ಆರ್ತಿಕ ನೀತಿ ಬಂದರೆ ದೇಶದಲ್ಲಿ ಸಮಾನತೆ ಬರಲು ಸಾಧ್ಯ ಕೃಷಿಕರು, ಮಹಿಳೆಯರು ಬಡವರು ಉಳಿಯಬೇಕಾದರೆ ಈ ನೀತಿ ಬರಬೇಕು ಕನ್ನಮೂಲ ಬಂಡವಾಳ ಶಾಹಿ ಆರ್ಥಿಕ ನೀತಿ ತೊಲಗಬೇಕು ಎಂದರು.
ಇನ್ನು ಸಮಾವೇಶದಲ್ಲಿ ಭಾರತ ಸರಕಾರ , ಮತ್ತು ಬಂಡವಾಳ ಶಾಹಿಗಳ ವಿರುದ್ದ ಸಭೆಯಲ್ಲಿ ಅಥಿತಿಗಳು ಮಾತನಾಡುತ್ತಿದ್ದರು..ರೈತಾಪಿ ವರ್ಗದ ಜನರು ಉರಿಬಿಸಿಲನ್ನು ಲೆಕ್ಕಿಸದೆ ಮಹಿಳೆಯರು ತಲೆಯ ಮೆಲೆ ಸೆರಗನ್ನು ಹಾಕಿಕ್ಕೊಂಡು ಕುಳಿತರೆ ಇನ್ನು ರೈತರು ತಲೆಯ ಮೆಲೆ ಟವೆಲಗಳ ನ್ನ ಹಾಕಿಕ್ಕೊಂಡು ಸಭೆಯಲ್ಲಿ ಭಾಗವಹಿಸಿದ್ದರು..
ರೈತ ಸಮಾವೇಶದಲ್ಲಿ ಅಖಿಲ ಭಾರತ ಎ ಐ ಕೆ ಕೆ ಎಮ್ ಎಸ್ ಅಧ್ಯಕ್ಷ ರಾದ ಕಾಮ್ರೆಡ್ ಸತ್ಯವಾನ್, ರಾಜ್ಯದ್ಯಕ್ಷರಾದ ಡಾ.ಸುನಿತ್ ಕುಮಾರ , ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹೆಚ್ ವಿ ದಿವಾಕರ್ ಭಾಗಿಯಾಗಿದ್ದರು
ಜಲಮಂಡಳಿ ಸಿಬ್ಬಂದಿಗೆ ತಾತ್ಕಾಲಿಕ ಉದ್ಯೋಗ ನೀಡಬೇಕೆಂದು ಆಗ್ರಹ
ಧಾರವಾಡ : ಜಲಮಂಡಳಿಯ ನಿರ್ವಹಣೆ ಕೆಲಸವನ್ನು ಸರ್ಕಾರ ಇದೀಗ ಎಲ್ ಆ್ಯಂಡ್ ಟಿ ಕಂಪನಿಗೆ ವಹಿಸಿದ್ದು, ಮಹಾನಗರ ಪಾಲಿಕೆ ಜಲಮಂಡಳಿ ಸಿಬ್ಬಂದಿಗೆ ತಾತ್ಕಾಲಿಕ ಉದ್ಯೋಗದ ಭರವಸೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆಗ್ರಹಿಸಿದರು.
ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ ಆ್ಯಂಡ್ ಟಿ ಕಂಪನಿ ದೊಡ್ಡ ಕಂಪನಿ ಆದರೆ, ಅದರ ಹೆಸರು ಮಾತ್ರ ದೊಡ್ಡದು. ಕೆಲಸ ಮಾತ್ರ ಶೂನ್ಯ. ಖಾಸಗೀಕರಣದ ಮೂಲಕ ಕಾರ್ಮಿಕರ ಮೇಲೆ ಷಡ್ಯಂತ್ರ ಮಾಡಲಾಗುತ್ತಿದೆ. ಈ ಕಂಪೆನಿ ಗುತ್ತಿಗೆ ಮುಗಿದ ನಂತರವೂ ನಾವು ಉದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ನೀಡುತ್ತೇವೆ ಎಂಬ ಭರವಸೆಯನ್ನು ಮಹಾನಗರ ಪಾಲಿಕೆ ನೀಡಬೇಕು ಎಂದರು ಸದ್ಯ 900 ಕೋಟಿ ರೂಪಾಯಿಯಲ್ಲಿ ಜಲಮಂಡಳಿ ನಿರ್ವಹಣೆ ಸಂಬಂಧ ಟೆಂಡರ್ ಆಗಿದೆ. ಈ ಕಂಪನಿ ಬಂದಾಗಿನಿಂದ ಮೂರು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ಕುಡಿಯುವ ನೀರು ಇದೀಗ ಏಳು ದಿನಕ್ಕೊಮ್ಮೆ ಪೂರೈಕೆಯಾಗುತ್ತಿದೆ. ಈ ನಿರ್ವಹಣೆ ಮೊದಲಿನಂತೆ ಇರಬೇಕು. ಕಂಪನಿಗೆ ಇವರು ಯಾವ ರೀತಿಯ ಭದ್ರತೆ ನೀಡುತ್ತಾರೋ ಅದೇ ರೀತಿ ಕಾರ್ಮಿಕರಿಗೂ ಭದ್ರತೆ ನೀಡಬೇಕು. ಸದ್ಯ 600 ಜನ ಉದ್ಯೋಗಿಗಳ ಕುಟುಂಬ ಬೀದಿಗೆ ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಏನು ಮಾಡುತ್ತಿದ್ದಾರೋ ಗೊತ್ತಿಲ್ಲ. ಈ ಖಾಸಗಿ ಕಂಪೆನಿಗೆ ಟೆಂಡರ್ ಕೊಟ್ಟಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಇನ್ನೂ 225 ಕೋಟಿ ರೂಪಾಯಿ ಕರ ವಸೂಲಿ ಮಾಡುವುದು ಬಾಕಿ ಇದೆ ಪಾಲಿಕೆಯಿಂದ, ಇದನ್ನು ಸರ್ಕಾರ ಮನ್ನಾ ಮಾಡಬೇಕು. ಶೇ.40 ರಷ್ಟು ಕಮೀಷನ್ ಕೊಡುವವರ ಜೊತೆ ಸರ್ಕಾರ ಕೂಡಲೇ ಸಭೆ ನಡೆಸುತ್ತದೆ. ಆದರೆ, ಕಾರ್ಮಿಕರ ಜೊತೆ ಸಭೆ ನಡೆಸುವುದಿಲ್ಲ ಏಕೆಂದರೆ ಅವರ ಬಳಿ ಕಮೀಷನ್ ಕೊಡಲು ಹಣವಿಲ್ಲ. ಚುನಾಯಿತ ಪ್ರತಿನಿಧಿಗಳು ಪಾಲಿಕೆಯಲ್ಲಿ ಇಲ್ಲದೇ ಇರುವುದರಿಂದ ಈ ರೀತಿಯ ಸಮಸ್ಯೆ ಆಗುತ್ತಿದೆ. ಜಲಮಂಡಳಿಯ ಸಿಬ್ಬಂದಿಗೆ ನಾವು ಸರಿಯಾದ ಮಾರ್ಗ ತೋರಿಸುತ್ತೇವೆ. ಅವರ ದಿಕ್ಕು ತಪ್ಪಿಸುವ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.
ಮೇಯರ್, ಉಪಮೇಯರ್ ಚುನಾವಣೆ ನಡೆಸುವಂತೆ ಶೀಘ್ರವೇ ನಾವು ದೊಡ್ಡಮಟ್ಟದಲ್ಲಿ ಪಾದಯಾತ್ರೆ ಕೂಡ ನಡೆಸಲಿದ್ದೇವೆ ಎಂದರು.