* ಯಾರ ಜಟಾಪಟಿನೂ ಅಗತ್ಯತೆ ಇಲ್ಲ
* ಭೂಮಿ ಮೇಲೆ ಜನರು ಇರೋವರೆಗೂ ಕನ್ನಡ ಭಾಷೆ ಇರುತ್ತೆ
• ಸಂಪುಟ ವಿಸ್ತರಣೆ, ಪುನರ್‌ರಚನೆ ಸಿಎಂ ಪರಮಾಧಿಕಾರ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ(ಏ.28): ಹಿಂದಿ(Hindi) ಭಾಷೆ ಹೇರಿಕೆ ಕುರಿತು ಜಟಾಪಟಿ ಶುರುವಾಗಿದ್ದು ಈಗ ಕಿಚ್ಚ ಸುದೀಪ್(Sudeep) ಹಾಗೂ ನಟ ಅಜಯ್ ದೇವಗನ್ (Ajay Devgan) ಮಧ್ಯೆ ನಡೆದ ಟ್ವೀಟ್ ವಿಚಾರದಿಂದ ಬಾಲಿವುಡ್(Bollywood), ಸ್ಯಾಂಡಲ್‌ವುಡ್(Sandalwood) ಅಂಗಲಕ್ಕೂ ಕಾಲಿಟ್ಟಿದೆ.
ಈ ವಿಚಾರವಾಗಿ ಬೆಳಗಾವಿಯಲ್ಲಿ(Belagavi) ಪ್ರತಿಕ್ರಿಯಿಸಿರುವ ಸಚಿವ ಗೋವಿಂದ ಕಾರಜೋಳ(Govind Karjol) ಯಾರ ಜಟಾಪಟಿನೂ ಅಗತ್ಯತೆ ಇಲ್ಲ ಎಂದು ತಿಳಿಸಿದ್ದಾರೆ. 'ದೇಶದಲ್ಲಿ ಆಯಾ ಪ್ರದೇಶ, ರಾಜ್ಯಗಳಲ್ಲಿ ಮಾತೃಭಾಷೆ ಇದೆ. ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ಮಾತೃಭಾಷೆ. ಕನ್ನಡ(Kannada) ಭಾಷೆ ನಮಗೆ ತಾಯಿ ಸಮಾನ. 2500 ಸಾವಿರ ವರ್ಷದಿಂದ ಈ ನಾಡಿನಲ್ಲಿ ಕನ್ನಡ ಉಳಿಸುವ ಬೆಳೆಸುವ ಕೆಲಸ ಅನೇಕರು ಮಾಡಿದ್ದಾರೆ. ಸೂರ್ಯ ಚಂದ್ರ ಇರುವವರೆಗೂ ಕನ್ನಡ ಭಾಷೆ ಇರುತ್ತದೆ. ಭೂಮಿ ಮೇಲೆ ಜನರು ಇರೋವರೆಗೂ ಕನ್ನಡ ಭಾಷೆ ಇರುತ್ತದೆ. ನಮ್ಮನ್ನು ಪರಕೀಯರು 600 ವರ್ಷಗಳ ಕಾಲ ಆಳಿದ್ದಾರೆ. ಬ್ರಿಟಿಷರು, ಮುಸ್ಲಿಮರು, ಪೋರ್ಚುಗೀಸರು ಸೇರಿ ಪರಕೀಯರು ಆಳಿದ್ದಾರೆ. ಆದರೂ ಸಹ ಕನ್ನಡ ಭಾಷೆ ನಶಿಸಿ ಹೋಗಿಲ್ಲ, ಹಿಂದೂ ಧರ್ಮ ನಶಿಸಿ ಹೋಗಿಲ್ಲ. ಹಿಂದೂ ಧರ್ಮ ಮತ್ತು ಮಾತೃ ಭಾಷೆ ಶಾಶ್ವತವಾಗಿ ಇರುತ್ತದೆ' ಎಂದು ತಿಳಿಸಿದ್ದಾರೆ.
Mekedatu Padayatra: ಕಾರಜೋಳಗೆ ಹೋರಾಟ ಮಾಡಿ ಗೊತ್ತಿಲ್ಲ: ಡಿಕೆಶಿ
'ದೆಹಲಿ ಭೇಟಿ ಬಳಿಕ ಸಿಎಂ ಏನು ನಿರ್ಧಾರ ತಗೆದುಕೊಳ್ಳುತ್ತಾರೆ ನೋಡೋಣ'
ಸಂಪುಟ ವಿಸ್ತರಣೆ(Cabinet Expansion) ಚರ್ಚೆ ಬೆನ್ನಲ್ಲೇ ನಾಳೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommao) ದೆಹಲಿ ಪ್ರವಾಸ ಕೈಗೊಳ್ಳುತ್ತಿದ್ದು ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, 'ದೆಹಲಿ ವರಿಷ್ಠರ ಜತೆ ಚರ್ಚೆ ಮಾಡಿ ಬಂದ ಬಳಿಕ ಸಿಎಂ ಏನು ನಿರ್ಧಾರ ತಗೆದುಕೊಳ್ಳುತ್ತಾರೋ ನೋಡೋಣ. ಸಂಪುಟ ಪುನರ್‌ರಚನೆ, ವಿಸ್ತರಣೆ ಸಿಎಂ ಪರಮಾಧಿಕಾರ. ನಾಳೆ ಸಿಎಂ ರಾಷ್ಟ್ರೀಯ ವರಿಷ್ಠರ ಜೊತೆ ಚರ್ಚೆ ಮಾಡಿ ಬರ್ತಾರೆ. ವರಿಷ್ಠರ ಜೊತೆ ಚರ್ಚೆ ಬಳಿಕ ಏನು ನಿರ್ಣಯ ತಗೆದುಕೊಳ್ಳುತ್ತಾರೆ ನೋಡೋಣ. ಮಂತ್ರಿಮಂಡಳ ಪುನರ ರಚನೆ ಆಗಿರಬಹುದು, ವಿಸ್ತರಣೆ ಆಗಿರಬಹುದು ಅದು ಮುಖ್ಯಮಂತ್ರಿ ಪರಮಾಧಿಕಾರ ಆ ಪರಮಾಧಿಕಾರವನ್ನ ಸಿಎಂ ಚಲಾಯಿಸುತ್ತಾರೆ' ಎಂದರು.
ಐದು ಜನರಿಗೆ ಡಿಸಿಎಂ (DCM) ಹುದ್ದೆ ನೀಡುತ್ತಾರೆಂಬ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, 'ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರ ಗಾಳಿ ಸುದ್ದಿ. ಈ ಬಗ್ಗೆ ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ' ಎಂದರು. ಇನ್ನು ಉತ್ತರ ಕರ್ನಾಟಕದಲ್ಲಿ(North Karnataka) ಕಾಂಗ್ರೆಸ್‌ನ(Congress) ಹಲವು ನಾಯಕರು ಬಿಜೆಪಿ(BJP) ಸೇರ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, 'ನನ್ನ ಹತ್ತಿರ ಯಾರೂ ಯಾದಿ ಕೊಟ್ಟಿಲ್ಲ. ಬರುವವರು ಹೋಗುವವರು ಇದ್ದೇ ಇರ್ತಾರೆ. ರಾಜಕೀಯ ಪಕ್ಷ ಅಂದ್ರೆ ಟ್ರೇನ್ ಇದ್ದ ಹಾಗೇ. ಅದು ಮುಂದೇ ಹೋಗ್ತಾ ಇರುತ್ತೆ ಸ್ಟೇಷನ್ ಬಂದಾಗ ಹೊಸಬರು ಹತ್ತುತ್ತಾರೆ, ಹಳಬರು ಇಳೀತಾರೆ.ಆ ರೀತಿ ಹತ್ತುವವರು ಇಳಿಯುವವರು ಇದ್ದೇ ಇರ್ತಾರೆ' ಎಂದು ತಿಳಿಸಿದ್ದಾರೆ.
ನನ್ನ ಬಗ್ಗೆ ಮಾತನಾಡೋವಾಗ ಎಚ್ಚರಿಕೆಯಿಂದ ಮಾತನಾಡಿ: ಕಾಂಗ್ರೆಸ್ ವಿರುದ್ಧ ಕಾರಜೋಳ ಗರಂ
ಕುಡಿಯುವ ನೀರಿನ ಸಮಸ್ಯೆ ಎಲ್ಲೇ ಇದ್ದರೂ ಪರಿಹಾರಕ್ಕೆ ಸೂಚನೆ
ಕುಡಿಯುವ ನೀರು ಸರಬರಾಜು ಜವಾಬ್ದಾರಿಯನ್ನು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆಗೆ ವಹಿಸಿಕೊಟ್ಟಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 'ಕುಡಿಯುವ ನೀರಿನ ಸಮಸ್ಯೆ ಎಲ್ಲಿಯೇ ಇದ್ದರೂ ಪರಿಹಾರ ಮಾಡಲು ಸೂಚನೆ ಕೊಡ್ತೀನಿ. ಜಲಾಶಯಗಳಲ್ಲಿ ಬೇಸಿಗೆ ಕಾಲಕ್ಕೆ ಬೇಕಾಗುವಷ್ಟು ನೀರು ಹಿಡಿದಿಟ್ಟಿದ್ದೇವೆ. ಹಿಡಕಲ್, ನಾರಾಯಣಪುರ, ಆಲಮಟ್ಟಿ, ಹಿಪ್ಪರಗಿ ಜಲಾಶಯದಲ್ಲಿ ನೀರು ಸಂಗ್ರಹವಿದೆ. ಹೀಗೆ ರಾಜ್ಯದ ಬೇರೆಬೇರೆ ಜಲಾಶಯಗಳಲ್ಲಿ ನೀರನ್ನ ಸಂಗ್ರಹಿಸಿ ಇಡಲಾಗಿದೆ. ಅವಶ್ಯಕತೆ ಇದ್ದಾಗ ಜಲಾಶಯಗಳಿಂದ ಕುಡಿಯಲು ನೀರು ಕೊಡ್ತಿವಿ. ಬೇಸಿಗೆ ಕಾಲದಲ್ಲಿ ಕುಡಿಯಲು ಮಾತ್ರ ನೀರು ಕೊಡ್ತಿವಿ. ಬೇಸಿಗೆ ಕಾಲದಲ್ಲಿ ಬೆಳೆಗೆ ನೀರು ಕೊಡಲು ಆಗುವುದಿಲ್ಲ' ಎಂದು ತಿಳಿಸಿದ್ದಾರೆ
'ತನಿಖೆ ಹಂತದಲ್ಲಿರುವಾಗ ಮೂಗು ತೂರಿಸಲು ಹೋಗಲ್ಲ'
ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ(Santosh Patil Suicide Case) ವಿಚಾರವಾಗಿ 'ಸರ್ಕಾರದ ಮಂತ್ರಿಯಾಗಿ ವಿಚಾರಣೆ, ತನಿಖೆ ಹಂತದಲ್ಲಿ ಮೂಗು ತೂರಿಸಲು ಹೋಗಲ್ಲ' ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ. ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣದ ವಿಚಾರಣೆ ಮುಗಿದ ಬಳಿಕ ಸುದ್ದಿಗೋಷ್ಠಿ ಮಾಡಿ ತಿಳಿಸುವೆ ಎಂದು ತಿಳಿಸಿದ್ದಾರೆ.