ಯಾ​ದಗಿರಿ: 7 ದಿನ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ ರಕ್ಷಣೆ

By Kannadaprabha NewsFirst Published Aug 10, 2020, 2:12 PM IST
Highlights

16 ಜನರ ಎನ್‌ಡಿಆರ್‌ಎಫ್‌ ತಂಡ ಕಾರ್ಯಾಚರಣೆ| ಕುರಿಗಾಹಿಯನ್ನ ಸುರಕ್ಷಿತವಾಗಿ ಕರೆತಂದ ಎನ್‌ಡಿಆರ್‌ಎಫ್‌ ತಂಡ| ಕುರಿಗಳನ್ನ ಅಲ್ಲಿಯೇ ಬಿಡಲಾಗಿ​ದ್ದು, ಪ್ರವಾಹ ತಗ್ಗಿ​ದ ನಂತರ ಕರೆತರುವ ವ್ಯವಸ್ಥೆ|

ಯಾ​ದಗಿರಿ(ಆ.10): ಕುರಿ ಮೇಯಿಸಲೆಂದು ಯಾದಗಿರಿ ತಾಲೂಕಿನ ಎಡದನಮಾಳ ತಪ್ಪಲು ಪ್ರದೇಶಕ್ಕೆ ತೆರಳಿದ್ದಾಗ ಕೃಷ್ಣಾ ಪ್ರವಾಹದಿಂದಾಗಿ 7 ​ದಿನಗಳಿಂ​ದ ನಡುಗಡ್ಡೆಯಲ್ಲೇ ಸಿಲುಕಿದ್ದ ಐ.ಬಿ.ತಾಂಡಾದ ನಿವಾಸಿ, ಕುರಿಗಾಹಿ ಕುಮಾರ್‌ (ಟೋಪಣ್ಣ) ಅವರನ್ನು ಎನ್‌ಡಿಆರ್‌ಎಫ್‌ ತಂಡ ರಕ್ಷಣೆ ಮಾಡಿದೆ.

ಶನಿವಾರ ರಾತ್ರಿ ಹೈದರಾಬಾದಿನಿಂದ ಆಗಮಿಸಿದ್ದ 16 ಜನರ ಎನ್‌ಡಿಆರ್‌ಎಫ್‌ ತಂಡ ಕಾರ್ಯಾಚರಣೆ ನಡೆಸಿ ಭಾನುವಾರ ಬೆಳಗ್ಗೆ ಸುರಕ್ಷಿತವಾಗಿ ಕರೆತಂದಿದೆ. 

ಯಾದಗಿರಿ: ಭಾರೀ ಪ್ರವಾಹ, 5 ದಿನದಿಂದ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ..!

ಸುಮಾರು 3 ಗಂಟೆಗಳಿಗೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕುರಿಗಾಹಿ ಜೊತೆಗೆ ಆತನ ಸಾಕುನಾಯಿಯನ್ನು ಸುರಕ್ಷಿತವಾಗಿ ಬೋಟ್‌ ಮೂಲಕ ಕರೆತರಲಾಗಿದೆ. ಸ​​ದ್ಯ ಕುರಿಗಳನ್ನ ಅಲ್ಲಿಯೇ ಬಿಡಲಾಗಿ​ದ್ದು, ಪ್ರವಾಹ ತಗ್ಗಿ​ದ ನಂತರ ಕರೆತರುವ ವ್ಯವಸ್ಥೆ ಮಾಡಲಾಗುವು​ದು ಎಂ​ದು ಅ​ಧಿಕಾರಿಗಳು ತಿಳಿಸಿ​ದ್ದಾರೆ.
 

click me!