ಹೊಸಪೇಟೆ: ತುಂಗಭದ್ರಾ ಡ್ಯಾಂಗೆ ಒಂದೇ ದಿನ 9 ಟಿಎಂಸಿ ನೀರು..!

By Kannadaprabha News  |  First Published Aug 10, 2020, 1:15 PM IST

ತುಂಗಭದ್ರಾ ಜಲಾಶಯಕ್ಕೆ 1,08915 ಕ್ಯುಸೆಕ್‌ ನೀರು| ಒಂದೇ ದಿನ ಜಲಾ​ಶ​ಯಕ್ಕೆ 9 ಟಿಎಂಸಿ ನೀರು ಹರಿ​ದು​ಬಂತು| ಈಗಾಗಲೇ ಅರ್ಧ ಜಲಾಶಯಕ್ಕೂ ಹೆಚ್ಚು ನೀರು ಸಂಗ್ರಹ| ಕಳೆದ ವರ್ಷಕ್ಕಿಂತ ಈ ವರ್ಷ ಜಲಾಶಯಕ್ಕೆ ಹರಿದು ಬರುತ್ತಿರುವ ನೀರು ಕಡಿಮೆ| ಕಳೆದ ವರ್ಷ ಇಂದಿನ ದಿನಗಳಲ್ಲಿ 72.805 ಟಿಎಂಸಿ ನೀರು ಹರಿದು ಬಂದಿತ್ತು| ಈಗ 63.102 ಟಿಎಂಸಿ ನೀರು ಸಂಗ್ರಹ| ಕಳೆದ ವರ್ಷಕ್ಕಿಂತ 9 ಟಿಎಂಸಿ ನೀರು ಕಡಿಮೆ|


ಹೊಸಪೇಟೆ(ಆ.10): ಭಾನುವಾರ ಸಹ ಮತ್ತೆ ತುಂಗಭದ್ರಾ ಜಲಾಶಯಕ್ಕೆ 1,08915 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ಇದುವರೆಗೂ 63.102 ಟಿಎಂಸಿ ನೀರು ಸಂಗ್ರಹವಾಗಿದೆ. ಶನಿವಾರ ಒಂದೇ ದಿನ ಸುಮಾರು 9 ಟಿಎಂಸಿ ಜಲಾಶಯಕ್ಕೆ ಹರಿದು ಬಂದಿದೆ.

ಈಗಾಗಲೇ ಅರ್ಧ ಜಲಾಶಯಕ್ಕೂ ಹೆಚ್ಚು ನೀರು ಸಂಗ್ರಹವಾಗಿದೆ. ಆದರೂ ಕಳೆದ ವರ್ಷಕ್ಕಿಂತ ಈ ವರ್ಷ ಜಲಾಶಯಕ್ಕೆ ಹರಿದು ಬರುತ್ತಿರುವ ನೀರು ಕಡಿಮೆಯಾಗಿದೆ. ಕಳೆದ ವರ್ಷ ಇಂದಿನ ದಿನಗಳಲ್ಲಿ 72.805 ಟಿಎಂಸಿ ನೀರು ಹರಿದು ಬಂದಿತ್ತು. ಆದರೆ ಈಗ 63.102 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ 9 ಟಿಎಂಸಿ ನೀರು ಕಡಿಮೆಯಾಗಿದೆ.

Latest Videos

undefined

ಭಾನುವಾರ ಜಲಾಶಯದಿಂದ 9357 ಕ್ಯುಸೆಕ್‌ ನೀರು ಹೊರ ಹೋಗುತ್ತಿದೆ. ಕಳೆದ ಮೂರುನಾಲ್ಕು ದಿನಗಳಿಂದ ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಜಲಾಶಯದ ಜಲಾನಯದ ಪ್ರದೇಶದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಮತ್ತು ತುಂಗ ಜಲಾಶಯ ಭರ್ತಿಯಾಗಿ ಹೆಚ್ಚಾದ ನೀರು ಹರಿದು ಬರುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಕಳೆದ ಎರಡು ದಿನಗಳಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಹರಿದು ಬರುತ್ತಿದೆ. ಇದೇ ರೀತಿಯಲ್ಲಿ ಕಳೆದ ನಾಲ್ಕೈದು ದಿನಗಳಲ್ಲಿ ಜಲಾಶಯಕ್ಕೆ ಬರುವ ನೀರು ದಿನದಿನಕ್ಕೂ ಹೆಚ್ಚಾಗುತ್ತಿದೆ.

ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಒಂದೇ ದಿನ ಲಕ್ಷ ಕ್ಯುಸೆಕ್‌ ನೀರು..!

ಶನಿವಾರ ತುಂಗಭದ್ರಾ ಜಲಾಶಯಕ್ಕೆ 1,01002 ಕ್ಯುಸೆಕ್‌ ನೀರು ಹರಿದು ಬಂದಿತ್ತು. ನಿನ್ನೆ 54.521 ಟಿಎಂಸಿ ನೀರು ಜಲಾಶಯದಲ್ಲಿ ಸಂಗ್ರಹವಾಗಿತ್ತು. ಆದರೆ ಭಾನುವಾರಕ್ಕೆ ತುಂಗಭದ್ರಾ ಜಲಾಶಯಕ್ಕೆ ಶನಿವಾರಕ್ಕೆ 1,08915 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ಈಗ 63.102 ಟಿಎಂಸಿ ನೀರು ಸಂಗ್ರಹವಾಗಿದೆ.

ಕಳೆದ ವರ್ಷ ಇಂದಿನ ದಿನಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ 142114 ಕ್ಯುಸೆಕ್‌ ನೀರು ಹರಿದು ಬರುತ್ತಿತ್ತು. ಆಗ 3931 ಕ್ಯುಸೆಕ್‌ ನೀರು ಜಲಾಶಯದಿಂದ ಹೊರ ಹೋಗುತ್ತಿತ್ತು. ಆಗ ಜಲಾಶಯದಲ್ಲಿ 72.805 ಟಿಎಂಸಿ ನೀರು ಮಾತ್ರ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿತ್ತು.
 

click me!