30 ವರ್ಷ ದಾಟಿದರೂ ಮದುವೆಯಾಗದ ಹಿನ್ನೆಲೆ ದೇವರ ಮೊರೆ ಹೋಗಿರುವ ಅವಿವಾಹಿತರು "ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ" ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಾದಪ್ಪನ ದರ್ಶನಕ್ಕೆ ಹೊರಟಿದ್ದಾರೆ.
ಮಂಡ್ಯ (ಫೆ.12): 30 ವರ್ಷ ದಾಟಿದರೂ ಮದುವೆಯಾಗದ ಹಿನ್ನೆಲೆ ದೇವರ ಮೊರೆ ಹೋಗಿರುವ ಅವಿವಾಹಿತರು "ಬ್ರಹ್ಮಚಾರಿಗಳ ನಡೆ ಮಹದೇಶ್ವರ ಬೆಟ್ಟದ ಕಡೆ" ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಾದಪ್ಪನ ದರ್ಶನಕ್ಕೆ ಹೊರಟಿದ್ದಾರೆ. ಫೆ.23 ರಂದು ಮಂಡ್ಯದ ಕೆಎಂ ದೊಡ್ಡಿಯಿಂದ ಶೀಘ್ರ ವಧು ಸಿಗಲೆಂದು ಪ್ರಾರ್ಥಿಸಿ 200ಕ್ಕೂ ಹೆಚ್ಚು ಬ್ರಹ್ಮಚಾರಿಗಳು ಪಾದಯಾತ್ರೆ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ಮಂಡ್ಯ, ಮೈಸೂರು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಯುವಕರು ಈ ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಮೂರು ದಿನಗಳ ಕಾಲ ಪಾದಯಾತ್ರೆ ಮೂಲಕ ಮಹದೇಶ್ವರ ಬೆಟ್ಟಕ್ಕೆ ಪಯಣ ಬೆಳೆಸಲಿದ್ದು, ಕೆಎಂ ದೊಡ್ಡಿ, ಮಳವಳ್ಳಿ, ಕೊಳ್ಳೆಗಾಲ, ಹನೂರು ಮಾರ್ಗವಾಗಿ ಯುವಕರು ಮಹದೇಶ್ವರ ಬೆಟ್ಟ ತಲುಪಲಿದ್ದಾರೆ.
ಸಿಂಗಲ್ ಹುಡುಗರಿಗೆ ಶಾಕ್, ಶೇ.81ರಷ್ಟು ಹುಡುಗಿಯರಿಗೆ ಮದ್ವೇನೆ ಇಷ್ಟ ಇಲ್ವಂತೆ!
ಇನ್ನು ಪಾದಯಾತ್ರೆಯಲ್ಲಿ ಭಾಗವಹಿಸುವ ಯುವಕರಿಗೆ ಆಯೋಜಕರಿಂದ 3 ಷರತ್ತು ವಿಧಿಸಲಾಗಿದೆ. ಅದೇನೆಂದರೆ ಯುವಕರು ಕಡ್ಡಾಯವಾಗಿ 30 ವರ್ಷ ದಾಟಿರಬೇಕು. ವಿವಾಹಿತರಿಗೆ ಅವಕಾಶ ಇಲ್ಲ. ನಿಶ್ಚಿತಾರ್ಥ ಆದವರೂ ಕೂಡ ಪಾದಯಾತ್ರೆಗೆ ಬರುವಂತಿಲ್ಲ. ಅವಿವಾಹಿತರನ್ನು ಸಂಘಟಿಸಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಶಿವಪ್ರಸಾದ್, ವೆಂಕಟೇಶ್ ನೇತೃತ್ವದಲ್ಲಿ ಪಾದಯಾತ್ರೆ ಆಯೋಜನೆ ಮಾಡಲಾಗಿದೆ.
ವಯಸ್ಸು 50 ಆಯಿತು, ಈಗ ಬೆಂಬಿಡದೇ ಕಾಡುತ್ತಿದೆ ಒಂಟಿತನ, ಏನ್ಮಾಡಲಿ?