ಶಿವಮೊಗ್ಗ: ಅಯ್ಯಪ್ಪನ ಸನ್ನಿಧಿಗೆ ಅಕ್ಕಿ ದಾನ ಮಾಡಿದ ಬಿ.ಎಲ್‌. ಸಂತೋಷ್

By Girish Goudar  |  First Published Nov 27, 2022, 12:47 PM IST

SASS ವತಿಯಿಂದ ಸಂಗ್ರಹವಾದ ಅಕ್ಕಿ ಸಂಗ್ರಹ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿಯ ರಾಷ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್


ಶಿವಮೊಗ್ಗ(ನ.27):  ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಅವರು ಅಯ್ಯಪ್ಪನ ಸನ್ನಿಧಿಗೆ ಅಕ್ಕಿ ದಾನ ಮಾಡಿದ್ದಾರೆ. ಶಿವಮೊಗ್ಗ ನಗರದ ಜನತೆಯಿಂದ ಶಬರಿಮಲೈ ಅಯ್ಯಪ್ಪನ ಸನ್ನಿದಾನದಲ್ಲಿ  ನಡೆಯುವ ಅನ್ನದಾನಕ್ಕಾಗಿ ಅಕ್ಕಿ ಸಂಗ್ರಹವಾಗಿದೆ.  SASS ವತಿಯಿಂದ ಸಂಗ್ರಹವಾದ ಅಕ್ಕಿ ಸಂಗ್ರಹ ಸ್ಥಳಕ್ಕೆ ಬಿಜೆಪಿಯ ರಾಷ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್ ಅವರು ಭೇಟಿ ನೀಡಿದ್ದರು. 

ಬಳಿಕ ಗೋಂಧಿ ಚಟ್ಟಹಳ್ನಿ ಶ್ರೀ ಮಹೇಶ್ವರ ಸಮುದಾಯ ಭವನಕ್ಕೂ ಭೇಟಿ ನೀಡಿದ್ದಾರೆ. ಈ ಬೃಹತ್ ಕಾರ್ಯಕ್ಕೆ ಸಂತೋಷ್ ಅವರು ಅಕ್ಕಿ ನೀಡುವ ಮೂಲಕ ಶುಭಾಶಯ ಸಲ್ಲಿಸಿದ್ದಾರೆ.

Tap to resize

Latest Videos

ಬಿಜೆಪಿ ಟಿಕೆಟ್‌ಗಾಗಿ ಲಾಬಿ ಬೇಡ: ಬಿ.ಎಲ್‌.ಸಂತೋಷ

ಸಂತೋಷ್‌ ವಿಚಾರಣೆಗೆ ತಡೆ

ಹೈದರಾಬಾದ್‌: ನಾಲ್ವರು ಟಿಆರ್‌ಎಸ್‌ ಶಾಸಕರನ್ನು ಖರೀದಿಸಲು ಸಂಚು ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ಡಿ.5ರವ​ರೆ​ಗೆ ವಿಚಾರಣೆ ನಡೆಸದಂತೆ ತೆಲಂಗಾಣ ಹೈಕೋರ್ಟ್‌ ತಡೆ ನೀಡಿ​ದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀ​ಚಿನ ಹೈಕೋರ್ಟ್‌ ನಿರ್ದೇಶನದ ಬಳಿಕ ತೆಲಂಗಾಣ ಎಸ್‌​ಐಟಿ ಪೊಲೀಸರು, ಸಂತೋಷ್‌ ಅವ​ರಿ​ಗೆ ನ.26 ಅಥವಾ 28ರಂದು ವಿಚಾರಣೆಗೆ ಹಾಜರಾಗುವಂತೆ 2ನೇ ಬಾರಿ ನೋಟಿಸ್‌ ಜಾರಿ ಮಾಡಿದ್ದರು. ಈ ಬೆನ್ನಲ್ಲೇ ಹೈಕೋರ್ಚ್‌ಗೆ ಮನವಿ ಸಲ್ಲಿಸಿದ್ದ ಸಂತೋಷ್‌ ಅವರು, ಗುಜರಾತ್‌ ಚುನಾವಣಾ ಕಾರ್ಯಗಳಲ್ಲಿ ನಿರತರಾಗಿರುವುದರಿಂದ ವಿಚಾರಣೆಗೆ ಹಾಜರಾಗಲು ಸೂಚಿಸಿರುವ ದಿನಾಂಕಗಳಲ್ಲಿ ಸಾಧ್ಯವಿಲ್ಲ ಎಂದು ತಿಳಿಸಿದ್ದರು ಎನ್ನ​ಲಾ​ಗಿ​ದೆ. ಈ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್‌ ಡಿ.5ರವರೆಗೆ ವಿಚಾರಣೆ ನಡೆಸದಂತೆ ಎಸ್‌​ಐ​ಟಿಗೆ ಸೂಚಿ​ಸಿ​ದೆ.
 

click me!