ರಾಷ್ಟ್ರೀಯ ಸ್ವಚ್ಚ ಗಾಳಿ ಸಮೀಕ್ಷೆ ವರದಿ ಪ್ರಕಟ, ಬೆಂಗಳೂರಿಗರು ಉಸಿರಾಡುವ ಗಾಳಿಗೆ ಎಷ್ಟನೇ ಸ್ಥಾನ?

Published : Nov 18, 2026, 11:22 AM IST
Bengaluru Air Pollution

ಸಾರಾಂಶ

ರಾಷ್ಟ್ರೀಯ ಸ್ವಚ್ಚ ಗಾಳಿ ಸಮೀಕ್ಷೆ ವರದಿ ಪ್ರಕಟಗೊಂಡಿದೆ. 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ ನಗರಗಳ ಮೇಲೆ ಸಮೀಕ್ಷೆ ನಡೆಸಲಾಗಿದೆ. ಬೆಂಗಳೂರು ಉದ್ಯಾನ, ಮರ ಗಿಡಿಗಳಿಂದ ತುಂಬಿದ್ದರೂ ಸ್ವಚ್ಚಗಾಳಿಯಲ್ಲಿ ಹಲವು ನಗರಗಳ ಹಿಂದಿದೆ. ಬೆಂಗಳೂರು ಜನ ಉಸಿರಾಡೋ ಗಾಳಿ ಸ್ವಚ್ಚವಾಗಿದೆಯಾ?

ಬೆಂಗಳೂರು (ನ.18) ವಾಯು ಮಾಲಿನ್ಯ ಎಂದ ತಕ್ಷಣ ದೆಹಲಿ ಕಡೆ ಕೈ ತೋರಿಸುತ್ತೇವೆ. ಇಷ್ಟೇ ಅಲ್ಲ ಬೆಂಗಳೂರು ಇತರ ನಗರಗಳಿಂದ ಸೇಫ್ ಎಂದು ಸಮಾಧಾನ ಪಟ್ಟುಕೊಳ್ಳುತ್ತೇವೆ. ಆದರೆ ನಾವು ಅಂದುಕೊಂಡ ರೀತಿ ಬೆಂಗಳೂರಿನ ವಾಯು ಸ್ವಚ್ಚವಾಗಿಲ್ಲ. ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದವಾವಣೆ ಸಚಿವಾಲಯ ಸ್ವಚ್ಚ ವಾಯು ಸರ್ವೇಕ್ಷಣಾ 2026ರ ಸಮೀಕ್ಷೆಯಲ್ಲಿ ಅಚ್ಚರಿ ಫಲಿತಾಂಶ ಹೊರಬಂದಿದೆ. 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಉಸಿರಾಡುವ ಗಾಳಿ ಸ್ವಚ್ಚವಾಗಿದೆಯಾ ಅನ್ನೋ ಕುರಿತು ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಉತ್ತರ ಪ್ರದೇಶದ ಲಖನೌ ಮೊದಲ ಸ್ಥಾನದಲ್ಲಿದೆ.

ಬೆಂಗಳೂರಿನ ಗಾಳಿಗೆ ಎಷ್ಟನೇ ಸ್ಥಾನ?

ಸ್ವಚ್ಚ ಗಾಳಿ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಬೆಂಗಳೂರು 32ನೇ ಸ್ಥಾನ ಪಡೆದಿದೆ. ಉಸಿರಾಡಲು ಉತ್ತಮ ಗಾಳಿ ಬೆಂಗಳೂರಲ್ಲಿದೆ ಎಂದು ಸಮಾಧಾನ ಪಟ್ಟುಕೊಂಡಿದ್ದ ಹಲವರಿಗೆ ಈ ವರದಿ ಆಘಾತ ನೀಡಿದೆ. ಕಾರಣ ಬೆಂಗಳೂರುಗಿಂತ ಹೈದರಾಬಾದ್, ಹಳೇ ದಹೆಲಿ, ನವಿ ಮುಂಬೈ, ಭೋಪಾಲ್, ಅಹಮ್ಮದಬಾದ್ ಸೇರಿದಂತೆ ಹಲವು ನಗರಗಳು ಮುಂದಿದೆ. ಬೆಂಗಳೂರಿನಲ್ಲಿ ಸ್ವಚ್ಚ ಗಾಳಿ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಬೆಂಗಳೂರಿನಲ್ಲಿ ಉಸಿರಾಟದ ದಾಳಿ ವಿಷವಾಗುತ್ತಿದೆ.

ಭಾರತದ ಒಟ್ಟು 48 ನಗರಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ ಪೈಕಿ ಬೆಂಗಳೂರಿಗೆ 32ನೇ ಸ್ಥಾನ ಲಭ್ಯವಾಗಿದೆ. ಚೆನ್ನೈ, ಕೋಲ್ಕತಾ, ಮಧುರೈ ಸೇರಿದಂತೆ ಕೆಲವೇ ಕೆಲವು ನಗರಗಳಿಂದ ಬೆಂಗಳೂರು ಮುಂದಿದೆ. ಬೆಂಗಳೂರಿನ ಸ್ವಚ್ಚ ಗಾಳಿ ಪ್ರಮಾಣ 152.6.

ಬೆಂಗಳೂರಿನ ವಾರ್ಡ್ ಪೈಕಿ ಕೊರಮಂಗಲ ಸ್ವಚ್ಚ

ಬೆಂಗಳೂರಿನಲ್ಲಿ ಸ್ವಚ್ಚ ಪ್ರದೇಶ ಯಾವುದು? ಈ ಕುರಿತು ಪ್ರಶ್ನೆಗೂ ಉತ್ತರ ಸಿಕ್ಕಿದೆ ಕೋರಮಂಗಲ ವಾರ್ಡ್ ಬೆಂಗಳೂರಿನ ಪೈಕಿ ಸ್ವಚ್ಚ ವಾರ್ಡ್ ಎಂದು ಘೋಷಿಸಿದೆ. ಕೋರಮಂಗಲ ಹಾಗೂ ಸುತ್ತ ಮುತ್ತಲಿನ ಜನರಿಗೆ ಇತರೆಡೆ ಇರುವ ಮಂದಿಗಿಂತ ಕೊಂಚ ಉತ್ತಮ ಗಾಳಿ ಲಭ್ಯವಿದೆ.

ಯಾವ ವರ್ಷ ಎಷ್ಟೆಷ್ಟು?

- 2025ರಲ್ಲಿ 36ನೇ ಸ್ಥಾನ, 145.1 ಅಂಕ ಗಳಿಸಿತ್ತು.

- 2024ರಲ್ಲಿ 28ನೇ ಸ್ಥಾನದಲ್ಲಿತ್ತು.

- 2023ರಲ್ಲಿ 25ನೇ ಸ್ಥಾನದಲ್ಲಿತ್ತು.

2023ರಿಂದ 2024 ವರೆಗೆ ಬೆಂಗಳೂರಿನಲ್ಲಿ ಗಾಳಿ ಸುಧಾರಣೆ ಕಂಡಿತ್ತು. ಆಧರೆ 2025ರಲ್ಲಿ 145.1 ಅಂಕ ಗಳಿಸಿ 36ನೇ ಸ್ಥಾನಕ್ಕೆ ಕುಸಿದಿತ್ತು. 2026ರಲ್ಲಿ ಕೊಂಚ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನಲ್ಲಿ ಆತಂಕ ಹೆಚ್ಚುತ್ತಿದೆ. ಹೆಚ್ಚುತ್ತಿರುವ ವಾಹನ, ಕಾಮಗಾರಿ, ಕಳಪೆ ರಸ್ತೆ, ಧೂಳುಗಳಿಂದ ಬೆಂಗಳೂರು ಮಲಿನಗೊಳ್ಳುತ್ತಿದೆ.

ಬೆಂಗಳೂರು ಗಾಳಿ ವಿಷ ಆಗೋಕೆ ಕಾರಣ ಏನು?

- ವಾಹನಗಳ ಹೊಗೆ: ಹೆಚ್ಚುತ್ತಿರುವ ಖಾಸಗಿ ವಾಹನಗಳು, ಹಳೆಯ ಡೀಸೆಲ್ ವಾಹನಗಳು.

- ರಸ್ತೆ ಧೂಳು: ಹದಗೆಟ್ಟ ರಸ್ತೆಗಳು, ಮಣ್ಣಿನ ಧೂಳು ಮತ್ತು ರಸ್ತೆ ಕಾಮಗಾರಿಗಳು.

- ನಿರ್ಮಾಣ ಕಾಮಗಾರಿಗಳು: ಕಟ್ಟಡ ನಿರ್ಮಾಣ ಮತ್ತು ಧ್ವಂಸ ಕಾರ್ಯಗಳಿಂದ ಧೂಳಿನ ಕಣಗಳು.

- ಕಟ್ಟಡ ತ್ಯಾಜ್ಯ: ನಿರ್ಮಾಣ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು.

- ಕಸ ಸುಡುವಿಕೆ: ಖಾಲಿ ಜಾಗಗಳಲ್ಲಿ ಕಸಕ್ಕೆ ಬೆಂಕಿ ಹಾಕುವುದು.

- ಕೈಗಾರಿಕಾ ಮಾಲಿನ್ಯ: ಕೈಗಾರಿಕೆಗಳಿಂದ ಹೊರಬರುವ ಹೊಗೆ ಮತ್ತು ಮಾಲಿನ್ಯಕಾರಕಗಳು.

- ಟ್ರಾಫಿಕ್ ದಟ್ಟಣೆ: ವಾಹನಗಳು ದೀರ್ಘಕಾಲ ಒಂದೇ ಸ್ಥಳದಲ್ಲಿ ನಿಂತಿರುವುದರಿಂದ ಹೊಗೆ ಪ್ರಮಾಣ ಹೆಚ್ಚಳ..

PREV
Read more Articles on
click me!

Recommended Stories

ದಕ್ಷಿಣ ಕನ್ನಡ ಪಾಣೆಮಂಗಳೂರು ಬಳಿ ನಡೆದಿದ್ದ ₹8.35 ಲಕ್ಷ ದರೋಡೆ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್
ಅಂತೂ ಇಂತೂ ಕಾಯುವಿಕೆ ಅಂತ್ಯ, ಬರೋಬ್ಬರಿ 15 ವರ್ಷಗಳ ಬಳಿಕ ಜಕ್ಕೂರು ರೈಲ್ವೆ ಮೇಲ್ಸೇತುವೆ ನ.18ರಂದು ಲೋಕಾರ್ಪಣೆ!