ಆದಿವಾಸಿಗಳು ಈ ಸಮಾಜಕ್ಕೆ ಆರ್ಯುವೇದಿಕ್ ಔಷಧಗಳು, ಜಡಿಬುಟಿಗಳು ಮಾಡಿಕೊಂಡು ಜನರ ಆರೋಗ್ಯ ಕಾಪಾಡುವಲ್ಲಿ ತಮ್ಮದೆ ಆದ ಕೊಡುಗೆ ನೀಡುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ನಮ್ಮ ಸರ್ಕಾರ ಆದಿವಾಸಿಗಳಿಗೆ, ದೀನದಲಿತರಿಗೆ, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದೂಳಿದ ವರ್ಗದವರ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ: ಕೇಂದ್ರ ಸಚಿವ ಭಗವಂತ ಖೂಬಾ
ಬೀದರ್(ಸೆ.29): ದೇಶದ ಆದಿವಾಸಿಗಳಿಗೆ ಗೌರವಿಸುವ ಕೆಲಸ ನಮ್ಮ ಮೋದಿ ಸರ್ಕಾರ ಮಾಡಿದೆ. ಸ್ವಾತಂತ್ರ್ಯ ಭಾರತಕ್ಕಾಗಿ ಆದಿವಾಸಿಗಳು ನೀಡಿರುವ ಕೊಡುಗೆಯೂ ನಮ್ಮ ಸರ್ಕಾರ ಗೌರವಿಸುತ್ತಿದೆ. ದೇಶದ ಆದಿವಾಸಿಗಳ ಅಭಿವೃದ್ಧಿಗೆ ಹಲವಾರು ಯೋಜನೆಗಳು ಜಾರಿಗೆ ತರುತ್ತಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ತಿಳಿಸಿದರು.
ಅವರು ನಗರದ ರಾಜಗೊಂಡ ಕಾಲೋನಿಗೆ ಭೇಟಿ ನೀಡಿ, 9 ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಜನತೆಗೆ ತಿಳಿಸಿದರಲ್ಲದೇ ಕೇಂದ್ರ ಪುರಸ್ಕೃತ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ದೇಶದ ಪ್ರಥಮ ಪ್ರಜೆಯ ಸ್ಥಾನದಲ್ಲಿ ರಾಷ್ಟ್ರಪತಿಗಳಾಗಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಬೀದರ್‌ನಲ್ಲಿ ಭಾರೀ ಮಳೆ: ಗೋಡೆ ಕುಸಿದು ಬಿದ್ದು ಬಾಲಕಿ ಸಾವು
ಆದಿವಾಸಿಗಳು ಈ ಸಮಾಜಕ್ಕೆ ಆರ್ಯುವೇದಿಕ್ ಔಷಧಗಳು, ಜಡಿಬುಟಿಗಳು ಮಾಡಿಕೊಂಡು ಜನರ ಆರೋಗ್ಯ ಕಾಪಾಡುವಲ್ಲಿ ತಮ್ಮದೆ ಆದ ಕೊಡುಗೆ ನೀಡುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ನಮ್ಮ ಸರ್ಕಾರ ಆದಿವಾಸಿಗಳಿಗೆ, ದೀನದಲಿತರಿಗೆ, ಪರಿಶಿಷ್ಟ ಜಾತಿ ಹಾಗೂ ಪಂಗಡ, ಹಿಂದೂಳಿದ ವರ್ಗದವರ ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ರಾಹುಲ್, ಸೋನಿಯಾ ಮಾತು ಕೇಳಿಕೊಂಡು ತಮಿಳನಾಡಿಗೆ ನೀರು ಬಿಡ್ತಿದ್ದಾರೆ: ಭಗವಂತ ಖೂಬಾ
ಕೇಂದ್ರ ಸರ್ಕಾರದ ಯೋಜನೆಗಳಾದ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಆರೋಗ್ಯ ಸೌಲಭ್ಯ, ಉಜ್ವಲ್ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಹಾಗೆ ಸ್ವಚ್ಛ ಭಾರತ ಯೊಜನೆಯಡಿ ಶೌಚಾಲಯಗಳ ನಿರ್ಮಾಣವಾಗಿರುವ ಬಗ್ಗೆ ಜನರೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಎಲ್ಲರಿಗೂ ಗ್ಯಾಸ್ ಹಾಗೂ ಪಡಿತರ ಒದಗಿಸುತ್ತಿರುವ ಬಗ್ಗೆ ಜನರು ತಿಳಿಸಿ ಸಂತೋಷ ವ್ಯಕ್ತಪಡಿಸಿದರು. ಜೊತೆಗೆ ಕಾಲೋನಿಯ ಜನರು ಬಸ್ ವ್ಯವಸ್ಥೆ ಮಾಡಿಕೊಡಲು ಕೋರಿದಾಗ ಬಸ್ ವ್ಯವಸ್ಥೆ ಮಾಡಿಸುವುದಾಗಿ ಭರವಸೆ ನೀಡಿದರು.
ರಾಜಗೊಂಡ ಕಾಲೋನಿಯಲ್ಲಿರುವ ಎಲ್ಲಾ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು, ವಿದ್ಯಾಭ್ಯಾಸ ಮಾಡಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬೀದರ್ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿ ಹೊಸಳ್ಳಿ, ಪ್ರಮುಖರಾದ ಶಿವರಾಜ ಕಣಜಿ, ಶಂಕರರಾವ ಪಾಟೀಲ್ ಗುಮ್ಮಾ, ಆಣೆಪ್ಪ ಖಾನಾಪೂರೆ, ಕಾಲೋನಿಯ ಪ್ರಮುಖರಾದ ವಿಶಾಲ ಮಹಾರಾಜ, ಧರ್ಮದಾಸ, ರವಿಬಾಬು, ಬಾಬುರಾವ, ಹರೀಷ ಬಾಬು ಮುಂತಾದವರು ಉಪಸ್ಥಿತರಿದ್ದರು.