ಬಿಜೆಪಿ-ಜೆಡಿಎಸ್ ಮೇಲಾಟ : ನಿಖಿಲ್ - ನಾರಾಯಣ ಗೌಡ ನಡುವೆ ಫೈಟ್?

Kannadaprabha News   | Asianet News
Published : Nov 08, 2020, 02:00 PM ISTUpdated : Nov 08, 2020, 02:19 PM IST
ಬಿಜೆಪಿ-ಜೆಡಿಎಸ್ ಮೇಲಾಟ : ನಿಖಿಲ್ - ನಾರಾಯಣ ಗೌಡ ನಡುವೆ ಫೈಟ್?

ಸಾರಾಂಶ

ಮತ್ತೆ ಜೆಡಿಎಸ್ ಕಾಂಗ್ರೆಸ್ ನಡುವೆ ರಾಜಕೀಯ ಮೇಲಾಟ ಶುರುವಾಗಿದೆ. ನಿಖಿಲ್ ಹಾಗೂ ಸಚಿವ ನಾರಾಯಣ ಗೌಡ ನಡುವೆ ಫೈಟ್ ನಡೆದಿದೆ. 

ಮಂಡ್ಯ  (ನ.08): ಕೆ ಆರ್‌ ಪೇಟೆಯಲ್ಲಿ ರಾಜಕೀಯ ಮೇಲಾಟ ಮುಂದುವರಿದಿದ್ದು ಆತ್ಮಹತ್ಯೆಗೆ ಶರಣಾದ ರೈತನ ಮನೆಗೆ ರಾಜಕೀಯ ಮುಖಂಡರು ಭೇಟಿ ನಿಡಿದ್ದಾರೆ. 

ನಿಖಿಲ್‌ ಕುಮಾರಸ್ವಾಮಿ ತೆರಳುವ ಮುನ್ನವೇ ರೈತನ ಮನೆಗೆ ಸಚಿವ ನಾರಾಯಣ ಗೌಡ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಚೌಡೇನಹಳ್ಳಿಯ ಮೃತ ರೈತ ನಂಜೇಗೌಡರ ಮನೆಗೆ ಸಚಿವ ನಾರಾಯಣಗೌಡ ಭೇಟಿ ನೀಡಿದ್ದಾರೆ. 

ರೈತನ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ 25 ಸಾವಿರ ಆರ್ಥಿಕ ಸಹಾಯ  ಮಾಡುವ ಮೂಲಕ ಸಾಂತ್ವನ ಹೇಳಿದ್ದಾರೆ.  ಸರ್ಕಾರದಿಂದಲೂ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. 

'RRನಗರದಲ್ಲಿ ಕುಸುಮಾ ಸೋಲಿಸಲು ಸಿದ್ದರಾಮಯ್ಯ ಪ್ಲಾನ್ : ಶಿರಾದಲ್ಲಿ ಟಿಬಿಜೆ ಸೋಲಿಸಲು ಡಿಕೆಶಿ ಪ್ಲಾನ್' ...

ಇಂದು ಮೃತ ರೈತನ ಮನೆಗೆ ನಿಖಿಲ್ ಕುಮಾರಸ್ವಾಮಿ ಭೇಟಿ ಕಾರ್ಯಕ್ರಮ ನಿಗಧಿಯಾಗಿತ್ತು. ನಿಖಿಲ್ ಭೇಟಿಗೂ ಮೊದಲೇ ಮೃತ ರೈತನ ಮನೆಗೆ ನಾರಾಯಣಗೌಡ ಭೇಟಿ ನೀಡಿದ್ದಾರೆ.

ಈ ಮೂಲಜ ಕೆಆರ್ ಪೇಟೆಯಲ್ಲಿ ಮತ್ತೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೇಲಾಟ ಶುರುವಾಗಿದೆ.  

ಮೂರು ದಿನದ ಹಿಂದೆ 3.5ಲಕ್ಷ ಸಾಲಕ್ಕೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದ ರೈತ ನಂಜೇಗೌಡ(60) ಆತ್ಮಹತ್ಯೆಗೆ ಶರಣಾಗಿದ್ದರು.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!