ತಾಲೂಕಿನ ಮಹದೇವನಗರದ ರೈತನ ಮೇಲೆ ದಾಳಿ ನಡೆಸಿ ಹಸುವನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ. ಆನೆ ಬಳಸಿ ಅರಣ್ಯಾಧಿಕಾರಿಗಳು ಹುಲಿ ಸೆರೆಗಾಗಿ ತೀವ್ರ ಶೋಧ ನಡೆಸಿರುವ ಬೆನ್ನಲ್ಲೆ, ಹುಲಿ ಹಾದನೂರು ಒಡೆಯನಪುರ ಗ್ರಾಮದಲ್ಲಿ ಮತ್ತೊಂದು ಮೇಕೆಯನ್ನು ಬಲಿ ಪಡೆದಿದೆ.
ನಂಜನಗೂಡು : ತಾಲೂಕಿನ ಮಹದೇವನಗರದ ರೈತನ ಮೇಲೆ ದಾಳಿ ನಡೆಸಿ ಹಸುವನ್ನು ಬಲಿ ಪಡೆದಿದ್ದ ಹುಲಿ ಸೆರೆಗೆ ಕಾರ್ಯಾಚರಣೆ ಮುಂದುವರೆದಿದೆ. ಆನೆ ಬಳಸಿ ಅರಣ್ಯಾಧಿಕಾರಿಗಳು ಹುಲಿ ಸೆರೆಗಾಗಿ ತೀವ್ರ ಶೋಧ ನಡೆಸಿರುವ ಬೆನ್ನಲ್ಲೆ, ಹುಲಿ ಹಾದನೂರು ಒಡೆಯನಪುರ ಗ್ರಾಮದಲ್ಲಿ ಮತ್ತೊಂದು ಮೇಕೆಯನ್ನು ಬಲಿ ಪಡೆದಿದೆ.
ವೃದ್ದನ ಮೇಲೆ ದಾಳಿ ನಡೆಸಿದ್ದ ಹಸುವನ್ನು ಬಲಿ ಪಡೆದಿತ್ತು. ಶುಕ್ರವಾರವೂ ಸಹ ಹಾದನೂರು ಗ್ರಾಮದಲ್ಲಿ ಮತ್ತೊಂದು ಮೇಕೆಯನ್ನು ಬಲಿ ಪಡೆದಿದೆ. ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದಲ್ಲದೆ, ತಾಲೂಕಿನ ಹಾದನೂರು ಒಡೆಯನಪುರ ಗ್ರಾಮದ ಸುತ್ತಮುತ್ತಲಿನ ಪ್ರದೇಶದ 6 ರಿಂದ 7 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ವಿಶೇಷ ಹುಲಿ ರಕ್ಷಣಾ ಪಡೆಯ ಮತ್ತು ಅರಣ್ಯಾಧಿಕಾರಿಗಳ ತಂಡ ತೀವ್ರ ಹುಡುಕಾಟ ನಡೆಸಿದರು. ಅಲ್ಲದೆ ಹುಲಿ ಪತ್ತೆಗಾಗಿ 10 ಕಡೆಗಳಲ್ಲಿ ಕ್ಯಾಮಾರಾಗಳನ್ನು ಅಳವಡಿಸಲಾಗಿದ್ದು, ಹುಲಿಯ ಚಲನವಲದ ಮೇಲೆ ನಿಗಾವಹಿಸಿದ್ದಾರೆ. ರಾಮಾಪುರ ಆನೆ ಶಿಬಿರದಿಂದ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚಣೆಗಾಗಿ ಧರ್ಮ ಹಾಗೂ ಪಾರ್ಥ ಎಂಬ ಎರಡು ಸಾಕಾನೆಗಳನ್ನು ಬಳಸಿಕೊಂಡು ಹುಲಿ ಪತ್ತೆಗಾಗಿ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಕಾರ್ಯಾಚರಣೆ ಮುಂದುವರೆಸಿದರು.
undefined
ವಲಯ ಅರಣ್ಯಾಧಿಕಾರಿ ನಾರಾಯಣ ರಾವ್ ಮಾತನಾಡಿ, ಹುಲಿ ಪತ್ತೆಗಾಗಿ ಮುಂದಿನ ಮೂರು ದಿನಗಳ ಕಾಲ ಸಾಕಾನೆಗಳಾದ ಪಾರ್ಥ ಮತ್ತು ಧರ್ಮ ಆನೆಗಳ ಮೂಲಕ ಶೋಧ ಮುಂದುರೆಸಲಿದ್ದೇವೆ. ಶುಕ್ರವಾರ ಹಾದನೂರು ಒಡೆಯನಪುರ ಗ್ರಾಮದಲ್ಲಿ ಮತ್ತೊಂದು ಮೇಕೆಯನ್ನು ಬಲಿ ಪಡೆದಿದೆ. ಮೇಕೆ ಬಲಿಪಡೆದಿರುವುದು ಅದೇ ಹುಲಿಯೇ ಅಥವಾ ಮತ್ತೊಂದು ಹುಲಿ ಇರಬಹುದೇ ಎಂಬುದರ ಬಗ್ಗೆ ಖಚಿತವಾಗಿಲ್ಲ, ಆದ್ದರಿಂದ ಕ್ಯಾಮರಾ ಅಳವಡಿಸಲಾಗಿದ್ದು ಅದರ ಚಲನ ವಲನ ಬಗ್ಗೆ ನಿಗಾವಹಿಸಲಾಗುವುದು ಎಂದರು.
ರೈತನ ಮೇಲೆ ದಾಳಿ ಮಾಡಿದ್ದ ಹುಲಿ ದಿಡೀರ್ ಪ್ರತ್ಯಕ್ಷ
ಮೈಸೂರು(ನ.01): ರೈತನ ಮೇಲೆ ದಾಳಿ ಮಾಡಿದ್ದ ಹುಲಿ ದಿಢೀರ್ ಪ್ರತ್ಯಕ್ಷವಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಮಹದೇವನಗರದಲ್ಲಿ ಇಂದು(ಬುಧವಾರ) ನಡೆದಿದೆ.
ನಂಜನಗೂಡು ತಾಲೂಕಿನ ಮಹದೇವನಗರದ ಮತ್ತಿಮರದ ಜೇನುಕಟ್ಟೆ ಬಳಿ ಹುಲಿ ಪ್ರತ್ಯಕ್ಷವಾಗಿದೆ. ಹುಲಿ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಮೊಟ್ಟ ಮೊದಲ ಪತ್ರಿಕಾ ವಿತರಕ ಮೈಸೂರು ಜವರಪ್ಪ
ಧನಗಾಹಿ ವೀರಭದ್ರ ಭೋವಿ ಮೇಲೆ ಹುಲಿ ದಾಳಿ ನಡೆಸಿತ್ತು, ಈ ಹುಲಿ ಕಳೆದ ಮೂರು ದಿನಗಳಿಂದ ಕಾಣಿಸಿಕೊಳ್ಳುತ್ತಿದೆ. ಹುಲಿ ಸೆರೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ