ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ : ಎಂದಿನಿಂದ..?

By Kannadaprabha NewsFirst Published Sep 2, 2020, 12:24 PM IST
Highlights

ಕೊರೋನಾ ಹಿನ್ನೆಲೆ ನಿರ್ಬಂಧಿಸಲಾಗಿದ್ದ ನಂದಿ ಬೆಟ್ಟ ಪ್ರವೇಶವನ್ನು ಇದೀಗ ಮತ್ತೆ ಪ್ರವಾಸಿಗರಿಗೆ ಮುಕ್ತಗೊಳಿಸಲಾಗುತ್ತಿದೆ.  ಆದರೆ ಎಂದಿನಿಂದ ಮುಕ್ತವಾಗಲಿದೆ..?

ಚಿಕ್ಕಬಳ್ಳಾಪುರ (ಸೆ.01) : ಕೊರೋನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಹೇರಿದ್ದ ಪ್ರವಾಸಿಗರ ನಿರ್ಬಂಧ ತೆರವಿಗೆ ದಿನಗಣನೆ ಶುರುವಾಗಿದ್ದು, ಸೆ.7 ರಿಂದ ಪ್ರವೇಶ ಆರಂಭವಾಗಲಿದೆ.

ಕೇಂದ್ರ ಸರ್ಕಾರ ಅನ್‌ಲಾಕ್‌ 4ರ ಮಾರ್ಗಸೂಚಿಗಳನ್ನು ಪ್ರಕಟಿಸಿದ ಬೆನ್ನಲೇ ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಪ್ರವಾಸಿಗರಿಗೆ ನಂದಿಗಿರಿಧಾಮ ಪ್ರವೇಶಕ್ಕೆ ಮುಕ್ತಗೊಳಿಸಲು ಮುಂದಾಗಿದೆ. ಕೊರೋನಾ ಸೋಂಕು ತಡೆಯುವ ಉದ್ದೇಶದಿಂದ ಕಳೆದ ಮಾ.23 ರಿಂದಲೇ ಕೇಂದ್ರ ಸರ್ಕಾರ ಘೊಷಿಸಿದ ಲಾಕ್‌ಡೌನ್‌ ಪರಿಣಾಮ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ನಂದಿ ಗಿರಿಧಾಮದಲ್ಲಿ ಮತ್ತೆ ರೂಂ ಬುಕಿಂಗ್ ಪ್ರಕ್ರಿಯೆ ಆರಂಭ

ಕೋವಿಡ್‌-19 ಸಂದರ್ಭದಲ್ಲಿ ನಂದಿ ಗಿರಿಧಾಮಕ್ಕೆ ಪ್ರವೇಶ ನೀಡುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್‌ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ವೇಳೆ ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ದಂಡ ವಿಧಿಸಲಾಗುತ್ತದೆ. ಕುಡಿಯುವ ನೀರು, ತಿಂಡಿ, ತಿನಿಸುಗಳ ಪ್ಲಾಸಿಕ್ಟ್ ಪೊಟ್ಟಣಗಳನ್ನು ಹೊರಗಡೆಯಿಂದ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದಾಯ ತರುತ್ತಿದ್ದ ನಂದಿಗಿರಿಧಾಮವನ್ನು ಬರೋಬರಿ 5 ತಿಂಗಳ ಕಾಲ ಮುಚ್ಚಿದ್ದರ ಪರಿಣಾಮ ಅಲ್ಲಿನ ಹೋಟೆಲ್‌ ಉದ್ದಿಮೆದಾರರು, ವಿವಿಧ ಅಂಗಡಿ ಮಳಿಗೆಗಳ ವರ್ತಕರು ತೀವ್ರ ಸಂಕಷ್ಟಅನುಭವಿಸಿದ್ದರು. ಅಲ್ಲದೇ ತೋಟಗಾರಿಕೆ, ಪ್ರವಾಸೋದ್ಯಮ ಇಲಾಖೆಗೆ ಹರಿದು ಬರುತ್ತಿದ್ದ ಕೋಟ್ಯಾಂತರ ರು. ಆದಾಯಕ್ಕೂ ಖೋತಾ ಬಿದ್ದಿತ್ತು

click me!