ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ: ಶೀಘ್ರದಲ್ಲೇ ಸಂಚಾರ ಆರಂಭ

By Suvarna NewsFirst Published Aug 11, 2020, 9:23 AM IST
Highlights

ನಮ್ಮ ಮೆಟ್ರೋ ಹಸಿರು ಮಾರ್ಗವಾದ ಯಲಚೇನಹಳ್ಳಿಯಿಂದ ಅಂಜನಾಪುರದವರೆಗೂ ಶೀಘ್ರವೇ ಮೆಟ್ರೋ ರೈಲು ಸಂಚರಿಸಲಿದ್ದು, ಆಗಸ್ಟ್‌ ಅಂತ್ಯದೊಳಗೆ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ. ಯಲಚೇನಹಳ್ಳಿಯಿಂದ ಅಂಜನಾಪುರದವರೆಗೂ ಎಷ್ಟು ನಿಲ್ದಾಣಗಳಿವೆ? ಯಾವಾಗ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ

ಬೆಂಗಳೂರು(ಆ.11): ನಮ್ಮ ಮೆಟ್ರೋ ಹಸಿರು ಮಾರ್ಗ(ನಾಗಸಂದ್ರ-ಯಲಚೇನಹಳ್ಳಿ) ಪ್ರಯಾಣಿಕರಿಗೆ ಸಂತಸದ ಸುದ್ದಿ ನೀಡಿದೆ. ಶೀಘ್ರವೇ ಯಲಚೇನಹಳ್ಳಿಯಿಂದ ಅಂಜನಾಪುರದವರೆಗೂ ಮೆಟ್ರೋ ರೈಲು ಸಂಚರಿಸಲಿದ್ದು, ಆಗಸ್ಟ್‌ ಅಂತ್ಯದೊಳಗೆ ಪರೀಕ್ಷಾರ್ಥ ಸಂಚಾರ ಆರಂಭವಾಗಲಿದೆ.

ನಮ್ಮ ಮೆಟ್ರೋ 2ನೇ ಹಂತದ ಮೊದಲ ವಿಸ್ತರಿತ ಮಾರ್ಗವಾದ ಯಲಚೇನಹಳ್ಳಿ- ಅಂಜನಾಪುರ ನಡುವಿನ 6.29 ಕಿ.ಮೀ ಮಾರ್ಗ ಇದಾಗಿದೆ. ಇದು ಹಸಿರು ಮಾರ್ಗದ ವಿಸ್ತರಣಾ(ಎಕ್ಸ್‌ಟೆನ್ಷನ್‌) ಮಾರ್ಗವಾಗಿದ್ದು ಸುಮಾರು 500 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಯಲಚೇನಹಳ್ಳಿ- ಅಂಜನಾಪುರ ನಡುವೆ ಕೋಣನಕುಂಟೆ ಕ್ರಾಸ್‌(ಅಂಜನಾಪುರ ರೋಡ್‌ ಕ್ರಾಸ್‌), ಕೃಷ್ಣಲೀಲಾ ಪಾರ್ಕ್(ದೊಡ್ಡಕಲ್ಲಸಂದ್ರ), ವಜರಹಳ್ಳಿ, ತಲಘಟ್ಟಪುರ, ಅಂಜನಾಪುರ ಟೌನ್‌ಶಿಪ್‌ ಎಂಬ ಐದು ಎಲಿವೇಟೆಡ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ.

79 ಕಾರ್ಮಿಕರಿಗೆ ಕೊರೋನಾ: ಮೆಟ್ರೋ, ಬಿಬಿಎಂಪಿಗೆ ಚಾಟಿ, ಹೈಕೋರ್ಟ್ ಗರಂ

2016 ಮೇ ತಿಂಗಳಲ್ಲಿ ನಮ್ಮ ಮೆಟ್ರೋ 2ನೇ ಹಂತದಲ್ಲಿ ಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್‌ ನಡುವಿನ ಮೆಟ್ರೋ ಮಾರ್ಗದ ಕಾಮಗಾರಿ ಆರಂಭಗೊಂಡಿತ್ತು. ಈಗಾಗಲೇ ರೀಚ್‌-4 ಕಾಮಗಾರಿಯು ಶೇ.90ರಷ್ಟುಪೂರ್ಣಗೊಂಡಿದೆ. ಇನ್ನು ನಿಲ್ದಾಣದೊಳಗಿನ ಪ್ಲಾಟ್‌ಫಾರಂ, ಟಿಕೆಟ್‌ ಕೌಂಟರ್‌, ಗ್ರಾಹಕರ ಕೇಂದ್ರಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆಗಸ್ಟ್‌ ಕೊನೆಯ ವಾರದಲ್ಲಿ ಹಳಿಗಳ ಅಗಲ ಪರೀಕ್ಷೆ ನಡೆಯಲಿದ್ದು, ರೈಲ್ವೆ ಇಲಾಖೆ ಆಯುಕ್ತರು ಹಳಿಗಳ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಮೆಟ್ರೋ ರೈಲು ಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್‌ ವರೆಗೂ ಪರೀಕ್ಷಾರ್ಥ ಸಂಚಾರ ಆರಂಭಗೊಳ್ಳಿದೆ.

ಒಂದೂವರೆ ತಿಂಗಳು ಪರೀಕ್ಷಾರ್ಥ ಸಂಚಾರ:

ಸುಮಾರು ಒಂದೂವರೆ ತಿಂಗಳು ಮೆಟ್ರೋ ರೈಲು ಪರೀಕ್ಷಾರ್ಥ ಸಂಚಾರ ನಡೆಸಿದ ಬಳಿಕ ನವೆಂಬರ್‌ ಅಂತ್ಯದೊಳಗೆ ಸಾರ್ವಜನಿಕ ಸೇವೆಗೆ ಲಬ್ಯವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತ ನಾಗಸಂದ್ರದಿಂದ ಮಾದಾವರ (ಬಿಐಇಸಿ) ವರೆಗೆ ಹಸಿರು ಮಾರ್ಗದ ವಿಸ್ತರಿತ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು ಸುಮಾರು 3.03 ಕಿ.ಮೀ ಉದ್ದವಿದೆ. ಇದರಲ್ಲಿಯೂ ಮಂಜುನಾಥ ನಗರ, ಚಿಕ್ಕಬಿದರಕಲ್ಲು, ಮಾದವಾರ ಎಂಬ ಎಲಿವೇಟೆಡ್‌ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ. ಹೀಗೆ ಅಂಜನಾಪುರದಿಂದ ಬಿಐಇಸಿ ವರೆಗೆ ಹಸಿರು ಮಾರ್ಗ ಒಟ್ಟು 33.79 ಕಿ.ಮೀ ಉದ್ದ ಇರಲಿದೆ.

click me!