ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರದ ಪಿಐಬಿ ಸಮ್ಮತಿ ದೊರೆತಿದೆ. ಇದರ ಬೆನ್ನಲ್ಲೇ ಗುಲಾಬಿ ಮಾರ್ಗ ಸುರಂಗ ಕಾಮಗಾರಿ ವೇಳೆ ಮತ್ತೆ ರಸ್ತೆ ಕುಸಿತವಾಗಿದೆ.
ಬೆಂಗಳೂರು (ಜೂ.29): ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರದ ‘ಸಾರ್ವಜನಿಕ ಹೂಡಿಕೆ ಮಂಡಳಿ’ (ಪಿಐಬಿ) ಸಮ್ಮತಿ ದೊರೆತಿದ್ದು, ಅಂತಿಮವಾಗಿ ಕೇಂದ್ರ ಸರ್ಕಾರದ ಹಸಿರು ನಿಶಾನೆ ಬಾಕಿ ಇದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಮೂಲಗಳು ತಿಳಿಸಿವೆ.
ಮಂಡಳಿ ಈ ಯೋಜನೆಗೆ ಒಪ್ಪಿಗೆ ನೀಡಿ ಕಡತವನ್ನು ಕೇಂದ್ರ ಸಚಿವ ಸಂಪುಟದ ಒಪ್ಪಿಗೆಗೆ ಕಳಿಸಿದೆ. ಮೂರನೇ ಹಂತದಲ್ಲಿ ಎರಡು ಮಾರ್ಗಗಳಿದ್ದು, ಮೊದಲ 32.15 ಕಿ.ಮೀ. ಮಾರ್ಗವು ಹೊರ ವರ್ತುಲ ರಸ್ತೆಯ ಪಶ್ಚಿಮ ಭಾಗದ ಜೆ.ಪಿ. ನಗರದ ನಾಲ್ಕನೇ ಹಂತವನ್ನು ಸಂಪರ್ಕಿಸಲಿದೆ. ಎರಡನೇ ಮಾರ್ಗ 12.5 ಕಿ.ಮೀ. ಇದ್ದು, ಮಾಗಡಿ ರಸ್ತೆಯ ಹೊಸಹಳ್ಳಿ ಮತ್ತು ಕಡಬಗೆರೆಯನ್ನು ಸಂಪರ್ಕಿಸುತ್ತದೆ.
undefined
ಹನಿಮೂನ್ ಫೋಟೋ ಹಂಚಿಕೊಂಡ ಸಿದ್ಧಾರ್ಥ್ ಮಲ್ಯ, ಸ್ಟಾರ್ ನಟಿಯರೊಂದಿಗಿನ ಡೇಟಿಂಗ್ ನೆನಪಿಸಿದ ಭಾರತೀಯರು!
ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ 22 ನಿಲ್ದಾಣಗಳು ಹೊಸಹಳ್ಳಿಯಿಂದ ಕಡಬಗೆರೆವರೆಗೆ 9 ನಿಲ್ದಾಣಗಳು ಸೇರಿ ಈ ಮಾರ್ಗದಲ್ಲಿ ಒಟ್ಟು 31 ನಿಲ್ದಾಣ ನಿರ್ಮಾಣ ಆಗಲಿದೆ.
ಕಳೆದ ಮಾರ್ಚ್ 14ರಂದು ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಈ ಯೋಜನೆಗೆ ಒಪ್ಪಿಗೆ ದೊರೆತಿತ್ತು. ಯೋಜನೆಯ ಶೇ.80ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ಭರಿಸಲಿದೆ.
ಹಾಲಿವುಡ್ ನಲ್ಲಿ ಭೀಕರ ಹತ್ಯೆ, 8 ತಿಂಗಳ ಗರ್ಭಿಣಿ ನಟಿಯನ್ನು 16 ಬಾರಿ ಇರಿದು, ನೇತು ಹಾಕಿದ ಹಂತಕರು!
ಮೆಟ್ರೋ ಸುರಂಗ: ಪುನಃ ರಸ್ತೆ ಕುಸಿತ
ನಮ್ಮ ಮೆಟ್ರೋದ ಗುಲಾಬಿ ಮಾರ್ಗ ಸುರಂಗ ಕಾಮಗಾರಿ ವೇಳೆ ಮತ್ತೆ ರಸ್ತೆ ಕುಸಿದ ಘಟನೆ ಗುರುವಾರ ನಡೆದಿದೆ. ನಾಗವಾರ ಮುಖ್ಯ ರಸ್ತೆಯ ಉಮರ್‌ನಗರ ಬಳಿ ರಸ್ತೆ ಮಧ್ಯ ಭಾಗದಲ್ಲಿ ಹೊಂಡ ಉಂಟಾಗಿ ಸ್ಥಳೀಯರಲ್ಲಿ ಆತಂಕಕ್ಕೀಡಾದರು. ಬೆಂಗಳೂರು ಮೆಟ್ರೋ ರೈಲು ನಿಗಮವು ಕುಸಿದ ರಸ್ತೆ ಭಾಗಕ್ಕೆ ಕಾಂಕ್ರಿಟ್ ಸುರಿದು ದುರಸ್ತಿಪಡಿಸಿದೆ.
ಕೆ.ಜಿ.ಹಳ್ಳಿ - ನಾಗವಾರ ನಡುವೆ ತುಂಗಾ ಟನಲ್ ಬೋರಿಂಗ್ ಮಷಿನ್ ಅಂತಿಮ ಹಂತದ ಸುರಂಗ ಕಾಮಗಾರಿ ನಡೆಸುತ್ತಿದೆ. ಗುರುವಾರ ಬೆಳಗ್ಗೆ 8.30ರ ಸುಮಾರಿಗೆ ರಸ್ತೆ ಮಧ್ಯದಲ್ಲಿ ದೊಡ್ಡ ಕಂದಕ ಉಂಟಾಯಿತು. ತಕ್ಷಣ ರಸ್ತೆಯನ್ನು ಬಂದ್ ಮಾಡಿ ಜನ ಸಂಚಾರ ನಿರ್ಬಂಧಿಸಲಾಯಿತು. ರಸ್ತೆ ಕುಸಿತದಿಂದ ಸುತ್ತಮುತ್ತಲ ಮನೆ, ಮಳಿಗೆ ಮಾಲೀಕರಲ್ಲಿ ಭೀತಿಗೊಳಗಾಗಿದ್ದರು. ಮೆಟ್ರೋ ಕಾಮಗಾರಿಯಿಂದಾಗಿ ಇಂತಹ ಹೊಂಡ ಸೃಷ್ಟಿಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭೂ ಕುಸಿತದಿಂದ ಯಾವುದೇ ಹಾನಿ ಸಂಭವಿಸಿಲ್ಲ. ತಕ್ಷಣ ಪೊಲೀಸರು ರಸ್ತೆಯನ್ನು ಬಂದ್ ಮಾಡಿ ಸಂಭಾವ್ಯ ಅಪಾಯ ತಪ್ಪಿಸಿದ್ದಾರೆ. ನಮ್ಮ ಮೆಟ್ರೋ ಕಾಮಗಾರಿಯ ವೇಳೆ ಉಂಟಾಗುತ್ತಿರುವ ಕಂಪನದಿಂದ ಅಕ್ಕಪಕ್ಕದ ಕಟ್ಟಡಗಳಲ್ಲೂ ಬಿರುಕು ಮೂಡಿದೆ ಎಂದು ಸ್ಥಳೀಯರು ಆರೋಪಿಸಿದರು. ಕಾಮಗಾರಿ ನಡೆಯುವ ವೇಳೆ ರಸ್ತೆಯ ಕೆಳಭಾಗದಲ್ಲಿ ನೀರು ತುಂಬಿಕೊಂಡು ರಸ್ತೆಯಲ್ಲಿ ಕುಸಿತ ಉಂಟಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಮೆಟ್ರೋ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಉಂಟಾಗಿದ್ದ ಕಂದಕಕ್ಕೆ ಕಾಂಕ್ರಿಟ್ ಸುರಿದು ರಸ್ತೆಯನ್ನು ದುರಸ್ತಿಪಡಿಸಿದರು.
ಕಳೆದ ಒಂದೂವರೆ ವರ್ಷದಲ್ಲಿ ಬ್ರಿಗೇಡ್ ರಸ್ತೆ, ಬನ್ನೇರುಘಟ್ಟ ಮುಖ್ಯರಸ್ತೆಯ ಚಿನ್ನಯ್ಯನಪಾಳ್ಯ, ಪಾಟರಿ ಟೌನ್ ಸೇರಿ ಇನ್ನೂ ಕೆಲವೆಡೆ ಮೆಟ್ರೋ ಸುರಂಗದ ಕಾಮಗಾರಿ ವೇಳೆ ರಸ್ತೆ ಕುಸಿದ ಘಟನೆ ನಡೆದಿತ್ತು.