ಬೆಂಗಳೂರು: ಮತ್ತೆ ವಿದ್ಯುತ್‌ ಸಮಸ್ಯೆಯಿಂದ ನಮ್ಮ ಮೆಟ್ರೋ ಬಂದ್‌, ಪ್ರಯಾಣಿಕರ ಪರದಾಟ..!

By Kannadaprabha News  |  First Published Aug 25, 2024, 5:30 AM IST

ಪ್ರಯಾಣಿಕರ ತೊಂದರೆ ನಿವಾರಿಸಲು ಈ ಅವಧಿಯಲ್ಲಿ ನಾಗಸಂದ್ರ ಮತ್ತು ರಾಜಾಜಿನಗರ ನಡುವೆ ನ್ಯಾಷನಲ್ ಕಾಲೇಜು ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ನಡುವೆ ಶಾರ್ಟ್ ಲೂಪ್ ರೈಲುಗಳ ಸೇವೆ ನಡೆಸಲಾ ಯಿತು. ಮೆಟ್ರೋ ಸ್ಥಗಿತಗೊಂಡಿದ್ದರಿಂದ ಒಂದು ಹೊತ್ತಿನ ಕಚೇರಿ ಮುಗಿಸಿ ಮನೆಗೆ ತೆರಳುತ್ತಿದ್ದವರು, ವಾರಾಂತ್ಯದ ಹಿನ್ನೆಲೆಯಲ್ಲಿ ಓಡಾಟದಲ್ಲಿದ್ದವರು ಸಮಸ್ಯೆಗೆ ಒಳಗಾದರು. 
 
ಬೆಂಗಳೂರು(ಆ.25):  ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಶನಿವಾರ ಪುನಃ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸುಮಾರು 12 ನಿಮಿಷ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ತೊಂದರೆಗೀಡಾದರು. ಹಸಿರು ಮಾಗ೯ದ ಮೆಜೆಸ್ಟಿಕ್ ಮತ್ತು ಶ್ರೀರಾಂಪುರ ನಿಲ್ದಾಣಗಳ ನಡುವೆ ಸಂಜೆ 4.11 ರಿಂದ 4.23 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ರೈಲುಗಳ ಸಂಚಾರ ಸ್ಥಗಿತಗೊಂಡಿತು. 

ಪ್ರಯಾಣಿಕರ ತೊಂದರೆ ನಿವಾರಿಸಲು ಈ ಅವಧಿಯಲ್ಲಿ ನಾಗಸಂದ್ರ ಮತ್ತು ರಾಜಾಜಿನಗರ ನಡುವೆ ನ್ಯಾಷನಲ್ ಕಾಲೇಜು ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ನಡುವೆ ಶಾರ್ಟ್ ಲೂಪ್ ರೈಲುಗಳ ಸೇವೆ ನಡೆಸಲಾ ಯಿತು. ಮೆಟ್ರೋ ಸ್ಥಗಿತಗೊಂಡಿದ್ದರಿಂದ ಒಂದು ಹೊತ್ತಿನ ಕಚೇರಿ ಮುಗಿಸಿ ಮನೆಗೆ ತೆರಳುತ್ತಿದ್ದವರು, ವಾರಾಂತ್ಯದ ಹಿನ್ನೆಲೆಯಲ್ಲಿ ಓಡಾಟದಲ್ಲಿದ್ದವರು ಸಮಸ್ಯೆಗೆ ಒಳಗಾದರು. 

Tap to resize

Latest Videos

ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿ, ಇಂದಿನಿಂದ ನಾಗಸಂದ್ರ-ಮಾದವಾರ ಟ್ರಯಲ್ ರನ್‌

4.23 ರಿಂದ ಸಂಪೂರ್ಣ ಹಸಿರು ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ನಡೆಯಿತು. 1 ತಿಂಗಳ ಅಂತರದಲ್ಲಿ ಹಸಿರು ಮಾರ್ಗದಲ್ಲಿ ಎರಡನೇ ಬಾರಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿ ಸಮಸ್ಯೆ ಉಂಟಾಗಿದೆ. ಕಳೆದ ಜು.30ರಂದು ರ್ಆವಿ ರಸ್ತೆಯಿಂದ ರೇಷ್ಮೆ ಸಂಸ್ಥೆವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

click me!