ಪ್ರಸ್ತುತ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ನಡೆಸುವುದು ಅಸಾಧ್ಯದ ಮಾತು. ಹಾಗೆಯೇ ಕೇವಲ ಹಣ ಮಾಡುವುದಕ್ಕಷ್ಟೇ ಆಸ್ಪತ್ರೆ ನಡೆಸುವುದು ಸರಿಯಾದುದಲ್ಲ. ಬದ್ಧತೆ ಹಾಗೂ ನೈತಿಕತೆ ಇಟ್ಟುಕೊಂಡು ಸೇವೆ ನೀಡುವ ಕೆಲಸ ನಿಜಕ್ಕೂ ಸ್ವಾಗತಾರ್ಹ. ಅಂಥಹ ಕೆಲಸ ಎನ್‌ಯು ಆಸ್ಪತ್ರೆ ಮಾಡುತ್ತಿರುವುದು ಬಹುದೊಡ್ಡ ಸಾಧನೆ ಎಂದ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ
ಬೆಂಗಳೂರು(ಆ.25): ಸ್ಪರ್ಧಾತ್ಮಕ ಜಗತ್ತಿನಲ್ಲಿ ಖಾಸಗಿ ಬದ್ಧತೆ ಹಾಗೂ ನೈತಿಕತೆ ಇಟ್ಟುಕೊಂಡು ಸೇವೆ ಸಲ್ಲಿಸಬೇಕು ಎಂದು ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಹೇಳಿದರು.
ಎನ್‌ಯು ಆಸ್ಪತ್ರೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಸ್ತುತ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ನಡೆಸುವುದು ಅಸಾಧ್ಯದ ಮಾತು. ಹಾಗೆಯೇ ಕೇವಲ ಹಣ ಮಾಡುವುದಕ್ಕಷ್ಟೇ ಆಸ್ಪತ್ರೆ ನಡೆಸುವುದು ಸರಿಯಾದುದಲ್ಲ. ಬದ್ಧತೆ ಹಾಗೂ ನೈತಿಕತೆ ಇಟ್ಟುಕೊಂಡು ಸೇವೆ ನೀಡುವ ಕೆಲಸ ನಿಜಕ್ಕೂ ಸ್ವಾಗತಾರ್ಹ. ಅಂಥಹ ಕೆಲಸ ಎನ್‌ಯು ಆಸ್ಪತ್ರೆ ಮಾಡುತ್ತಿರುವುದು ಬಹುದೊಡ್ಡ ಸಾಧನೆ ಎಂದರು.
ನಿಮ್ಮ ಅಮ್ಮ ಅಜ್ಜಿಗೆ ಗಿಫ್ಟ್ ಮಾಡಿ ಸುಧಾಮೂರ್ತಿ ಸ್ಟೈಲ್ ಸೀರೆ
ರಜತ ಮಹೋತವದ ಕುರಿತು ಎನ್‌ಯು ಆಸ್ಪತ್ರೆಯ ಅಧ್ಯಕ್ಷ ಡಾ. ವೆಂಕಟೇಶ್ ಆಸ್ಪತ್ರೆ ಕೃಷ್ಣಮೂರ್ತಿ ಮಾತನಾಡಿ, ಆಸ್ಪತ್ರೆಯು ಅತ್ಯಾಧುನಿಕ ಐಸಿಯು ಸೌಲಭ್ಯಗಳು, 24/7 ಡಯಾಲಿಸಿಸ್, ಸುಧಾರಿತ ಪ್ರಯೋಗಾಲಯ ಮತ್ತು ರೇಡಿಯೊ ಡಯಾಗೋಸಿಸ್ ಸೇವೆ ಮತ್ತು ಯುರೊಡೈನಾಮಿಕ್ಸ್ ಸೌಲಭ್ಯ ಹೊಂದಿದೆ. ಇದರಿಂದ ಉತ್ತಮ ರೀತಿಯಲ್ಲಿ ಸೇವೆ ನೀಡಲು ಸಾಧ್ಯವಾಗಿದೆ ಎಂದರು.
ಖ್ಯಾತ ಎನ್‌ಯು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಪ್ರಸನ್ನ ವೆಂಕಟೇಶ್ ಮಾತನಾಡಿ, ಆಸ್ಪತ್ರೆಯು ಸಿಎಮ್‌ಆರ್‌ವರ್ಸಿಯಸ್ ಸರ್ಜಿಕಲ್ ರೊಬೊಟಿಕ್ ಸಿಸ್ಟಮ್ ಪರಿಚ ಯಿಸಿದ ಭಾರತದಲ್ಲಿ ಮೊದಲನೆಯ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ. ಈ ವಿಧಾನಗಳ ಚಿಕಿತ್ಸೆಯ ಮೂಲಕ ರೋ ಗಿಗೆ ಎದುರಾಗಬಹುದಾದ ತೊಂದರೆ ತಪ್ಪಿಸು ವಲ್ಲಿ ಹೆಚ್ಚು ಪ್ರಯೋಜನಕಾರಿ ಎಂದರು. ಆಸ್ಪತ್ರೆಗೆ ದೀರ್ಘ ಹಾಗೂ ವಿಶೇಷ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.