Chikkamagaluru: ಅತ್ಯಾಚಾರ, ಕೊಲೆ ಖಂಡಿಸಿ ಕಾಫಿನಾಡಿನಲ್ಲಿ 28 ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

Published : Aug 24, 2024, 07:36 PM IST
Chikkamagaluru: ಅತ್ಯಾಚಾರ, ಕೊಲೆ ಖಂಡಿಸಿ ಕಾಫಿನಾಡಿನಲ್ಲಿ 28 ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

ಸಾರಾಂಶ

ಕೋಲ್ಕತ್ತದ ತರಬೇತಿ ವೈದ್ಯೆಯ ಹತ್ಯಾಕೋರರನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಇನ್ನರ್ ವೀಲ್ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಆ.24): ಕೋಲ್ಕತ್ತದ ತರಬೇತಿ ವೈದ್ಯೆಯ ಹತ್ಯಾಕೋರರನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಇನ್ನರ್ ವೀಲ್ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳಿಂದ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ನೂರಾರು ಮಹಿಳೆಯರು ಮಹಿಳೆಯರು ನಗರದ ತಾಲ್ಲೂಕು ಕಚೇರಿಯಿಂದ ಆಜಾದ್ ಪಾರ್ಕ್ ವೃತ್ತದವರೆಗೆ ಶಾಂತಿಯುತ ಮೆರವಣಿಗೆ ನಡೆಸಿ ಅತ್ಯಾಚರಿ ಆರೋಪಿಯನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

28 ಸಂಘಟನೆಗಳಿಂದ ಪ್ರತಿಭಟನೆ: ಮೌನ ಮೆರವಣಿಗೆಯಲ್ಲಿ ಭಾರತೀಯ ವೈದ್ಯಕೀಯ ಸಂಘ, ಟೌನ್ ಮಹಿಳಾ ಸಮಾಜ, ಒಕ್ಕಲಿಗರ ಮಹಿಳಾ ಸಂಘ, ಚಿಕ್ಕಮಗಳೂರು ರೌಂಡ್ ಟೇಬಲ್, ಶ್ರೀ ವಾಸವಿ ಮಹಿಳಾ ಮಂಡಳಿ, ವಿಪ್ರ ಮಹಿಳಾ  ಘಟಕ, ಕನ್ನಡಸೇನೆ, ರೈತ ಸಂಘ, ಗ್ರೀನ್ ಇಂಡಿಯಾ ಸೇರಿದಂತೆ 28 ಸಂಘಟನೆಗಳು ಮೆರವಣಿಗೆಯಲ್ಲಿ ಸಾಗಿ ವೈದ್ಯೆಯ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಹತ್ಯೆಕ್ಕೊಳಗಾದ ತರಬೇತಿ ವೈದ್ಯ ಭವಿಷ್ಯದಲ್ಲಿ ಉನ್ನತ ವ್ಯಾಸಂಗ ಪೂರೈಸಿ ಅತ್ಯುತ್ತಮ ವೈದ್ಯರಾಗುವ ಆಕಾಂಕ್ಷೆ ಇದೀಗ ನೂಚ್ಚು ನೂರಾಗಿದೆ ಎಂದು ಪ್ರತಿಭಟನಾನಿತರು ಆಕ್ರೋಶ ಹೊರಹಾಕಿದರು. 

ಮೊಂಬತ್ತಿ ಹಚ್ಚಿವ ಬದಲು ಅತ್ಯಾಚಾರಿಗಳನ್ನು ಸಜೀವ ದಹನಕ್ಕೆ ಆಗ್ರಹ: ಈ ಪ್ರಕರಣದ ಹೆಣ್ಣುಮಕ್ಕಳ ಪಾಲಕರು ವೈದ್ಯಕೀಯ ವೃತ್ತಿಗೆ ಸೇರ್ಪಡೆಗೊಳಿಸಲು ಭಯಭೀತರಾಗಿದ್ದಾರೆ. ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಕೋರುವ ಬದಲು ಅತ್ಯಾಚಾರಿಗಳನ್ನು ಸಜೀವ ದಹನ ಮಾಡಬೇಕು. ದಯೆ, ದಾಕ್ಷಣ್ಯಕ್ಕೆ ಎಡೆ ಮಾಡಿಕೊಡಬಾರದು. ರಾಜಕೀಯ ರಾಜೀ ಮಾಡದೇ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ವಿಳಂಭ ಧೋರಣೆ ಅನುಸರಿಸಿದರೆ ಬಂಗಾಳದಲ್ಲಿ ನಡೆದಿರುವ ಪ್ರಕರಣ ಮುಂದೊಂದು ದಿನ ರಾಜ್ಯದಲ್ಲಿ ಸಂಭವಿಸಲಿದೆ ಎಂದು ಪ್ರತಿಭಟನಾನಿತರು ಎಚ್ಚರಿಕೆ ನೀಡಿದರು. 

ಗ್ಯಾರಂಟಿಗಾಗಿ ರಸ್ತೆಯಲ್ಲಿ ಓಡಾಡುವವರಿಗೂ ಕಾಂಗ್ರೆಸ್ ಬರೆ: ಶಾಸಕ ಸುನಿಲ್ ಕುಮಾರ್

ಇನ್ನರ್ ವೀಲ್ ಉಪಾಧ್ಯಕ್ಷೆ ನಯನ ಸಂತೋಷ್ ಮಾತನಾಡಿ ಹೆಣ್ಣುಮಕ್ಕಳು ಮೊಬೈಲ್ಗಳಲ್ಲಿ ಹೆಣ್ಣುಮಕ್ಕಳು ತಮ್ಮ ಮೊಬೈಲ್ನಲ್ಲಿ ಪೊಲೀಸ್ ಇಲಾಖೆಯ ಆಪ್ ಡೌನ್ಲೋಡ್ ಮಾಡಿಕೊಂಡು ಲೋಕೇಶನ್ ಆನ್ ಮಾಡಿಕೊಂಡರೆ ಸಂಕಷ್ಟದ ಸಮಯದಲ್ಲಿ ಕಂಡುಹಿಡಿಯಲು ಸಾಧ್ಯವಾಗಲಿದೆ ಎಂದು ಸಲಹೆ ಮಾಡಿದರು.ಇದೇ ವೇಳೆ ಆಜಾದ್ ಪಾರ್ಕ್ ವೃತ್ತದಲ್ಲಿ ಟಿಎಂಎಸ್ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಮೂಡಿಸುವ ಸಲುವಾಗಿ ಸಾಂಕೇತಿಕ ನಾಟಕ ಪ್ರದರ್ಶನ ನಡೆಯಿತು.

PREV
Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!