ಶೀಘ್ರವೇ ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯಾಗಲಿದ್ದು, ಕನಿಷ್ಠ ದರ 15 ಗರಿಷ್ಠ ದರ 75 ಸಾಧ್ಯತೆಯಿದೆ. ನಮ್ಮ ಮೆಟ್ರೋ 2011 ರಲ್ಲಿ ಸೇವೆ ಆರಂಭಿಸಿದ್ದು, 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು.
ಬೆಂಗಳೂರು (ನ.06): ಶೀಘ್ರವೇ ನಮ್ಮ ಮೆಟ್ರೋ ಪ್ರಯಾಣ ದರ ಪರಿಷ್ಕರಣೆಯಾಗಲಿದ್ದು, ಕನಿಷ್ಠ ದರ 15 ಗರಿಷ್ಠ ದರ 75 ಸಾಧ್ಯತೆಯಿದೆ. ನಮ್ಮ ಮೆಟ್ರೋ 2011 ರಲ್ಲಿ ಸೇವೆ ಆರಂಭಿಸಿದ್ದು, 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ 2ನೇ ಬಾರಿಗೆ ದರ ಪರಿಷ್ಕ ರಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ರಚಿಸಿದ್ದ ನಿಗದಿ ಸಮಿತಿ ಅಕ್ಟೋಬರ್ 28ರವರೆಗೆ ಸಾರ್ವಜನಿಕರಿಂದ ಸಲಹೆ, ಸೂಚನೆ, ಆಕ್ಷೇಪಣೆಗಳನ್ನು ಪಡೆದು ಕೊಂಡಿದೆ. ಮೆಟ್ರೊ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002 ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರದಿಂದ ರಚಿಸಿದ ಬಿಎಂಆರ್ಸಿಎಲ್‌ನ ಮೊದಲ ದರ ನಿಗದಿ ಸಮಿತಿ ಇದಾಗಿದೆ.
ಸದ್ಯ ಕನಿಷ್ಠ ದರ 10 ಹಾಗೂ ಗರಿಷ್ಠ ದರ 60 ಇದೆ. ಸ್ಮಾರ್ಟ್ ಕಾರ್ಡ್, ಕ್ಯೂಆರ್‌ಕೋಡ್ ಟಿಕೆಟ್ ಬಳಸುವವರಿಗೆ ಶೇ.5 ರಿಯಾಯಿತಿ ಇದೆ. ಮೆಟ್ರೊ ರೈಲುಗಳ ಕಾರ್ಯಾಚರಣೆ, ನಿರ್ವಹಣೆ, ಸಿಬ್ಬಂದಿ ವೇತನ ಸಹಿತ ವಿವಿಧ ರೀತಿಯ ವೆಚ್ಚ ವರ್ಷದಿಂದ ವರ್ಷಕ್ಕೆ ಜಾಸ್ತಿಯಾ ಗುತ್ತಿದೆ. 7 ವರ್ಷಗಳಿಂದ ದರ ಪರಿಷ್ಕ ರಣೆ ಆಗಿಲ್ಲ. ಈಗಾಗಲೇ ವಿಳಂಬವಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ. ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ ರಾವ್ ಎಂ., ಮಾತನಾಡಿ, ಮೆಟ್ರೋ ದರ ಪರಿಷ್ಕರಣೆಗೆ ರಚಿಸಿರುವ ಸಮಿತಿ ಇನ್ನೂ ವರದಿಯನ್ನು ಕೊಟ್ಟಿಲ್ಲ. ಸಮಿತಿಯ ಬಳಿಕ ನಿರ್ಧರಿಸಲಾಗುವುದು ಎಂದು ತಿಳಿಸಿದರು.
undefined
ಪ್ರಯಾಣಿಕರಿದ್ದಲ್ಲಿಗೇ ಹೋಗಿ ರೈಲ್ವೆ ಟಿಕೆಟ್ ನೀಡಿಕೆ: ರೈಲ್ವೆ ಟಿಕೆಟ್ ವಿತರಣೆ ವ್ಯವಸ್ಥೆಯನ್ನು ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಿಸಿರುವ ನೈಋತ್ಯ ರೈಲ್ವೆ ಬೆಂಗ ಳೂರು ವಲಯ ಕಾಯ್ದಿರಿಸದ ಮೊಬೈಲ್ ಟಿಕೆಟ್ ವ್ಯವಸ್ಥೆ (ಎಂ-ಯುಟಿಎಸ್) ಅಡಿ ಕೌಂಟರ್ ಬದಲಾಗಿ ಪ್ರಯಾಣಿಕರ ಬಳಿಗೆ ಹೋಗಿ ತ್ವರಿತವಾಗಿ ಟಿಕೆಟ್ ನೀಡುವ ಸೌಲಭ್ಯ ಜಾರಿಗೆ ತಂದಿದೆ. ಪ್ರಸ್ತುತ ನಗರದ ಕೆಎಸ್ ಯಶವಂತಪುರ ಮತ್ತು ಎಸ್‌ಎಂವಿಟಿ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಜಾರಿಗೆ ತಂದಿದೆ. ನಿಲ್ದಾಣದ 500 ಮೀಟರ್‌ವ್ಯಾಪ್ತಿಯಲ್ಲಿ ಪ್ರಯಾಣಿಕರು ಇದರ ಮೂಲಕ ಟಿಕೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ.
ನಾನು ತಪ್ಪು ಮಾಡಿದೆ ಅಂತ ಹೇಳುವ ಯೋಗ್ಯತೆ ಯಾರಿಗೂ ಇಲ್ಲ: ಮಾಜಿ ಪ್ರಧಾನಿ ದೇವೇಗೌಡ
ಮುಂದಿನ ಹಂತಗಳಲ್ಲಿ ಇತರೆ ಜನದಟ್ಟಣೆಯ ನಿಲ್ದಾಣಗಳಲ್ಲಿ ಎಂ-ಯುಟಿಎಸ್ ಜಾರಿಗೊಳಿಸು ವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಟಿಕೆಟ್ ನೀಡುವ ಪ್ರಕ್ರಿಯೆ ಸರಳಗೊಳಿಸುವ ಮತ್ತು ಬಹುಬೇಗ ಪ್ರಯಾಣಿಕರು ಟಿಕೆಟ್ ಪಡೆಯುವಂತಾಗಲು ಈ ಸೌಲಭ್ಯ ತರಲಾಗಿದೆ. ಇದಕ್ಕಾಗಿ ನವೀನ ಸಾಧನ ವಿನ್ಯಾಸಗೊಳಿಸಲಾಗಿದೆ. ರೈಲ್ವೆ ಸಿಬ್ಬಂದಿ ನಿರ್ವಹಿಸುವ ಈ ಹ್ಯಾಂಡ್‌ಹೆಲ್ತ್ ಸಾಧನಗಳು ಪ್ರಯಾಣಿಕರಿಗೆ ಟಿಕೆಟ್ ಗಳನ್ನು ತ್ವರಿತವಾಗಿ ವಿತರಿಸಲಿವೆ. ರೈಲ್ವೆ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಇರುವ ಸಾಂಪ್ರದಾಯಿಕ ಟಿಕೆಟ್ ಕೌಂಟರ್‌ಗಳಂತೆ, ಈ ಯಂತ್ರಗಳಿಗೆ ನಿಶ್ಚಿತ ಜಾಗ ಮತ್ತಿತರ ಸಾಧನಗಳು ಅಗತ್ಯ ವಿಲ್ಲ, ನಿಲ್ದಾಣದ ಯಾವುದೇ ಸ್ಥಳದಲ್ಲಾದರೂ ಟಿಕೆಟ್ ನೀಡಬಹುದಾಗಿದೆ.