* ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ನಡೆದ ನಾಮಕರಣ
* ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಶುಭ ದಿನದಂದು ನಡೆದ ಕಾರ್ಯಕ್ರಮ
* ಸೆಮಿಲಾಕ್‌ಡೌನ್ ಹಿನ್ನೆಲೆಯಲ್ಲಿ ಗದಗಿಗೆ ಹೋಗಿ ಬರಲು ಕಷ್ಟಕರ
ಹನುಮಸಾಗರ(ಮೇ.17): ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ವಿಡಿಯೋ ಕಾಲ್ ಮೂಲಕವೇ ಮಗುವಿನ ನಾಮಕರಣ ಮಾಡಿದ ಘಟನೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ. ಗ್ರಾಮದ ಶಿವರಾಜ್ ಸಿ.ಬಿ. ಅವರ ಹಿರಿಯ ಪುತ್ರ ಚಿರಾಗ ಅವರ ಎರಡನೇ ಪುತ್ರಿಗೆ ವಿಡಿಯೋ ಕಾಲ್ ಮೂಲಕವೇ ಅಧಿತಿ ಎಂದು ನಾಮಕರಣ ಮಾಡಲಾಗಿದೆ.
ಗದಗನಲ್ಲಿ ನೆಲೆಸಿರುವ ಸುನೀಲ್ ಹಳ್ಳಿ ಅವರ ಒಬ್ಬಳೇ ಸಹೋದರಿಯನ್ನು ಹನುಮಸಾಗರಕ್ಕೆ ಮದುವೆ ಮಾಡಿಕೊಡಲಾಗಿದೆ. ಅತ್ತೆಯ ಮಗನಿಂದ ನಾಮಕರಣ ಮಾಡುವುದು ಪದ್ಧತಿಯಾಗಿರುತ್ತದೆ. ಮೊದಲನೇ ಮಗಳಿಗೆ ದೃಷಿಕಾ ಎಂದು ಕಳೆದ ಮೂರು ವರ್ಷಗಳ ಹಿಂದೆ ನಾಮಕರಣ ನೆರವೇರಿಸಲಾಗಿತ್ತು. ಆದರೆ ಈ ಬಾರಿ ಸೆಮಿಲಾಕ್‌ಡೌನ್ ಹಿನ್ನೆಲೆಯಲ್ಲಿ ಗದಗಿಗೆ ಹೋಗಿ ಬರಲು ಕಷ್ಟಕರವಾಗುತ್ತದೆ. ಆದ್ದರಿಂದ ಗದಗ ಹಾಗೂ ಹನುಮಸಾಗರದಲ್ಲಿ ಎಲ್ಲಾ ರೀತಿಯ ಸಿದ್ಧತೆಯನ್ನು ಎರಡೂ ಕುಟುಂಬಸ್ಥರು ಮಾಡಿಕೊಂಡಿದ್ದಾರೆ. ಸಹೋದರಿ ಗೀತಾಳಿಗೆ ಕರೆ ಮಾಡಿ ತಮ್ಮ ಅಳಿಯಂದಿರಿಗೆ ನಾಮಕರಣ ಮಾಡಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು ಸಲಹೆ ಸೂಚನೆ ನೀಡುವ ಮೂಲಕ ಕಾರ್ಯಕ್ರಮ ನೆರವೇರಿಸಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಇಂದಿನಿಂದ ಸಂಪೂರ್ಣ ಲಾಡ್‌ಕೌನ್!
ಬಸವ ಜಯಂತಿ ಹಾಗೂ ಅಕ್ಷಯ ತೃತೀಯ ಶುಭ ದಿನ ಇದು. ಅಳಿಯ ಬಂದು ಹೋಗಲು ಸಾರಿಗೆ ಸಮಸ್ಯೆ ಇರುವುದರಿಂದ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಈ ರೀತಿ ವಿಡಿಯೋ ಕಾಲ್ ಮಾಡುವ ಮೂಲಕ ನಾಮಕರಣ ನೆರೆವೇರಿಸಲಾಗಿದೆ ಎಂದು ಗದಗ ಸುಷ್ಮಾ ಸುನೀಲ್ ಹಳ್ಳಿ ತಿಳಿಸಿದ್ದಾರೆ.