ಉಡುಪಿ: 'ಗಾಂಧಿಯನ್ನು ಅವಮಾನಿಸಿದ್ದಕ್ಕೆ ನಳಿನ್‌ಗೆ ಪ್ರಮೋಷನ್'

Published : Aug 22, 2019, 07:39 AM IST
ಉಡುಪಿ: 'ಗಾಂಧಿಯನ್ನು ಅವಮಾನಿಸಿದ್ದಕ್ಕೆ ನಳಿನ್‌ಗೆ ಪ್ರಮೋಷನ್'

ಸಾರಾಂಶ

ಸಂಸದ ನಳಿನ್‌ ಕುಮಾರ್ ಕಟೀಲ್ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಿಸಿರುವ ಬಗ್ಗೆ ಮಾಜಿ ಸಚಿವ ರಮನಾಥ್ ರೈ ಟೀಕೆ ವ್ಯಕ್ತಪಡಿಸಿದ್ದಾರೆ. ಹಿಂದೆ ಗಾಂಧೀಜಿಯನ್ನು ಅವಮಾನಿಸಿದ್ದಕ್ಕೆ ನಳೀನ್‌ಗೆ ಬಿಜೆಪಿ ಹೈಕಮಾಂಡ್ ಪ್ರಮೋಷನ್ ಕೊಟ್ಟಿದೆ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ಉಡುಪಿ(ಆ.22): ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಅವಮಾನ ಮಾಡಿದ್ದಕ್ಕೆ ಅವರ ಹೈಕಮಾಂಡ್ ಅವರಿಗೆ ಪ್ರಮೋಷನ್ ಕೊಟ್ಟು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ನ ಮಾಜಿ ಸಚಿವ ಬಿ.ರಮಾನಾಥ ರೈ ಲೇವಡಿ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಅತಿವೃಷ್ಟಿ ಹಾನಿಯ ಸಮೀಕ್ಷೆಗೆ ಆಗಮಿಸಿದ್ಧ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಳಿನ್ ಕುಮಾರ್ ಬಹಳ ದೊಡ್ಡ ಬುದ್ಧಿವಂತ ಇರಬಹುದು, ಅವರು ಎಷ್ಟು ಶಿಕ್ಷಣ ಪಡೆದಿದ್ದಾರೆ ಎನ್ನುವುದು ನಾನು ಕೇಳುವುದಿಲ್ಲ, ಆದರೇ ವಿಶ್ವವೇ ಗೌರವಿಸುವ ಮಹಾತ್ಮ ಗಾಂಧಿಗೆ ಅವರು ಬೈದಿದ್ದಾರೆ. ಆಗ ಮೋದಿಯಾಗ್ಲಿ ಅಮಿತ್ ಷಾ ಆಗ್ಲಿ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ರ್‍ಯಾಂಕ್ ಕೊಟ್ಟಿದ್ದಾರೆ. ಇದು ಭಾರತೀಯ ಝೂಟ್ ಪಾರ್ಟಿಯಲ್ಲಿ ಮಾತ್ರ ಸಾಧ್ಯ ಎಂದು ರೈ ಟೀಕಿಸಿದರು.

370ನೇ ವಿಧಿ ರದ್ದತಿ ಹಿಂದೆ ಕರ್ನಾಟಕ ಶಕ್ತಿದೇವತೆ: ಎಷ್ಟು ಅಚ್ಚರಿಯೋ ಅಷ್ಟೇ ಸತ್ಯ

ನಳಿನ್ ಕುಮಾರ್ ಅವರು ಜನರಿಗಾಗಿ ಮಾಡಿದ್ದೇನಿಲ್ಲ, ಆದರೂ ಮಂಗಳೂರಿನ ಜನರು ಮೇಲಿನವರನ್ನು ನೋಡಿ ನಳಿನ್ ಗೆ ಮತ ಹಾಕಿದ್ದಾರೆ, ಆಗ ಮೇಲೆ ನೋಡಿದ ಜನರು ಇನ್ನೂ ಕೆಳಗೆ ನೋಡುತ್ತಿಲ್ಲ, ಯಾಕೆಂದರೆ ಜನರು ಆಕಾಶ ನೋಡುವಂತಹ ಪರಿಸ್ಥಿತಿಯನ್ನು ನಳಿನ್ ಮಂಗಳೂರಿನ ಜನರಿಗೆ ತಂದಿಟ್ಟಿದ್ದಾರೆ ಎಂದವರು ಆರೋಪಿದರು.

ಮಂಗಳೂರು: ಫಲವತ್ತಾದ ಪ್ರದೇಶದಲ್ಲೀಗ ಎಲ್ಲಿ ನೋಡಿದರೂ ಮರಳು..!

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ