ಉಡುಪಿ: 'ಸಿಎಂ ರಾತ್ರಿ ಫೋನ್‌ ಮಾಡಿದಾಗ್ಲೇ ಗೊತ್ತಾಯ್ತು' ಸಂಭ್ರಮ ಹಂಚಿಕೊಂಡ ಸಚಿವರ ಕುಟುಂಬ

By Kannadaprabha NewsFirst Published Aug 21, 2019, 4:10 PM IST
Highlights

ಕೋಟದಲ್ಲಿರುವ ಸಣ್ಣ ಮನೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರ ಪತ್ನಿ ಶಾಂತ ಮತ್ತು ಮಕ್ಕಳಾದ ಶೃತಿ ಮತ್ತು ಸ್ವಾತಿ ಅವರು ಟಿ.ವಿ.ಯಲ್ಲಿ ಪ್ರಮಾಣವಚನದ ನೇರ ಪ್ರಸಾರವನ್ನು ವೀಕ್ಷಿಸಿ ಸಂತಸಪಟ್ಟರು. ಅತ್ತ ಬೆಂಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಇತ್ತ ಅವರ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು.

ಉಡುಪಿ(ಆ.21): ಅತ್ತ ಬೆಂಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಇತ್ತ ಅವರ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು.

ಕೋಟದಲ್ಲಿರುವ ಸಣ್ಣ ಮನೆಯಲ್ಲಿ ಅವರ ಪತ್ನಿ ಶಾಂತ ಮತ್ತು ಮಕ್ಕಳಾದ ಶೃತಿ ಮತ್ತು ಸ್ವಾತಿ ಅವರು ಟಿ.ವಿ.ಯಲ್ಲಿ ಪ್ರಮಾಣವಚನದ ನೇರ ಪ್ರಸಾರವನ್ನು ವೀಕ್ಷಿಸಿ ಸಂತಸಪಟ್ಟರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಂತಾ ಅವರು, ಸೋಮವಾರ ರಾತ್ರಿ 11.30ಕ್ಕೆ ಸಿಎಂ ಯಡಿಯೂರಪ್ಪ ಅವ್ರು ಫೋನ್‌ ಮಾಡಿ ತಕ್ಷಣ ಬೆಂಗ್ಳೂರಿಗೆ ಹೊರಡುವಂತೆ ಹೇಳಿದ್ರು, ಆಗ ನಮ್ಗೆ ಇವ್ರು ಮಂತ್ರಿಯಾಗ್ತಾರೆ ಎಂತ ಗೊತ್ತಾಗಿ ಖುಷಿ ಆಯಿತು. ಕಳೆದ ಬಾರಿ ಮಂತ್ರಿಯಾಗಿ ಒಳ್ಳೆಯ ಕೆಲ್ಸ ಮಾಡಿದ್ರು, ಕೆಲಸ ಈ ಬಾರಿಯೂ ಮಾಡಬೇಕು. ಕಷ್ಟದಲ್ಲಿರುವ ಜನ್ರ ಸಮಸ್ಯೆ ಬಗೆಹರಿಸಿ, ಬೇಡಿಕೆ ಈಡೇರಿಸ್ಬೇಕು ಎಂದು ಆಶಿಸಿದರು.

ಮಂಗಳೂರು: ಫಲವತ್ತಾದ ಪ್ರದೇಶದಲ್ಲೀಗ ಎಲ್ಲಿ ನೋಡಿದರೂ ಮರಳು..!

ಕೋಟ ಅವರ ಮಕ್ಕಳು ಪ್ರತಿಕ್ರಿಯೆ ನೀಡಿ, ಅಪ್ಪ ಯುವಜನತೆಗೆ ಒಳ್ಳೆಯದಾಗುವಂತದ್ದು ಏನಾದ್ರು ಮಾಡಬೇಕು. ಉದ್ಯೋಗಕ್ಕೆ ಸಹಾಯ ಆಗುವ ಕೆಲಸ ಮಾಡಲಿ. ಶಿಕ್ಷಣಕ್ಕೆ ಸಂಬಂಧಪಟ್ಟಹಲವು ಕೆಲಸ ಮಾಡಲಿ ಎಂದು ಹೇಳಿದರು.

click me!