'ಜಮೀರ್ ಒಬ್ರೆ ಕ್ಯಾಸಿನೋಗೆ ಹೋಗ್ತಿರಲಿಲ್ಲ, ಜೊತೆಗೆ ಇವ್ರೆಲ್ಲಾ ಇರ್ತಿದ್ರು'

Kannadaprabha News   | Asianet News
Published : Sep 17, 2020, 07:06 AM IST
'ಜಮೀರ್ ಒಬ್ರೆ ಕ್ಯಾಸಿನೋಗೆ ಹೋಗ್ತಿರಲಿಲ್ಲ, ಜೊತೆಗೆ ಇವ್ರೆಲ್ಲಾ ಇರ್ತಿದ್ರು'

ಸಾರಾಂಶ

ರಾಜ್ಯದಲ್ಲಿ ಡ್ರಗ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದ್ದು ಹಲವು ಮುಖಂಡರು ಈಗಾಗಲೇ ಸಿಕ್ಕಿ ಬಿದ್ದಿದ್ದಾರೆ. ಜೊತೆಗೆ ಇದೀಗ ದಿನಿದಿನವೂ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. 

ನಾಗಮಂಗಲ (ಸೆ.17):  ಕರ್ನಾಟಕದ ದುಡ್ಡೆಲ್ಲಾ ಶ್ರೀಲಂಕಾದ ಕ್ಯಾಸಿನೋಗೆ ಹೋಗುತ್ತಿದೆ. ರಾಜ್ಯದಲ್ಲಿ ಹೆಚ್ಚು ದುಡ್ಡು ಮಾಡಿ ಕ್ಯಾಸಿನೋದಲ್ಲಿ ಕಳೆದುಕೊಳ್ಳುತ್ತಿದ್ದಾರೆ, ಅದಕ್ಕಾಗಿ ಇಲ್ಲಿನ ದುಡ್ಡು ಇಲ್ಲೆ ಉಳಿಯಬೇಕಾದರೆ ಕ್ಯಾಸಿನೋ ಕರ್ನಾಟಕದಲ್ಲೇ ಆರಂಭಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡುವುದಾಗಿ ಶಾಸಕ ಸುರೇಶ್‌ಗೌಡ ಹೇಳಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣವೊಂದಿದ್ದರೆ ಪ್ರಪಂಚದಲ್ಲಿ ಸಿಗುವ ಎಲ್ಲ ವಸ್ತುಗಳು ಶ್ರೀಲಂಕಾದ ಕ್ಯಾಸಿನೋದಲ್ಲಿಯೇ ಸಿಗುತ್ತದೆ. ಇಲ್ಲಿ ಯಾರ್ಯಾರು ಹೆಚ್ಚಿಗೆ ದುಡ್ಡು ಮಾಡಿದ್ದಾರೋ ಅವರೆಲ್ಲರೂ ಅಲ್ಲಿ ಹೋಗಿ ದುಡ್ಡು ಕಳೆಯುತ್ತಿದ್ದಾರೆ. 

ನಶೆಯಲ್ಲಿದ್ರಾ ಸೆಲೆಬ್ರಿಟಿಗಳು; ಕರಣ್ ಮನೆಯ ಪಾರ್ಟಿ ವಿಡಿಯೋ ಸತ್ಯ!

ಕ್ಯಾಸಿನೋಗೆ ಶಾಸಕ ಜಮೀರ್‌ ಒಬ್ಬರೇ ಹೋಗುತ್ತಿಲ್ಲ. ಅಲ್ಲಿಗೆ ಒಂದು ದೊಡ್ಡ ಗುಂಪೇ ಹೋಗುತ್ತಿದೆ. ಎಲ್ಲರ ಪಾಸ್‌ ಪೋರ್ಟ್‌ ಪರಿಶೀಲಿಸಿದರೆ ಯಾರು ಯಾವಾಗ ಎಲ್ಲೆಲ್ಲಿಗೆ ಹೋಗಿದ್ದರು ಎಂಬುದು ತಿಳಿಯುತ್ತದೆ ಎಂದು ಹೇಳಿದರು.

ಈಗಾಗಲೇ ರಾಜ್ಯದಲ್ಲಿ ಡ್ರಗ್ ಮಾಫಿಯಾ ಸಾಕಷ್ಟು ಸದ್ದು ಮಾಡುತ್ತಿದ್ದು, ಹಲವರು ಈ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಅಷ್ಟೇ ಅಲ್ಲದೇ ಹಲವು ಪ್ರಮುಖರೇ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

PREV
click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!