Kolara; ನಾಡಪ್ರಭು ಕೆಂಪೇಗೌಡರ ಪ್ರಗತಿ ಪುತ್ಥಳಿ ರಥಯಾತ್ರೆ

By Suvarna NewsFirst Published Oct 27, 2022, 10:07 PM IST
Highlights

 ಕೋಲಾರದ ಟೇಕಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಪ್ರಗತಿ ಪುತ್ಥಳಿ ರಥಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ  ಕಂದಾಯ ಸಚಿವರಾದ ಆರ್.ಅಶೋಕ್ ಅವರು   ಪ್ರತಿಯೊಬ್ಬರೂ ಕೆಂಪೇಗೌಡರ ಮಾರ್ಗದರ್ಶನದಲ್ಲಿ ಸಾಗುವದರಿಂದ  ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು. 

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ(ಅ.27): ಆಧುನಿಕ ಬೆಂಗಳೂರು ನಿರ್ಮಾತರಾದ ಕೆಂಪೇಗೌಡ ಅವರ ಕೊಡುಗೆ  ನಾಡಿಗೆ ಅಪಾರವಾದದ್ದು ಪ್ರತಿಯೊಬ್ಬರೂ ಕೆಂಪೇಗೌಡರ ಮಾರ್ಗದರ್ಶನದಲ್ಲಿ ಸಾಗುವದರಿಂದ  ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ತಿಳಿಸಿದರು. ಇಂದು ನಗರದ ಟೇಕಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಪ್ರಗತಿ ಪುತ್ಥಳಿ ರಥಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕೆಂಪೇಗೌಡ ರವರಿಗೆ  ಮತ್ತು ಕೋಲಾರ ಜಿಲ್ಲೆಗೆ ಅಭಿನವ ಸಂಬಂಧವಿದೆ. ಅವರ ಸಾಮ್ರಾಜ್ಯ ಸ್ಥಾಪನೆ ಮತ್ತು ಆಡಳಿತದಿಂದ ಇತಿಹಾಸ  ನಿರ್ಮಾಣವಾಯಿತು ಎಂದರು. ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಳೆಯಿಂದ ಕೋಲಾರ ಜಿಲ್ಲೆಯಲ್ಲಿ ಕೆರೆಗಳು ತುಂಬಿದು ಸಂತೋಷದ ವಿಷಯ ಇಡೀ ಕೋಲಾರ ಹಸಿರಿನಿಂದ ಕೂಡಿರುವುದರಿಂದ ಬಹು ಸುಂದರವಾಗಿ ಕಾಣುತ್ತಿದೆ.  ಕೋಲಾರ ಸುತ್ತಮುತ್ತಲಿನ ಭಾಗಗಳಲ್ಲಿ ಕೆಂಪೇಗೌಡರು ಆಡಳಿತವನ್ನು ನಡೆಸಿದ್ದಾರೆ. ಇಡೀ ದೇಶಕ್ಕೆ ಬೆಂಗಳೂರು  ನಗರ ಆಧುನಿಕತೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು. ನವೆಂಬರ್ 11 ರಂದು ಬೆಂಗಳೂರಿನಲ್ಲಿ ಕೆಂಪೇಗೌಡರ ಕಂಚಿನ ಪುತ್ಥಳಿಯ ಅನಾವರಣಗೊಳ್ಳಲಿದೆ  ಈ  ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಬೇಕು.ಕೋಲಾರ ಜಿಲ್ಲೆಯ ಎಲ್ಲಾ ಗ್ರಾಮಗಳಿಂದ ಮಣ್ಣನ್ನು ತಂದು ಕೆಂಪೇಗೌಡರ ಪುತ್ಥಳಿಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಉನ್ನತ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ  ಡಾ|| ಸಿ.ಎನ್.ಅಶ್ವತ್ ನಾರಾಯಣ್ ಅವರು ಮಾತನಾಡಿ ಕೋಲಾರ ಜಿಲ್ಲೆಯಲ್ಲಿ ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು  ಹಮ್ಮಿಕೊಂಡಿರುವುದು ಸಂತೋಷದ ವಿಷಯವಾಗಿದೆ. ಕೆಂಪೇಗೌಡರ ನಾಯಕತ್ವ ನಮ್ಮ ಬದುಕಿನ ಪ್ರೇರಣೆಯಾಗಬೇಕು. ರಾಜ್ಯದ ವಿವಿಧ ಕಡೆ ಕೆಂಪೇಗೌಡರವರು ಆಡಳಿತ ನಡೆಸಿದ್ದಾರೆ.

ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ: ಕಾರ‍್ಯಕ್ರಮ ಸಿದ್ಧತೆ ಪರಿಶೀಲಿಸಿದ ಸಚಿವರು

ಹಂಪಿಯ ಸ್ಪೂರ್ತಿಯಿಂದ ಬೆಂಗಳೂರು ನಗರವನ್ನು ಕೆಂಪೇಗೌಡರು ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಕೆರೆಗಳನ್ನು  ಮತ್ತು ತೋಟಗಳನ್ನು ಅಭಿವೃದ್ಧಿಪಡಿಸಲು ಮುಂದಾದ ಮಹಾಪುರುಷ ಕೆಂಪೇಗೌಡ. ಶೌರ್ಯ ಮತ್ತು ಪರಾಕ್ರಮದಲ್ಲಿ ಕೆಂಪೇಗೌಡರು ಹೆಚ್ಚು ಹೆಸರು ವಾಸಿಯಾಗಿದ್ದರು. ಮುಂದಿನ ವರ್ಷಗಳಲ್ಲಿ ಆಧುನಿಕತೆಯಲ್ಲಿ ಇಡೀ ವಿಶ್ವದಲ್ಲೆ ಬೆಂಗಳೂರು ನಗರ ಪ್ರಥಮ ಸ್ಥಾನಗಳಿಸುತ್ತದೆ ಎಂದು ತಿಳಿಸಿದರು.

ಕೆಂಪೇಗೌಡ ಪ್ರತಿಮೆ: ಗುರುವಾರ ಪಿಎಂ ಮೋದಿ ಜೊತೆ ಸಿಎಂ ಬೊಮ್ಮಾಯಿ ವಿಡಿಯೋ ಕಾನ್ಫರೆನ್ಸ್

ಕಾರ್ಯಕ್ರಮದಲ್ಲಿ ತೋಟಗಾರಿಕೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಮುನಿರತ್ನ, ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಶಾಸಕರಾದ ಡಾ|| ವೈ.ಎ.ನಾಯಣಸ್ವಾಮಿ, ಸಂಸದರಾದ ಎಸ್. ಮುನಿಸ್ವಾಮಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್, ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

click me!