Chitradurga: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪರಮಶಿವಯ್ಯ ವಿರುದ್ದ ಜಿತೇಂದ್ರ ಕಿಡಿ

By Govindaraj S  |  First Published Oct 27, 2022, 7:21 PM IST

ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಿ.ಎಸ್.ಪರಮಶಿವಯ್ಯನವರು ಮುರುಘಾ ಮಠದ ಬಗ್ಗೆ ನೀಡಿರುವ ಹೇಳಿಕೆ ಹಾಸ್ಯಾಸ್ಪದ. ಶ್ರೀ ಮುರುಘಾ ಮಠದ ಬಗ್ಗೆ ನೀಡಿರುವ ಹೇಳಿಕೆಯು ಬಹಳ ಹಾಸ್ಯಾಸ್ಪದದಿಂದ ಕೂಡಿದೆ ಎಂದು ಮುರುಘ ಮಠದ ಸಲಹಾ ಸಮಿತಿ ಸದಸ್ಯ ಹಾಗೂ ಮುರುಘಾ ಶ್ರೀ ಆಪ್ತ ಜಿತೇಂದ್ರ ಎನ್ ಹುಲಿಕುಂಟೆ ವ್ಯಂಗ್ಯವಾಡಿದ್ದಾರೆ. 


ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಅ.27): ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಬಿ.ಎಸ್.ಪರಮಶಿವಯ್ಯನವರು ಮುರುಘಾ ಮಠದ ಬಗ್ಗೆ ನೀಡಿರುವ ಹೇಳಿಕೆ ಹಾಸ್ಯಾಸ್ಪದ. ಶ್ರೀ ಮುರುಘಾ ಮಠದ ಬಗ್ಗೆ ನೀಡಿರುವ ಹೇಳಿಕೆಯು ಬಹಳ ಹಾಸ್ಯಾಸ್ಪದದಿಂದ ಕೂಡಿದೆ ಎಂದು ಮುರುಘ ಮಠದ ಸಲಹಾ ಸಮಿತಿ ಸದಸ್ಯ ಹಾಗೂ ಮುರುಘಾ ಶ್ರೀ ಆಪ್ತ ಜಿತೇಂದ್ರ ಎನ್ ಹುಲಿಕುಂಟೆ ವ್ಯಂಗ್ಯವಾಡಿದ್ದಾರೆ. 

Latest Videos

undefined

ಮುರುಘಾ ಶರಣರ ಬಗ್ಗೆ ಇವರು ನೀಡಿರುವ ಹೇಳಿಕೆಯು ಕಾನೂನಿನಲ್ಲಿಯೇ ಇಲ್ಲದ ಹೊಸ ಪದವಾಗಿದೆ. ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದು ಎನ್ನುವುದನ್ನು ಮರೆತು, ಮುರುಘಾ ಶರಣರು ಹೊರಗೆ ಬರಲು ಸಾಧ್ಯವಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದಾರೆ. ಬಿ.ಎಸ್. ಪರಮಶಿವಯ್ಯನವರು ಹಿರಿಯರು ಹಾಗೂ ಹಲವಾರು ಜವಾಬ್ದಾರಿ ಗಳನ್ನು ನಿರ್ವಹಿಸಿರುವವರು, ಇವರು ಈ ರೀತಿ ಹೇಳಿಕೆ ನೀಡಿರುವುದು ಹಾಸ್ಯಸ್ಪದವಾಗಿದೆ. ಶಿಕ್ಷೆಗೆ ಗುರಿಯಾಗಿರುವ ಆರೋಪಿಗಳಿಗೆ ಅನ್ವಯವಾಗುವ ಹೇಳಿಕೆಯನ್ನು ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶರಣರ ಬಗ್ಗೆ ನೀಡಿದ ಹೇಳಿಕೆ ಬಾಲಿಶ ಎನ್ನಿಸುತ್ತದೆ. 

Chitradurga: ದೀಪಾವಳಿ ಪ್ರಯುಕ್ತ ಕೋಟೆನಾಡಲ್ಲಿ ಪಂಚಪದಿ ಉತ್ಸವ: ದೇವರ ಎತ್ತುಗಳ ಭವ್ಯ ಮೆರವಣಿಗೆ

ಅದರಲ್ಲೂ ಸರ್ಪಭೂಷಣ ಮಠದ ಸ್ವಾಮೀಜಿಗಳನ್ನು ಮುರುಘಾ ಮಠದ ಪೀಠಾಧ್ಯಕ್ಷರನ್ನಾಗಿ ಮಾಡಬೇಕೆಂದು ಹೇಳಿದ್ದಾರೆ, ಎಲ್ಲರಿಗೂ ತಿಳಿದಿರುವ ಹಾಗೆ ಮುರುಘಾ ಮಠದ ಮೇಲೆ ಹಲವು ಕೇಸುಗಳನ್ನು ಸರ್ಪಭೂಷಣ ಮಠದವರು ದಾಖಲಿಸಿದ್ದಾರೆ. ಹಾಲಿ 3-4 ಕೇಸುಗಳು ವಿಚಾರಣೆ ಹಂತದಲ್ಲಿವೆ. ಲಿಂಗೈಕ್ಯ ಜಗದ್ಗುರುಗಳಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮೀಜಿಗಳ ವಿರುದ್ಧ ಅವರ ಕೊನೆಯ ದಿನಗಳಲ್ಲಿ ಜಾಮೀನು ರಹಿತ ಬಂಧನದ ನೋಟಿಸನ್ನು ನೀಡಿದ್ದನ್ನು ಭಕ್ತರು ಇನ್ನು ಮರೆತಿಲ್ಲ.

ಮುರುಘಾ ಮಠವು ಏಕ ವ್ಯಕ್ತಿ ಟ್ರಸ್ಟ್ ಆಗಿದ್ದು, ಪೀಠಾಧ್ಯಕ್ಷರಾದ ಮುರುಘಾ ಶರಣರು ಸರ್ವಾಧಿಕಾರ ಹೊಂದಿರುತ್ತಾರೆ. ಉತ್ತರಾಧಿಕಾರಿಯನ್ನು ಅಥವಾ ಪೀಠಾಧ್ಯಕ್ಷರನ್ನು ನೇಮಿಸುವ ಅಧಿಕಾರ ಮುರುಘಾ ಶರಣರಿಗೆ ಮಾತ್ರ ಇರುತ್ತದೆ. ಈ ರೀತಿ ಹೇಳಿಕೆಗಳನ್ನು ನೀಡುವ ಬದಲು ಲಿಂಗೈಕ್ಯ ಜಗದ್ಗುರುಗಳಾದ ಶ್ರೀ ಜಯದೇವ ಮಹಾಸ್ವಾಮಿಗಳು ನೀಡಿರುವ ಅಪಾರ ಕೊಡುಗೆಯಿಂದ ಇಂದು ಲಾಭ ಮತ್ತು ಅಭಿವೃದ್ಧಿ ಕಾಣುತ್ತಿದ್ದೀರಿ. 1909ರಲ್ಲಿ ಜಗದ್ಗುರುಗಳು ರೂ.30000/-ಗಳ ದೇಣಿಗೆಯನ್ನು ನೀಡಿ ಮೈಸೂರು ಮಹಾರಾಜರಿಂದ ಬೆಂಗಳೂರಿನ ಹೃದಯಭಾಗವಾದ ಗಾಂಧಿನಗರದಲ್ಲಿ 1-33 ಗುಂಟೆ ಜಾಗವನ್ನು ಕೊಡಿಸಿರುವುದನ್ನು ಮರೆತು ಅವರ ಸ್ಮರಣೆ ಮಾಡದೆ ಜಯಂತೋತ್ಸವವನ್ನು ಆಚರಿಸದೆ, ಅವರ ಒಂದು ಭಾವಚಿತ್ರವನ್ನು ಸಹ ಹಾಕದೇ ತಮ್ಮ ಫೋಟೋಗಳನ್ನು ಹಾಕಿಕೊಂಡು ಮೆರೆಯುತ್ತಿದ್ದೀರಿ. ಇದು ಕೃತಜ್ಞತೆಯ ಪ್ರಶ್ನೆಯಾಗಿದೆ. 

ಸಂಬಂಧಿ ಮೇಲೆ ನಿರಂತರ ಅತ್ಯಾಚಾರ ಮಾಡಿದ ಸರ್ಕಲ್‌ ಇನ್ಸ್‌ಪೆಕ್ಟರ್‌ ಅಮಾನತು

ಕರ್ನಾಟಕದಲ್ಲಿ ಪ್ರತಿಯೊಂದು ಮಠಕ್ಕೂ ತನ್ನದೇ ಆದ ಪದ್ಧತಿ, ಪರಂಪರೆ, ಕಾನೂನು ಇರುತ್ತವೆ. ಮಠಗಳು ಪರಸ್ಪರ ಮಾರ್ಗದರ್ಶನವನ್ನಷ್ಠೆ ಮಾಡಿಕೊಂಡು ಬಂದಿರುತ್ತವೆ. ಆಂತರಿಕ ವಿಚಾರದಲ್ಲಿ ಮೂಗು ತೂರಿಸಿರುವುದಿಲ್ಲ, ಆದರೆ ಹಿರಿಯರಾದ ಬಿ.ಎಸ್. ಪರಮಶಿವಯ್ಯನವರು ಈ ರೀತಿ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ. ಹಿರಿಯರಾದ ತಾವು ಬೇಡವಾದ ವಿಚಾರಗಳಿಗೆ ಮೂಗು ತೂರಿಸುವ ಬದಲು ಸರ್ಕಾರವು ಸಮಾಜದ ಅಭಿವೃದ್ಧಿಗಾಗಿ ವೀರಶೈವ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದೆ. ಆ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಸಮಾಜದ ಅಭಿವೃದ್ಧಿಗೆ ಶ್ರಮವಹಿಸಲು ಆಗ್ರಹಿಸಿದರು.

click me!