ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬಳ್ಳಾರಿ (ಎ.4): ಮೋಸ ಹೋಗೋರು ಇರೋವರೆಗೂ ಮೋಸ ಮಾಡೋರು ಇದ್ದೇ ಇರುತ್ತಾರೆ ಎನ್ನುವ ಮಾತಿಗೆ ಈ ಘಟನೆ ಸಾಕ್ಷಿಯಾಗಿದೆ. ಭವಿಷ್ಯ ಹೇಳುವ ನೆಪದಲ್ಲಿ ಮನೆಗೆ ಬಂದ ಅಪರಿಚಿತ ಮಹಿಳೆ ವಾಮಾಚಾರ ಮಾಡೋ ಮೂಲಕ ಮನೆಯೊಡತಿ ಕಣ್ಣೆದುರೇ ಕತ್ತಿನ ಸರ, ಕಿವಿ ಓಲೆ, ಮೂಗುತಿಯನ್ನ ಕದ್ದಿರೋ ಘಟನೆ ಸಿರುಗುಪ್ಪ ತಾಲೂಕಿನ ಬಂಡ್ರಾಳು ಗ್ರಾಮದಲ್ಲಿ ನಡೆದಿದೆ.
undefined
ಅಮಾಯಕ ಮಹಿಳೆಯರನ್ನು ಟಾರ್ಗೆಟ್ ಮಾಡೋ ಈ ಗ್ಯಾಂಗ್ ಆಂಧ್ರ ಮತ್ತು ಕರ್ನಾಟಕ ಬಾರ್ಡರ್ ಬಳಿ ಇರೋ ಗ್ರಾಮಗಳನ್ನು ಗುರಿಯಾಗಿಸಿ ಕಳ್ಳತನ ಮಾಡೋ ಕೆಲಸ ಮಾಡ್ತಿದೆ. ಬಂಡ್ರಾಳು ಗ್ರಾಮದ ಮಹಾದೇವಮ್ಮ ಎನ್ನುವ ಮಹಿಳೆ ಮನೆಗೆ ಭೇಟಿ ನೀಡಿದ ಅಪರಿಚಿತ ಮಹಿಳೆ ಮೊದಲು
ದೇವಸ್ಥಾನಕ್ಕೆ (ಯಾತ್ರೆ) ಹೋಗಲು 10 ರೂಪಾಯಿ ಕೊಡುವಂತೆ ಮನವಿ ಮಾಡಿ ಮನೆಯೊಳಗೆ ಬಂದಿದ್ದಾಳೆ. ದೇವಸ್ಥಾನಕ್ಕೆ ಹೋಗೋರಿಗೆ ಹಣ ಇಲ್ಲವೆನ್ನೋದು ಹೇಗೆ ಎಂದು ಮೊದಲು ಮಹಾದೇವಮ್ಮ 10 ರೂ ಕೊಟ್ಟಿದ್ದಾರೆ. ಬಳಿಕ ನಿಮ್ಮ ಭವಿಷ್ಯ ಹೇಳುವೆ ನಿಮ್ಮ ಮುಖ ನೋಡಿದ್ರೇ ನಿಮ್ಮ ಮುಖದಲ್ಲಿ ಅದೃಷ್ಟ ತಾಂಡವಾಡ್ತಿದೆ ಎಂದೆಲ್ಲಾ ಸುಳ್ಳು ಹೇಳಿ ನಂಬಿಸೋ ಯತ್ನ ಮಾಡಿ ಸಫಲರಾದ ಮಹಿಳೆ ಮೈಮೇಲೆ ಇರೋ ಬಂಗಾರ ದೋಚಿದ್ದಾರೆ.
Mandya ಫೈನಾನ್ಸ್ ಕಂಪನಿಗೆ ಉಂಡೆ ನಾಮ ತಿಕ್ಕಿದ್ದ ಮ್ಯಾನೇಜರ್ ಬಂಧನ!
ಬಂಗಾರ ಡಬಲ್ ಮಾಡೋದಾಗಿ ವಂಚನೆ: ಭವಿಷ್ಯ ಹೇಳಲು ಕೂರಿಸಿದಾಗ ಮಹಾದೇವಮ್ಮ ಅವರಿಗೆ ನಿಮ್ಮ ಬಳಿ ಇರೋ ಬಂಗಾರ ಡಬಲ್ ಮಾಡೋದಾಗಿ ಹೇಳಿದ್ದಾರೆ. ನಂತರ ಬಂಗಾರ ಬಿಚ್ಚೋವಾಗ ನಿಧಾನವಾಗಿ ವಾಮಾಚಾರ ಮಾಡೋ ಮೂಲಕ ಮಾತು ಬಾರದಂತೆ ಮಾಡಿದ ಅಪರಿಚಿತ ಮಹಿಳೆ ಯಾವುದೋ ಒಂದು ಮಂತ್ರಗಳನ್ನು ಹೇಳಿ ಮನೆಯವರ ಎದುರಲ್ಲೇ ಬಂಗಾರ ಕದ್ದುಕೊಂಡು ಹೋಗಿದ್ದಾರೆ. ಇನ್ನೂ ಘಟನೆ ನಂತರ ಮಹಾದೇವಮ್ಮಗೆ ಪ್ರಜ್ಞೆ ಬರುತ್ತಿದ್ದಂತೆ ಕಿವಿಯೊಲೆ, ಮೂಗುತಿ ಅಪಹರಿಸಿರೋದು ಗೊತ್ತಾಗಿದೆ.
ಅಮೆರಿಕದಿಂದ ನಭಕ್ಕೆ ಹಾರಿದ ಖಾಸಗಿ ಶಕುಂತಲಾ ಉಪಗ್ರಹ, ಕನ್ನಡಿಗನ ಸಾಧನೆ!
ಕಳ್ಳರ ತಂಡವನ್ನು ಹುಡುಕಿದ್ರೂ ಪ್ರಯೋಜನವಾಗಿಲ್ಲ: ಇನ್ನೂ ಘಟನೆ ಬಳಿಕ ಎಚ್ಚತ್ತ ಮಹಾದೇವಮ್ಮ ಸ್ಥಳೀಯರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಗ್ರಾಮಸ್ಥರು ಮಹಿಳೆಗಾಗಿ ಹುಡುಕಾಟ ನಡೆಸಿದ್ದಾರೆ. ರಾರಾವಿ ಎನ್ನುವ ಮತ್ತೊಂದು ಗ್ರಾಮದಲ್ಲಿ ಕಳ್ಳರ ಗ್ಯಾಂಗ್ ಒಂದು ಚಿಕ್ಕ ಗುಡಿಸಲಿನಲ್ಲಿ ಇರೋದು ಗೊತ್ತಾಗಿದೆ. ಪೊಲೀಸರಿಗೆ ಮಾಹಿತಿ ರವಾನೆ ಮಾಡಿ ಅಲ್ಲಿಗೆ ಹೋಗೋದ್ರೊಳಗೆ ಕಳ್ಳತನ ಮಾಡಿದ ಮಹಿಳೆ ಎಸ್ಕೇಪ್ ಆಗಿದ್ದಾಳೆ. ಆದ್ರೇ ಆ ಮನೆಯಲ್ಲಿ ಇರೋ ಕಳ್ಳಿಯ ಸಂಬಂಧಿಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.