ನೆಹರು ನಿರ್ಧಾರದಿಂದ ಭಾರತ ದಯನೀಯ ಸ್ಥಿತಿ - ಎಸ್‌.ಎಲ್‌. ಭೈರಪ್ಪ

By Kannadaprabha News  |  First Published Mar 26, 2023, 5:55 AM IST

ದೇಶದ ಸಮ​ಗ್ರತೆ, ಸಾರ್ವ​ಭೌ​ಮ​ತೆಗೆ ಧಕ್ಕೆ ತರು​ವ ವ್ಯಕ್ತಿ​ಗ​ಳನ್ನೇ ತನ್ನ ಸುತ್ತ ಇರಿ​ಸಿ​ಕೊಂಡಿದ್ದ ಮೊದಲ ಪ್ರಧಾನಿ ನೆಹರೂ ತೆಗೆ​ದು​ಕೊಂಡ ನಿರ್ಧಾ​ರ​ಗಳ ಫಲದಿಂದ ಭಾರತ ದಯಾ​ನೀಯ ಸ್ಥಿತಿ ಎದು​ರಿ​ಸು​ವಂತಾ​ಯಿತು ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟರು.


  ಮೈಸೂರು :  ದೇಶದ ಸಮ​ಗ್ರತೆ, ಸಾರ್ವ​ಭೌ​ಮ​ತೆಗೆ ಧಕ್ಕೆ ತರು​ವ ವ್ಯಕ್ತಿ​ಗ​ಳನ್ನೇ ತನ್ನ ಸುತ್ತ ಇರಿ​ಸಿ​ಕೊಂಡಿದ್ದ ಮೊದಲ ಪ್ರಧಾನಿ ನೆಹರೂ ತೆಗೆ​ದು​ಕೊಂಡ ನಿರ್ಧಾ​ರ​ಗಳ ಫಲದಿಂದ ಭಾರತ ದಯಾ​ನೀಯ ಸ್ಥಿತಿ ಎದು​ರಿ​ಸು​ವಂತಾ​ಯಿತು ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟರು.

ನಗರದ ಗೋಪಾಲಸ್ವಾಮಿ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಸಂಜೆ ಸಾಮಾಜಿಕ ನ್ಯಾಯ ವೇದಿಕೆ, ಸಾಹಿತ್ಯ ಪ್ರಕಾಶನವು ಆಯೋಜಿಸಿದ್ದ ಚಿಂತಕ ಅಜಕ್ಕಳ ಗಿರೀಶ ಭಟ್‌ ಅವರ ಬಹುವಚನಕ್ಕೊಂದೇ ತತ್ವ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

Latest Videos

undefined

ನಂತರ ದೇಶದ ದಯಾ​ನಿಯ ಸ್ಥಿತಿಗೆ ಅವರೇ ನೇರ ಕಾರಣ. ನೆಹರು ಬೇರಿಯರ್‌ ಎಲ್ವಿ​ನ್‌​ನಂತಹ ಕ್ರೈಸ್ತ ಪಾದ್ರಿಗೆ ಲಕ್ಷಾಂತ ಹಣ ನೀಡಿದ್ದರಿಂದ ಮೇಘಾ​ಲ​ಯ​ ಭಾಗದ ಬುಡ​ಕಟ್ಟು ಸಮು​ದಾ​ಯ​ದ​ವರು ಕ್ರೈಸ್ತ ಧರ್ಮಕ್ಕೆ ಮತಾಂತ​ರ​ವಾದರು. ಸೈನ್ಯಕ್ಕೆ ಅನು​ದಾನ ಹೆಚ್ಚಿ​ಸದೇ ಹೋದ್ದರಿಂದ ಭಾರತದ ಮೇಲೆ ಚೀನಾ ಎರಡು ಬಾರಿ ದಾಳಿ ಮಾಡಿ, ನಮ್ಮ ನೆಲ ಕಬ​ಳಿ​ಸಿತು. ಇದ​ಕ್ಕೆ ಹೊಣೆ ಯಾರು ಎಂಬು​ದನ್ನು ನಾವು ಯೋಚಿಸಬೇಕು ಎಂದರು.

ಬ್ರಿಟಿಷರು ಬರೆದ ಕೃತಿಗಳನ್ನೇ ಆಧಾರವಾಗಿಟ್ಟುಕೊಂಡು ನೆಹರು ದಿ ಡಿಸ್ಕವರಿ ಆಫ್‌ ಇಂಡಿಯಾ ಕೃತಿ ರಚಿಸಿದರು. ಆರ್ಯರು ಹೊರ​ಗಿ​ನಿಂದ ಬಂದ​ವರು ಎಂಬ ಸಿದ್ಧಾಂತ ಬ್ರಿಟೀ​ಷರು ಸೃಷ್ಟಿ​ಸಿದ ಕಟ್ಟು​ಕತೆ. ದೇಶ​ದಲ್ಲಿ ಆಗಷ್ಟೇ ಸ್ವಾತಂತ್ರ್ಯ ಚಳ​ವಳಿ ಹುಟ್ಟಿ​ಕೊಂಡ ಸಮ​ಯ​ದಲ್ಲಿ ಹೋರಾ​ಟದ ದಿಕ್ಕು ತಪ್ಪಿ​ಸುವ ಸಲು​ವಾಗಿ, ಆರ್ಯ​ನ್ನರು ಹೊರ​ಗ​ನಿಂದ ಬಂದ​ವರು ಎನ್ನಲಾಯಿತು.

ಮೂಲದ ಪ್ರಕಾರ ಇಲ್ಲಿ​ರು​ವ​ವ​ರೆಲ್ಲ ಹೊರ​ಗಿ​ನಿಂದ ಬಂದ​ವರೇ ಆಗಿ​ದ್ದಾರೆ. ಹಾಗಾಗಿ ನಮ್ಮನ್ನು ಭಾರ​ತ​ದಿಂದ ಹೋಗಿ ಎನ್ನಲು ನಿವ್ಯಾರು ಎಂಬ ಸಿದ್ಧಾಂತ​ವನ್ನು ಬ್ರಿಟೀ​ಷರು ಹುಟ್ಟು​ಹಾ​ಕಿ​ದ್ದಾಗಿ ಅವರು ವಿವ​ರಿ​ಸಿ​ದ​ರು.

ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡ ಸಾವರ್ಕರ್‌ ಹಾಗೂ ನೆಹರು ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆದರೆ ನೆಹರು ಅವರನ್ನು ಡೆಹ​ರ​ಡೂನ್‌ ಸಮೀ​ಪದ ನೈನಿತಾಲ್‌ ಸರೋವರದ ಬಳಿಯ ಜೈಲಿಗೆ ಕಳುಹಿಸಲಾಯಿತು. ಆ ಜೈಲಿನ ಕೊಠಡಿ ವಿಶಾಲವಾದ ಕಿಟಕಿಯಲ್ಲಿ ನಿಂತು ನೋಡಿದರೆ ನೈನಿತಾಲ್‌ ಸರೋವರ ಕಾಣುತಿತ್ತು. ಅವರ ಕೊಠಡಿಗೆ ಮೇಜು, ಕುರ್ಚಿ, ಸೋಫಾ, ಹಾಸಿಗೆ ನೀಡಲಾಗಿತ್ತು. ಇದೇ ವೇಳೆ ಡಿಸ್ಕವರಿ ಆಫ್‌ ಇಂಡಿಯಾ ಕೃತಿ ರಚಿ​ಸು​ತ್ತಾ​ರೆ. ಆದರೆ, ಸಾವರ್ಕರ್‌ ಸೆರೆಮನೆವಾಸ ಅನುಭವಿಸಿದ್ದು ಅಂಡಮಾನ್‌ನ ಸೆಲ್ಯುಲಾರ್‌ ಜೈಲಿನಲ್ಲಿ. ಆ ಜೈಲಿನಲ್ಲಿ ನಿರಂತರ ದೈಹಿಕ ಕಿರು​ಕುಳ ಅನುಭವಿಸಿದರು. ಅವರಿಗೆ 52 ವರ್ಷಗಳ ಕಾಲ ಜೈಲು ಶಿಕ್ಷೆ ವಿಸಲಾಗಿತ್ತು. ಜೀವನವೆಲ್ಲ ಜೈಲಿನಲ್ಲಿ ಕಳೆದರೆ ಜೀವನ ಸಾರ್ಥಕವಾಗಲು ಸಾಧ್ಯವಿಲ್ಲ ಎಂದು ಅರಿತ ಸಾವರ್ಕರ್‌ ರಾಜಕೀಯ ವ್ಯಕ್ತಿಯಾಗಿ ಇನ್ನು ಮುಂದೆ ಗುರುತಿಸಿಕೊಳ್ಳುವುದಿಲ್ಲ ಎಂದು ಬ್ರಿಟೀಷರಿಗೆ ಬರೆದುಕೊಟ್ಟು ಜೈಲಿನಿಂದ ಬಿಡುಗಡೆಯಾದರು. ಆದರೆ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಾವರ್ಕರ್‌ ಕ್ಷಮೆಯಾಚಿಸಿದರು ಎಂದು ಕೆಲವರು ಟೀಕಿಸುತ್ತಿದ್ದಾರೆ ಎಂದು ಆರೋಪಿಸಿದರು.

ಲೇಖಕ ರೋಹಿತ್‌ ಚಕ್ರತೀರ್ಥ ಮಾತನಾಡಿ, ಇಂದಿಗೂ ಡಾ.ಎಸ್‌.ಎಲ್…. ಭೈರಪ್ಪ ಅವರಂತೆ ಬಲಪಂಥೀಯರ ಸಾಹಿತ್ಯ ಕೃತಿಗಳು ಚರ್ಚೆಯಾಗದ, ವಿಮ​ರ್ಶೆಗೆ ಒಪ​ಡದಂತೆ ನೋಡಿ​ಕೊ​ಳ್ಳುವ ಒಂದು ವರ್ಗ​ವಿದೆ. ಆದರೆ, ಎಲ್ಲರಿಗೂ ವಾಸ್ತವ ಏನು ಎಂಬುದು ಅರಿವಾಗುತ್ತಿದೆ ಎಂದರು.

ದೇಶಕ್ಕೆ ಆರ್ಯರು ವಲಸೆ ಬಂದರು, ಅವರು ಸ್ಥಳೀಯರ ಮೇಲೆ ಆಕ್ರಮಣ ಮಾಡಿದರು ಎಂಬ ಸುಳ್ಳುಗಳನ್ನು ಬಿತ್ತಲಾಗಿದೆ. ಯಾರೋ ನಮ್ಮನ್ನು ದಾರಿ ತಪ್ಪಿಸುವ ಸಲುವಾಗಿ ಬರೆದ ಲೇಖನವನ್ನೇ ನಾವು ಇದುವರೆಗೆ ನಂಬಿಕೊಂಡು ಬಂದೆವು. ಆದರೆ, ಇದೀಗ ನಿಜವಾದ ಇತಿಹಾಸ ಏನು ಎಂಬುದು ಜನರಿಗೆ ಅರ್ಥವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಕೀಲ ಒ. ಶಾಮ ಭಟ್‌, ಮಹಾರಾಜ ಎಜುಕೇಷನ್‌ ಟ್ರಸ್ವ್‌ ಅಧ್ಯಕ್ಷ ಡಾ.ಎಸ್‌. ಮುರಳಿ, ಲೇಖಕ ಅಜಕ್ಕಳ ಗಿರೀಶ ಭಟ್‌ ಇದ್ದರು.

click me!