ಮೈಸೂರು ಪುಸ್ತಕ ಪ್ರೇಮಿ ಸೈಯದ್ ಇಸಾಕ್‌ಗೆ ಹರಿದು ಬಂತು ನೆರವಿನ ಮಹಾಪೂರ

By Kannadaprabha News  |  First Published Apr 11, 2021, 2:41 PM IST

ಕನ್ನಡಪ್ರಭ, ಸುವರ್ಣ ನ್ಯೂಸ್‌ನ 2019ರ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ವಿಜೇತ ಮೈಸೂರಿನ ಕನ್ನಡ ಪ್ರೇಮಿ ಸೈಯದ್ ಇಸಾಕ್ ಅವರಿಗೆ ಈಗ ನೆರವಿನ ಮಹಾಪೂರವೇ ಹರಿದು ಬಂದಿದೆ. ಎಲ್ಲೆಡೆಯಿಂದ ವಿವಿಧ ರೀತಿಯ ಬೆಂಬಲ ಸಿಗುತ್ತಿದೆ. 


ಮೈಸೂರು (ಏ.11):   ಮೈಸೂರಿನ  ಕನ್ನಡ ಪ್ರೇಮಿ ಕನ್ನಡಪ್ರಭ, ಸುವರ್ಣ ನ್ಯೂಸ್‌ನ 2019ರ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ವಿಜೇತ  ಸೈಯ್ಯದ್ ಇಸಾಕ್ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿದ ಪ್ರಕರಣ ಬೆಳಕಿ ಬರುತ್ತಲೇ ಇದೀಗ ಅವರಿಗೆ ನರವಿನ ಮಹಾ ಪೂರವೇ ಹರಿದು ಬಂದಿದೆ. 

ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಕನ್ನಡ ಗ್ರಂಥಾಲಯ ಮರು ನಿರ್ಮಾಣಕ್ಕಾಗಿ ಹಲವರಿಂದ ಭಾರಿ ನೆರವು ಲಭ್ಯವಾಗಿದೆ. ವಿವಿಧ ಮೂಲಗಳಿಂದ 8 ಲಕ್ಷಕ್ಕೂ ಹೆಚ್ಚು ನೆರವು ನೀಡಲಾಗಿದೆ. 

Tap to resize

Latest Videos

undefined

ಕನ್ನಡಪ್ರಭ-ಸುವರ್ಣನ್ಯೂಸ್‌ 'ಅಸಾಮಾನ್ಯ ಕನ್ನಡಿಗ' ಪ್ರಶಸ್ತಿಗೆ ಭಾಜನರಾಗಿದ್ದ ಸೈಯದ್ ಇಸಾಕ್

"

ಅಕ್ಷರ ಪ್ರೇಮಿಯ ನೆರವಿವೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಸುರೇಶ್ ಕುಮಾರ್  ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿ ಎಲ್ಲೆಡೆಯಿಂದ ಅಪಾರವಾದ ಬೆಂಬಲ ಇಸಾಕ್ ಅವರಿಗೆ ಸಿಗುತ್ತಿದೆ.  ಉಪ ಮೇಯರ್ ಅನ್ವರ್ ಬೇಗ್ ಗ್ರಂಥಾಲಯ ಕಟ್ಟಿಸಿಕೊಡುವ ಭರವಸೆ ನೀಡಿದ್ದು, ವಿವಿಧ ಕನ್ನಡ ಸಂಘಟನೆಗಳು, ಪುಸ್ತಕ ಪ್ರೇಮಿಗಳಿಂದ ನೆರವು ದೊರಕಿದೆ. 

ಕನ್ನಡ ಪುಸ್ತಕ ಪ್ರೇಮಿ, ಕನ್ನಡಪ್ರಭ, ಸುವರ್ಣ ನ್ಯೂಸ್‌ನ 2019ರ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ ವಿಜೇತ ಸೈಯದ್‌ ಇಸಾಕ್‌ ಅವರ ಸಾರ್ವಜನಿಕ ಗ್ರಂಥಾಲಯಕ್ಕೆ ಪುಸ್ತಕ ಪ್ರೇಮಿಗಳು, ಅವರಿಗೆ ಪುಸ್ತಕ ಕಳುಹಿಸಿಕೊಡುವ ಅಭಿಯಾನ ಆರಂಭಿಸಿದ್ದಾರೆ. 

ಕಿಡಿಗೇಡಿಗಳ ಕೃತ್ಯದಿಂದ 11 ಸಾವಿರ ಪುಸ್ತಕಗಳು ಬೆಂಕಿಗಾಹುತಿ : ಪುನರ್ ನಿರ್ಮಾಣದ ಭರವಸೆ ..

ಜೀತದಾಳಾಗಿದ್ದ ಇಸಾಕ್‌ ಅವರು ಪ್ರತಿನಿತ್ಯ ಟೀ ಅಂಗಡಿ ಬಳಿ ಪತ್ರಿಕೆ ಓದಲು ಬರುತ್ತಿದ್ದ ಕೆಲವರನ್ನು ಗಮನಿಸಿ, ತಾನೇ ಏಕೆ ಗ್ರಂಥಾಲಯ ತೆರೆಯಬಾರದು ಎಂದೆನಿಸಿ ಗ್ರಂಥಾಲಯ ತೆರೆದಿದ್ದರು. ತಮ್ಮ ದುಡಿಮೆಯ ಒಂದಷ್ಟುಹಣವನ್ನು ಇದಕ್ಕಾಗಿ ಮೀಸಲಿಟ್ಟರು. ಇದರ ಉಪಯೋಗವನ್ನು ಸುತ್ತಮುತ್ತಲಿನ ಹಲವಾರು ವಿದ್ಯಾರ್ಥಿಗಳು ಪಡೆದಿದ್ದರು. ಈ ಗ್ರಂಥಾಲಯವನ್ನು ಮೂರು ಬಾರಿ ತೆರವುಗೊಳಿಸಲಾಗಿತ್ತು. ಇದಕ್ಕೆ ಬಗ್ಗದ ಇಸಾರ್‌ ಅವರು ಮತ್ತೆ ಗ್ರಂಥಾಲಯ ತೆರೆದಿದ್ದರು. ಆದರೆ, ಶುಕ್ರವಾರ ದುಷ್ಕರ್ಮಿಗಳು ಪುಸ್ತಕಗಳಿಗೆ ಬೆಂಕಿ ಹಚ್ಚುವ ಕೆಲಸವನ್ನು ದುಷ್ಕರ್ಮಿಗಳು ಮಾಡಿದ್ದಾರೆ. ಆದರೆ ಇದಕ್ಕೆ ಕಾರಣ ಏನು ಎನ್ನುವುದು ಇನ್ನೂ ತಿಳಿದುಬಂದಿಲ್ಲ.

ಕನ್ನಡಕ್ಕಾಗಿ ನನ್ನ ಉಸಿರು, ನನ್ನ ಪ್ರಾಣ: ಇಸಾಕ್

"

ಕನ್ನಡ ಪುಸ್ತಗಳೇ ಹೆಚ್ಚು:  ಇಸಾಕ್‌ ಸಂಗ್ರಹಿಸಿದ್ದ ಪುಸ್ತಕಗಳ ಪೈಕಿ ಕನ್ನಡ ಪುಸ್ತಕಗಳೇ ಶೇ.80 ರಷ್ಟಿತ್ತು. ಗ್ರಂಥಾಲಯಕ್ಕೆ ಬೆಂಕಿ ಹಚ್ಚಿರುವುದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟುವೈರಲ್‌ ಆಗಿತ್ತು. ಇದರಿಂದಾಗಿ ಇಸಾಕ್‌ ಅವರಿಗೆ ಜನ ಧೈರ್ಯ ತುಂಬಿದ್ದಾರೆ. ಇದೀಗ ಇಸಾಕ್‌ ಅವರ ಶ್ರಮಕ್ಕೆ ಬೆಂಬಲವಾಗಿ ನಿಂತ ಅನೇಕರು ಪುಸ್ತಕ ಕಳುಹಿಸಿಕೊಡುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸೈಯದ್‌ ಇಸಾಕ್‌ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರು, ತಮಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಂತೆಯೇ ಅನೇಕ ಮಂದಿ ಲೇಖಕರು, ಪ್ರಕಾಶಕರು ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

click me!