ಉಡುಪಿ ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಅಕೌಂಟ್ : ಹಣಕ್ಕೆ ಬೇಡಿಕೆ

By Suvarna NewsFirst Published Apr 11, 2021, 1:48 PM IST
Highlights

ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆಯಲಾಗಿದೆ. ಅಲ್ಲದೇ ಈ ನಕಲಿ ಖಾತೆ ಮೂಲಕ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿದೆ. 

ಉಡುಪಿ (ಏ.11): ನಕಲಿ ಫೇಸ್‌ಬುಕ್ ಅಕೌಂಟ್ ತೆರೆದು ಹಣ ವಂಚನೆ ಮಾಡುವ ಜಾಲ ಇದೀಗ  ಜಿಲ್ಲಾಧಿಕಾರಿಗೂ ಬಿಟ್ಟಿಲ್ಲ. ಉಡುಪಿ ಜಿಲ್ಲಾಧಿಕಾರಿಗೂ ಈಗ ನಕಲಿ ಫೇಸ್ ಬುಕ್ ಅಕೌಂಟ್ ಕಾಟ ತಟ್ಟಿದೆ.

ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮಲಾಲಗದ್ದೆ ಹೆಸರಲ್ಲಿ ನಕಲಿ ಫೇಸ್ ಬುಕ್ ಅಕೌಂಟ್ ತೆರೆದಿದ್ದು, ನಕಲಿ ಅಕೌಂಟಿನಿಂದ ಹಣಕ್ಕೆ ಡಿಮ್ಯಾಂಡ್ ಮಾಡಲಾಗಿದೆ. 
ಫೋನ್ ಪೇ ಮೂಲಕ ಹಣ ಪಾವತಿಸುವಂತೆ ಬೇಡಿಕೆ ಇಡಲಾಗಿದೆ. 

ಸಂಬಂಧಿಕರ ಅಕೌಂಟಿಗೆ ಹಣ ವರ್ಗಾಯಿಸುವಂತೆ ಜಗದೀಶ್ ಮಲಾಲ ಅವರ ಹೆಸರಿನ ನಕಲಿ ಫೇಸ್‌ಬುಕ್ ಖಾತೆಯಿಂದ ಮೆಸೇಜ್ ಮಾಡಿದ್ದಾರೆ.  ಅಧಿಕಾರಿಗಳನ್ನೇ ಟಾರ್ಗೆಟ್ ಮಾಡಿ ಹಣ ದೋಚುವ ಯತ್ನ ಮಾಡಲಾಗಿದೆ. 

ಡೀಸಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ : ಫ್ರೆಂಡ್ಸ್‌ ರಿಕ್ವೆಸ್ಟ್‌ ಕಳುಹಿಸಿ ಹಣಕ್ಕಾಗಿ ಬೇಡಿಕೆ .

ಇತ್ತೀಚಿಗೆ ಕೆಲ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲೂ ಹಣಕ್ಕೆ ಡಿಮ್ಯಾಂಡ್ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಈಗಾಗಲೇ ದೂರು ದಾಖಲಿಸಿದ್ದೇನೆ. ಯಾರೂ ಹಣ ಕೊಡಬೇಡಿ ಎಂದು ಜಿಲ್ಲಾಧಿಕಾರಿ ವಿನಂತಿ ಮಾಡಿಕೊಂಡಿದ್ದಾರೆ. 

ತಮ್ಮ ಅಧಿಕೃತ ಫೇಸ್‌ಬುಕ್ ಖಾತೆ ಮೂಲಕ ಉಡುಪಿ ಡಿಸಿ ಜಿ.ಜಗದೀಶ್ ವಿನಂತಿ ಮಾಡಿದ್ದಾರೆ. 

click me!