ಮೈಸೂರಲ್ಲಿ ಕಲುಷಿತ ನೀರು ಸೇವಿಸಿ ಯುವಕ ಸಾವು; ಸ್ಪೋಟಕ ಸತ್ಯ ಬಿಚ್ಚಿಟ್ಟ ಶಾಸಕ ಜಿ.ಟಿ. ದೇವೇಗೌಡ

Published : May 21, 2024, 02:07 PM IST
ಮೈಸೂರಲ್ಲಿ ಕಲುಷಿತ ನೀರು ಸೇವಿಸಿ ಯುವಕ ಸಾವು; ಸ್ಪೋಟಕ ಸತ್ಯ ಬಿಚ್ಚಿಟ್ಟ ಶಾಸಕ ಜಿ.ಟಿ. ದೇವೇಗೌಡ

ಸಾರಾಂಶ

ಮೈಸೂರಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಯುವಕ ಸಾವನ್ನಪ್ಪಿದ್ದು, 48 ಜನರು ಅಸ್ವಸ್ಥರಾಗಿದ್ದಾರೆ. ಆದರೆ, ಈ ಘಟನೆ ಕುರಿತು ಶಾಸಕ ಜಿ.ಟಿ. ದೇವೇಗೌಡ ಸತ್ಯಾಂಶವೊಂದನ್ನು ಬಹಿರಂಗ ಮಾಡಿದ್ದಾರೆ. 

ಮೈಸೂರು (ಮೇ 21): ರಾಜ್ಯ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ಬಳಿಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಯುವಕ ಬಲಿಯಾಗಿದ್ದು, 45ಕ್ಕೂ ಅಧಿಕ ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಇದಕ್ಕೆಲ್ಲಾ ಆ ಬಡ್ಡಿ ನನ್ಮಗ ಮೂಡಾ ಅಧಿಕಾರಿ ಕೆ.ಟಿ. ರವಿ ಕಾರಣವೆಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಮೂಸೂರಿನಲ್ಲಿ ಕಲುಷಿತ ನೀರು ಸೇವನೆಯಿಂದ ಕೆ. ಸಾಲುಂಡಿ ಗ್ರಾಮದ ಯುವಕ ಕನಕರಾಜ್ (20) ಸಾವನ್ನಪ್ಪಿದ್ದಾನೆ. ಈ ಘಟನೆ ಬೆನ್ನಲ್ಲಿಯೇ ಸಾಲುಂಡಿ ಗ್ರಾಮಕ್ಕೆ ತೆರಳಿದ ಶಾಸಕ ಜಿ.ಟಿ. ದೇವೇಗೌಡ, ಸ್ಥಳ ಪರಿಶೀಲನೆ ಮಾಡಿ ಕೂಡಲೇ ಪೈಪ್‌ಲೈನ್ ದುರಸ್ತಿ ಮಾಡಿಸಲು ಸೂಚಿಸಿದ್ದಾರೆ. ಜೊತೆಗೆ, ನೀರು ಕುಡಿಯಲು ಯೋಗ್ಯವಿದೆಯೇ ಎಂದು ಪರೀಕ್ಷೆ ಮಾಡಿಸಲು ಪ್ರಯೋಗಾಲಯಕ್ಕೆ ನೀರನ್ನು ಕಳುಹಿಸಿದ್ದಾರೆ. ಅನಾರೋಗ್ಯಕ್ಕೆ ಒಳಗಾದ ಎಲ್ಲ ಸಂತ್ರಸ್ತರಿಗೂ ಉತ್ತಮ ಚಿಕಿತ್ಸೆ ನೀಡುವಂತೆ ಆಸ್ಪತ್ರೆಗೆ ಕರೆ ಮಾಡಿ ಸೂಚಿಸಿದ್ದಾರೆ. ಜೊತೆಗೆ, ಈ ಬಗ್ಗೆ ಮೂಡಾ ಅಧಿಕಾರಿ ಕಾರಣವೆಂದು ತಿಳಿದುಬಂದಿದ್ದು, ಕೂಡಲೇ ಅವನನ್ನು ಸಸ್ಪೆಂಡ್ ಮಾಡುವಂತೆ ತಾಕೀತು ಮಾಡಿದ್ದಾರೆ.

ಪೆನ್‌ಡ್ರೈವ್ ಆಡಿಯೋ ಕೇಸ್‌ನಲ್ಲಿ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡಬೇಕು; ಕುಮಾರಸ್ವಾಮಿ ಆಗ್ರಹ

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಜಿ.ಟಿ. ದೇವೇಗೌಡ ಅವರು, ನಾನು 3 ವರ್ಷದಿಂದ ಹೇಳುತ್ತಲೇ ಇದ್ದೇನೆ. ಕುಡಿಯುವ ನೀರಿಗೆ ಟ್ಯಾಂಕ್ ಮಾಡಿಲ್ಲ. ಮುಡಾ ಇಂಜಿನಿಯರ್ ಟಿ.ಕೆ.ರವಿಗೆ ಹೇಳಿ ಹೇಳಿ ಸಾಕಾಗಿದೆ. ಅವನೇ ರಿಯಲ್ ಎಸ್ಟೇಟ್ ಮಾಡಿಕೊಂಡು ಸೈಟ್ ಮಾರುತ್ತಿದ್ದ. ಈ ದುರಂತಕ್ಕೆ ಮುಡಾ ಅಧಿಕಾರಿಗಳೇ ನೇರ ಹೊಣೆ. ಮೂಡಾ ಅಧಿಕಾರಿಗಳು ಕೆಲಸ ಮಗಿಸಿ ಕೊಟ್ಟರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ. ಇದನ್ನೇ ಮೂಡಾ ಅಧ್ಯಕ್ಷ ಕೆ.ಮರೀಗೌಡಗೂ ಹೇಳಿದ್ದೇನೆ. ಮುಡಾದಿಂದ ತಪ್ಪಾಗಿದೆ. ಮೊದಲು ಕಲುಷಿತ ನೀರು ಬರದಂತೆ ಪೈಪ್ ಸರಿ ಮಾಡಲಿ. ಬೊರ್‌ವೆಲ್ ನೀರು ಟೆಸ್ಟಿಂಗ್ ಕಳುಹಿಸಿದ್ದೇವೆ. ನೀರು ಕುಡಿಯಲು ಯೋಗ್ಯ ಅಲ್ಲದಿದ್ರೆ ಬೇರೆ ಬೊರ್‌ವೆಲ್ ತೆಗಿಸಲಾಗುವುದು. ಇನ್ನು 6 ತಿಂಗಳಲ್ಲಿ ಕಾವೇರಿ ನೀರಿ‌ನ ಸಪ್ಲೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆ ಬಡ್ಡಿ ಮಕ್ಕಳನ್ನು ಸಸ್ಪೆಂಡ್ ಮಾಡಬೇಕು: ಪಟ್ಟಣ ಪಂಚಾಯಿತಿಯಲ್ಲಿ ಇಂಜಿನಿಯರ್ ರವಿ ಅಂತ ಇದ್ದ. ಅವನಿಗೆ ಸ್ವಂತ ಲೇ ಔಟ್ ಮಾಡಿಕೊಂಡಿರೊದು ಕೆಲಸ. ಈ ನನ್ ಮಕ್ಕಳನ್ನ, ಬಡ್ಡಿ ಮಕ್ಕಳನ್ನ ಸಸ್ಪೆಂಡ್ ಮಾಡಬೇಕು. ಸರ್ಕಾರ ಸೆಪ್ಟಿಕ್ ಟ್ಯಾಂಕ್ ಮಾಡಿದೆ. ಅದಕ್ಕೆ ಪೈಪ್‌ಲೈನ್ ಲಿಂಕ್ ಮಾಡಲಿಲ್ಲ. ಕೆ.ಸಾಲುಂಡಿ ಗ್ರಾಮದಲ್ಲಿ ಯುವಕ ಸತ್ತಿದ್ದಾನೆ, 48 ಜನರು ಅಸ್ವಸ್ಥ ಆಗಿದ್ದಾರೆ. ದೇವರ ದಯೆ ದೊಡ್ಡ ಅನಾಹುತ ತಪ್ಪಿದೆ‌. ತಕ್ಷಣ ಎಲ್ಲರಿಗೂ ಚಿಕಿತ್ಸೆ ಸಿಕ್ಕಿದೆ. ದುಡ್ಡು ಎಷ್ಟೇ ಖರ್ಚಾದರೂ ಕೊಡೊಣ. ಮೊದಲು ಪೈಪ್ ಲೈನ್ ವ್ಯವಸ್ಥೆ ಸರಿ ಮಾಡಬೇಕು. ಮುಂಡೆತ್ತವು ನಿಮ್ಮ ಇಂಜಿನಿಯರ್‌ಗಳು ಅದೇನ್ ಮಾಡ್ತಾವೊ.? ಮೊದಲು ಅವರನ್ನ ಇಲ್ಲಿಗೆ ಕಳುಹಿಸಿ ಸಮಸ್ಯೆ ಸರಿ ಮಾಡಿ. ಮುಖ್ಯಮಂತ್ರಿ ಕೂಡ ಬರುವ ಸಾಧ್ಯತೆ ಇದೆ. ಮೊದಲು ಸಮಸ್ಯೆ ಬಗೆ ಹರಿಸಿ ಎಂದು ಶಾಸಕ ಜಿ.ಡಿ. ದೇವೇಗೌಡ ಹೇಳಿದರು.

ಎಸ್ಸೆಸ್ಸೆಲ್ಸಿಯಲ್ಲಿ 623 ಅಂಕ ಪಡೆದು ಸರ್ಕಾರಿ ನೌಕರಿಗೆ ಆಯ್ಕೆಯಾದವನಿಗೆ ಓದು, ಬರಹವೇ ಬರೊಲ್ಲ!

ಪಟ್ಟಣ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೆಂದ ಮುಡಾ ಅಧ್ಯಕ್ಷ: ಕಲುಷಿತ ನೀರು ಸರಬರಾಜು ಮತ್ತು ಯುವಕ ಸಾವಿನ ಘಟನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಮುಡಾ ಅಧ್ಯಕ್ಷ ಕೆ.ಮರಿಗೌಡ, ನಾವು ಹಲವು ದಿನಗಳಿಂದ ಈ ಸಮಸ್ಯೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೆವು. ಆದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಇದಕ್ಕೆ ಪಟ್ಟಣ ಪಂಚಾಯತಿ ಅಧಿಕಾರಿಗಳೇ ಹೊಣೆಗಾರರು. ಮೈಸೂರು ನಗರಾಭಿವೃದ್ಧಿ ಅಧಿಕಾರಿಗಳು ಕೂಡ ಅಲ್ಲಿಯ ಕೆಲಸಗಳನ್ನ ಬೇಗ ಮುಗಿಸಿದ್ದರೇ ಈ ಘಟನೆ ನಡೆಯುತ್ತಿರಲಿಲ್ಲ. ಇದರಲ್ಲಿ ಮೂಡಾ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ. ತಪ್ಪಿತಸ್ಥರ ಮೇಲೆ ಸರ್ಕಾರ ಕ್ರಮ ಜರಗಿಸಬೇಕು. ವೈಯಕ್ತಿಕವಾಗಿ ನಾನು 1 ಲಕ್ಷ ರೂ. ಪರಿಹಾರ ಕೊಡುತ್ತೇನೆ. ಸರ್ಕಾರದಿಂದ ಪರಿಹಾರ ಕೊಡುವಂತೆ ಆಗ್ರಹಿಸುತ್ತೇನೆ ಎಂದು ಹೇಳಿದರು.

PREV
Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ಕಾಂಗ್ರೆಸ್ ಮುಖಂಡ ಗಣೇಶ್ ಗೌಡ ಕೊಲೆ ರಹಸ್ಯ ರಿವೀಲ್: ಪೊಲೀಸರ ಬಲೆಗೆ ಬಿದ್ದ ಮೂವರು!