ಮೈಸೂರಿನಲ್ಲೊಂದು ಲವ್-ಸೆಕ್ಸ್-ದೋಖಾ, ಬಳಿಕ ನಡೆದದ್ದು ಘನಘೋರ

Published : Feb 13, 2019, 08:16 PM ISTUpdated : Feb 13, 2019, 08:22 PM IST
ಮೈಸೂರಿನಲ್ಲೊಂದು ಲವ್-ಸೆಕ್ಸ್-ದೋಖಾ, ಬಳಿಕ ನಡೆದದ್ದು ಘನಘೋರ

ಸಾರಾಂಶ

ಹುಣಸೂರಿನಲ್ಲಿ ಅವನಾಡಿದ್ದೇ ಆಟ ಅವನದ್ದೇ ಲೋಕ.. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ತಿರಬೋಕಿ ಶೋಕಿ..ಅವನ ರಂಗಿನಾಟಕ್ಕೆ ಬಲಿಯಾಗಿದ್ದು ಮುದ್ದಾದ ಹುಡುಗಿ..!

ಮೈಸೂರು, [ಫೆ.13]:  ಲವರ್ ಬಾಯ್ ನಂಬಿಸಿ ಅನುಭವಿಸಿ ಕೈಬಿಟ್ಟ ಕಾರಣ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ. 

ಮೇಲ್ನೋಟಕ್ಕೆ ಇದೊಂದು ಲವ್-ಸೆಕ್ಸ್-ದೋಖಾ ಪ್ರಕರಣದಂತೆ ಕಂಡುಬಂದಿದ್ದು, ಯುವತಿ ತನಗೆ ವಂಚಿಸಿದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾಳೆ.

ಬೆಂಗಳೂರು: ಇಬ್ಬರು ಮಹಿಳೆಯರ ಕಾಟಕ್ಕೆ ಯುವಕ ಆತ್ಮಹತ್ಯೆಗೆ ಶರಣು

ಘಟನೆ ವಿವರ
ಅರ್ಪಿತಾ (19) ತಾನು ಲೋಕೇಶ್ ಗೌಡ ಎಂಬಾತನನ್ನು ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದಳು.ತಾನು ಅರ್ಪಿತಾಳನ್ನೇ ವಿವಾಹವಾಗುವುದಾಗಿ ನಂಬಿಸಿದ್ದ ಗೌಡ ಆಕೆಯೊಡನೆ ದೈಹಿಕ ಸಂಪರ್ಕ ಸಹ ಮಾಡಿದ್ದ.  

ಯುವತಿ ಅರ್ಪಿತಾ ಸಹ ತನ್ನ ಪ್ರೇಮಿಯನ್ನು ಬಹಳವೇ ನಂಬಿದ್ದು ಅದಕ್ಕೆ ಒಪ್ಪಿಗೆ ಸೂಚಿಸಿದ್ದಳು. ಆದರೆ ಇದಾಗಿ ಕೆಲ ದಿನಗಳ ಹಿಂದೆ ಮನೆಯಲ್ಲಿ ನಮ್ಮ ವಿವಾಹಕ್ಕೆ ಒಪ್ಪುತ್ತಿಲ್ಲ ಎಂದು ನೆಪ ಹೇಳಿದ ಗೌಡ ಅರ್ಪಿತಾಳಿಂದ ದೂರಾಗಿದ್ದಾನೆ.

ಇದ್ರಿಂದ ಅರ್ಪಿತಾ ,'ನನ್ನನ್ನು ವಂಚಿಸಿದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಎಂದು ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾಳೆ.ಈ ಬಗ್ಗೆ ಹುಣಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

PREV
click me!

Recommended Stories

ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!