ಕರ್ತವ್ಯದ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಹಾಜರಿರದ ನಗರದ ಕೆ.ಆರ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸೇರಿ 8 ಮಂದಿ ವೈದ್ಯರ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ.
ಮೈಸೂರು : ಕರ್ತವ್ಯದ ವೇಳೆಯಲ್ಲಿ ಆಸ್ಪತ್ರೆಯಲ್ಲಿ ಹಾಜರಿರದ ನಗರದ ಕೆ.ಆರ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸೇರಿ 8 ಮಂದಿ ವೈದ್ಯರ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ.
ಕರುನಾಡ ಸೇವಕರು ಸಂಘಟನೆಯ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ. ನಾಗಣ್ಣಗೌಡ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಜುಲೈ 9 ರಂದು ರೋಗಿಯೊಬ್ಬರ ಆರೋಗ್ಯ ವಿಚಾರಿಸಲು ಕೆ.ಆರ್. ಆಸ್ಪತ್ರೆಗೆ ಭೇಟಿ ನೀಡಿದಾಗ ಎಮ್‌ಎಸ್‌ಬಿ ವಾರ್ಡ್ ನಂ. 5 ರಲ್ಲಿ ಅಂದು ಕರ್ತವ್ಯದಲ್ಲಿರಬೇಕಾದ ವಿಭಾಗ ಮುಖ್ಯಸ್ಥ ಡಾ. ಚಂದ್ರಶೇಖರ, ಸಹ ಪ್ರಾಧ್ಯಾಪಕ ಡಾ. ಲೋಕೇಶ್, ವೈದ್ಯರಾದ ಡಾ. ನಿಶ್ಚಿತ, ಡಾ. ಕುಶಾಲ್ ಕರ್ತವ್ಯದ ಸ್ಥಳದಲ್ಲಿ ಹಾಜರಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ.
undefined
ಈ ವೇಳೆ ಇಡೀ ವಾರ್ಡನ್ನು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಹಿಸಿದ್ದು ಜವಾಬ್ದಾರಿಯುತ ಸ್ಥಾನದಲ್ಲಿರಬೇಕಾದ ವೈದ್ಯರು ಕರ್ತವ್ಯದ ಸ್ಥಳದಲ್ಲಿ ಹಾಜರಿರದೆ ರೋಗಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ವೈದ್ಯರು ಸ್ಥಳದಲ್ಲಿ ಇಲ್ಲದ ಕುರಿತು ಸ್ನಾತಕೋತ್ತರ ವೈದ್ಯಕೀಯ ಗಳು ಸೂಕ್ತ ಮಾಹಿತಿ ನೀಡದೆ ಧಿಕ್ಕುತಪ್ಪಿಸಿ ವೈದ್ಯರು ತುರ್ತು ಚಿಕಿತ್ಸಾ ಘಟಕದಲ್ಲಿ ಇದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ.
ತುರ್ತು ಚಿಕಿತ್ಸಾ ಘಟಕದಲ್ಲಿ ಪರೀಶೀಲಿಸಿದಾಗ ಅಲ್ಲಿಯೂ ಕೂಡ ಈ ವೈದ್ಯರು ಕಂಡುಬಂದಿಲ್ಲ. ಅಲ್ಲದೆ ತುರ್ತು ಚಿಕಿತ್ಸಾ ಘಟಕದಲ್ಲಿ ಕರ್ತವ್ಯದಲ್ಲಿ ಇರಬೇಕಾದ ವೈದ್ಯರಾದ ಡಾ.ಬಿ.ಎನ್, ಅನಂದರವಿ ಡಾ. ದೀಪಾ, ಡಾ.ಆರ್.ಡಿ. ಮಂಜುನಾಥ್ ಕೂಡ ಸ್ಥಳದಲ್ಲಿ ಕಂಡು ಬಂದಿಲ್ಲ. ಈ ಕುರಿತು ಉಳಿದ ವೈದ್ಯರನ್ನು ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದ್ದಾರೆ. ಜೀವನ್ಮರಣದ ಹೋರಾಟ ನಡೆಸುವ ರೋಗಿಗಳಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಬೇಕು. ಆದರೆ ಇಲ್ಲಿನ ವೈದ್ಯರು ನಾಪತ್ತೆಯಾಗಿದ್ದಾರೆ. ಈ ಕುರಿತು ಜವಾಬ್ದಾರಿ ವಹಿಸಬೇಕಾದ ವೈದ್ಯಕೀಯ ಅಧೀಕ್ಷಕ ಡಾ. ನಂಜುಂಡಸ್ವಾಮಿಯು ನಿರ್ಲಕ್ಷ ವಹಿಸಿದ್ದಾರೆ ಎಂದು ದೂರು ದಾಖಲಾಗಿದೆ.
ಈ ಘಟನೆಯ ನಂತರ ವಿಭಾಗ ಮುಖ್ಯಸ್ಥ ಡಾ. ಚಂದ್ರಶೇಖರ ರೋಗಿಗಳಿಗೆ ಬೆದರಿಕೆ ಹಾಕಿ ತಾನು ಚಿಕಿತ್ಸೆ ಮಾಡುವುದಿಲ್ಲ. ಯಾರಿಗಾದರೂ ದೂರು ಕೊಡಿ. ಡಿಸ್ಚಾಜ್‌ರ್ ಮಾಡಿಕೊಂಡು ಹೋಗುವಂತೆ ಬೆದರಿಸಿದ್ದು ಈ ಬಗ್ಗೆಯೂ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರಿನಲ್ಲಿ ಪ್ರಸ್ರಾಪಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೆಶುಚಿತ್ವದ ಕೊರತೆ ಅಸಮರ್ಪಕ ಸೇವೆಯ ಕಾರಣಕ್ಕೆ ಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡ ನಂತರವು ಅದೇ ಚಾಳಿ ಮುಂದುವರಿಸಿದ ವೈದ್ಯರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ ಎಂದು ಎಂ.ಬಿ. ನಾಗಣ್ಣಗೌಡ ತಿಳಿಸಿದ್ದಾರೆ.