ಮತ್ತೊಮ್ಮೆ ಮೈಸೂರಿನಲ್ಲಿ ಹಲಸಿನ ಹಬ್ಬ

By Kannadaprabha News  |  First Published Jul 14, 2023, 5:54 AM IST

ಕಳೆದ ತಿಂಗಳು ಮೈಸೂರಿನಲ್ಲಿ ನಡೆದ ಹಲಸಿನ ಹಬ್ಬ ದೊಡ್ಡಮಟ್ಟದ ಯಶಸ್ಸು ಕಂಡಿತು. ಈ ಯಶಸ್ಸಿನಿಂದ ಉತ್ತೇಜಿತಗೊಂಡು, ಕಳೆದ ಬಾರಿಯ ಹಲಸಿನ ಮೇಳಕ್ಕೆ ಬರಲಾಗದ ಮೈಸೂರಿಗರಿಗಾಗಿ ಮತ್ತೆ ಹಲಸಿನ ಹಬ್ಬ ಏರ್ಪಾಡಾಗಿದೆ.


 ಮೈಸೂರು :  ಕಳೆದ ತಿಂಗಳು ಮೈಸೂರಿನಲ್ಲಿ ನಡೆದ ಹಲಸಿನ ಹಬ್ಬ ದೊಡ್ಡಮಟ್ಟದ ಯಶಸ್ಸು ಕಂಡಿತು. ಈ ಯಶಸ್ಸಿನಿಂದ ಉತ್ತೇಜಿತಗೊಂಡು, ಕಳೆದ ಬಾರಿಯ ಹಲಸಿನ ಮೇಳಕ್ಕೆ ಬರಲಾಗದ ಮೈಸೂರಿಗರಿಗಾಗಿ ಮತ್ತೆ ಹಲಸಿನ ಹಬ್ಬ ಏರ್ಪಾಡಾಗಿದೆ.

ಸಹಜ ಸಮೃದ್ಧ ಸಾವಯವಕರ ಬಳಗವು, ನೆಕ್ಸಸ್‌ ಸೆಂಟರ್‌ ಸಿಟಿ ಜೊತೆಗೂಡಿ ಜುಲೈ 14 ರಿಂದ 16 ರವರೆಗೆ ವನ್ನು ಮೈಸೂರಿನ ನೆಕ್ಸಸ್‌ ಸೆಂಟರ್‌ ಸಿಟಿ ಮಾಲ್‌ ( ಪೋರಂ ಮಾಲ…) ನಲ್ಲಿ ಏರ್ಪಡಿಸಿದ್ದಾರೆ.

Latest Videos

undefined

ಮೂರು ದಿನಗಳ ಕಾಲ ನಡೆಯಲಿರುವ ಹಲಸಿನ ಹಬ್ಬದಲ್ಲಿ ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿಯ ಹಣ್ಣುಗಳು ತಿನ್ನಲು ಮತ್ತು ಕೊಳ್ಳಲು ಸಿಗಲಿವೆ. ಹಲಸಿನ ಹೋಳಿಗೆ, ಐಸ್‌ ಕ್ರೀಂ, ಚಿಪ್ಸ, ಚಾಕೋಲೇಟ್‌, ಹಪ್ಪಳ, ಹಲ್ವ, ಕಬಾಬ…, ವಡೆ, ದೋಸೆ , ಪಲ್ಯ , ಬಿರಿಯಾನಿಯ ಮಳಿಗೆಗಳು ಬರಲಿವೆ. ಹಲಸಿನ ಅಡುಗೆಗಳ ಪುಸ್ತಕ ಲಭ್ಯವಿರುತ್ತದೆ. ಹಲಸು ಹಚ್ಚುವ ಯಂತ್ರವೂ ಸಿಗಲಿದೆ. ಕೆಂಪು ಹಲಸಿಗೆ ಖ್ಯಾತವಾಗಿರುವ ಚಿಕ್ಕನಾಯಕನಹಳ್ಳಿಯ ’ಚಂದ್ರ ಹಲಸು’ ಮಾರಾಟಕ್ಕೆ ಬರುತ್ತಿದೆ.

ರುದ್ರಾಕ್ಷಿ ಬಕ್ಕೆ, ಸಿಂಧೂರ, ಸರ್ವ ಋುತು, ಗಮ್‌ ಲೆಸ್‌, ನಾಗಚಂದ್ರ, ರಾಮಚಂದ್ರ ಮೊದಲಾದ ಹಲಸಿನ ತಳಿಗಳೂ ಮಾರಾಟಕ್ಕೆ ಲಭ್ಯವಿರುತ್ತವೆ. ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದಲ್ಲಿ ನೊಂದಣಿಯಾಗಿರುವ ಕರ್ನಾಟಕ ರಾಜ್ಯದ ಮೊದಲ ಕೆಂಪು ಹಲಸಿನ ತಳಿಗಳಾದ ಸಿದ್ದು ಹಲಸು ಮತ್ತು ಶಂಕರ ಗಿಡಗಳು ಲಭ್ಯವಿರುತ್ತವೆ.

ಸಹಜ ಕೃಷಿಕ ಕೈಲಾಸಮೂರ್ತಿಯವರ ತೋಟದ ಬಗೆ ಬಗೆಯ ಹಲಸಿನ ಹಣ್ಣುಗಳು ಮಾರಾಟಕ್ಕೆ ಬರುತ್ತಿವೆ. ಹಲಸಿನ ಕೃಷಿಯಲ್ಲಿ ಆಸಕ್ತರಾದವರು ಇವರ ಅನುಭವ ಕೇಳಬಹುದು. ಹಲಸಿನ ಗಿಡಗಳನ್ನು ಎತ್ತರಕ್ಕೆ ಬೆಳೆಸದೆ , ಹಲಸಿನ ಹಣ್ಣು ಕೈ ಗೆಟುಕುವಂತೆ ಕೊಂಬೆಗಳನ್ನು ಅಗಲವಾಗಿ ಹರಡುವಂತೆ ಬೆಳೆಸಿ ಯಶಸ್ವಿಯಾದವರು ಇವರು.

ಕರ್ನಾಟಕದ ವಿವಿದ ಭಾಗಗಳಿಂದ ಬರುವ 12 ಗ್ರಾಮೀಣ ಉದ್ದಿಮೆದಾರರು, ರೈತ ಕಂಪನಿಗಳು , ರೈತ ಮತ್ತು ಮಹಿಳಾ ಗುಂಪುಗಳು ಹಲಸಿನ ಮೌಲ್ಯವರ್ಧಿತ ಪದಾರ್ಥಗಳು, ಸಿರಿಧಾನ್ಯ, ಸಾವಯವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ತರಲಿದ್ದಾರೆ.

ಮುಂಗಾರಿಗೆ ಬಿತ್ತಲು ತರಕಾರಿ ಬೀಜ, ಸಿದ್ದ ಸಣ್ಣ, ನವರ, ಎಚ್‌.ಎಂ.ಟಿ, ರಾಜಮುಡಿ,ಬರ್ಮಾ ಬ್ಲಾಕ್‌, ಚಿನ್ನಪೊನ್ನಿ, ಗಂಧಸಾಲೆಯಅಥ ದೇಸಿ ಭತ್ತಗಳು ಮೇಳದಲ್ಲಿ ಲಭ್ಯವಿವೆ.

ಹಲಸಿನ ಮಹತ್ವ ಸಾರುವ ಮೇಳದಲ್ಲಿ , ಹಲಸಿನ ಸ್ಪರ್ಧೆಗಳು ಏರ್ಪಾಡಾಗಿವೆ. ಭಾನುವಾರ ಬೆಳಿಗ್ಗೆ 10.30 ರಿಂದ 12 ಘಂಟೆಯವರೆಗೆ 5-12 ವಯಸ್ಸಿನ ಮಕ್ಕಳಿಗೆ ನಾ ಕಂಡಂತೆ ಹಲಸು’ ಚಿತ್ರಕಲಾ ಸ್ಪರ್ಧೆ ಇದೆ. ಶನಿವಾರ ಮತ್ತು ಭಾನುವಾರ ಸಂಜೆ ಹಲಸಿನ ಹಣ್ಣು ತಿನ್ನುವ ಸ್ಪರ್ಧೆ’ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಏರ್ಪಡಿಸಲಾಗಿದೆ. ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರನ್ನು ವಿಜೇತರಾಗಿ ಘೋಷಿಸಿ, ಬಹುಮಾನ ನೀಡಲಾಗುತ್ತದೆ. ಹಲಸನ್ನು ಎತ್ತುವ ಸ್ಪರ್ಧೆ ಮತ್ತು ಹಲಸಿನ ತೂಕ ಅಂದಾಜಿಸುವ ಸ್ಪರ್ಧೆಗಳು ಇರಲಿವೆ. ಹೆಚ್ಚಿನ ವಿವರಗಳಿಗೆ ಕೋಮಲ್‌ ಕುಮಾರ್‌ 9880908608 ಸಂಪರ್ಕಿಸಿ.

click me!