ಗ್ರಾಪಂ ಉಪಚುನಾವಣೆ-2023ರ ಮತದಾನ ಸಂಬಂಧ ಜಿಲ್ಲೆಯ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜು. 22ರಂದು ಮಧ್ಯರಾತ್ರಿ 12 ಗಂಟೆಯಿಂದ ಜು. 23ರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲಾ ವಿಧದ ಸಂತೆ ಜಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮೈಸೂರು: ಗ್ರಾಪಂ ಉಪಚುನಾವಣೆ-2023ರ ಮತದಾನ ಸಂಬಂಧ ಜಿಲ್ಲೆಯ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮತ್ತು ಶಾಂತಿಯುತವಾಗಿ ಮತದಾನ ನಡೆಸುವ ಸಂಬಂಧ ಮುನ್ನೆಚ್ಚರಿಕೆ ಕ್ರಮವಾಗಿ ನಂಜನಗೂಡು ತಾಲೂಕಿನ ದೇವನೂರು ಹಾಗೂ ದೇವರಾಯಶೆಟ್ಟಿ, ಟಿ. ನರಸೀಪುರ ತಾಲೂಕಿನ ಹೆಮ್ಮಿಗೆ, ಹುಣಸೂರು ತಾಲೂಕಿನ ಜಾಬಗೆರೆ, ತಟ್ಟೆಕೆರೆ ಹಾಗೂ ಕಟ್ಟೆಮನುಗನಹಳ್ಳಿ, ಕೃಷ್ಣರಾಜನಗರ ತಾಲೂಕಿನ ಹಂಪಾಪುರ, ಎಚ್.ಡಿ. ಕೋಟೆ ತಾಲೂಕಿನ ಮಾದಾಪುರ ಹಾಗೂ ಎನ್ ಬೇಗೂರು ಗ್ರಾಪಂ ವ್ಯಾಪ್ತಿಗಳಲ್ಲಿ ಜು. 22ರಂದು ಮಧ್ಯರಾತ್ರಿ 12 ಗಂಟೆಯಿಂದ ಜು. 23ರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲಾ ವಿಧದ ಸಂತೆ ಜಾತ್ರೆಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಅಂತೆಯೇ ಈ ವ್ಯಾಪ್ತಿಯಲ್ಲಿ ಜು. 22ರ ಮಧ್ಯರಾತ್ರಿ 12 ರಿಂದ ಜು. 23ರ ಮಧ್ಯರಾತ್ರಿ 12 ರವರೆಗೆ ಎಲ್ಲಾ ವಿಧದ ಮದ್ಯ ತಯಾರಿಕೆ, ಮಾರಾಟ, ಶೇಖರಣೆ ಹಾಗೂ ಅನಧಿಕೃತ ಸಾಕಾಣಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶಿಸಿದ್ದಾರೆ.
ನಿಷೇಧಾಜ್ಞೆ ಜಾರಿ: ಗ್ರಾಪಂ ಉಪ ಚುನಾವಣೆ ಸಂಬಂಧ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಥವಾ ಮತಗಟ್ಟೆಯಲ್ಲಿ ಮತದಾನವು ಮುಕ್ತಾಯಗೊಂಡು ಮತಗಟ್ಟೆಸಿಬ್ಬಂದಿ ಮತಗಟ್ಟೆಯಿಂದ ತೆರಳುವವರೆಗೆ ಚುನಾವಣೆ ನಡೆಯುವ ಎಲ್ಲಾ ಮತಗಟ್ಟೆಗಳ ಸುತ್ತ 200 ಮೀಟರ್ ವ್ಯಾಪ್ತಿ ಪ್ರದೇಶವನ್ನು ನಿಬಂರ್‍ಧಿತ ಪ್ರದೇಶ ಎಂದು ಘೋಷಿಸಲಾಗಿದೆ.
ಮದ್ಯ ದುಬಾರಿ
ಬೆಂಗಳೂರು (ಜು.11): ಕಾಂಗ್ರೆಸ್ ಸರ್ಕಾರ 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20 ರಿಂದ ಜಾರಿಯಾಗಲಿದೆ. ವಿಸ್ಕಿ, ರಂ, ಬ್ರಾಂಡಿ, ಜಿನ್ ಸೇರಿದಂತೆ ಎಲ್ಲಾ ಬಗೆಯ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಸ್ಲ್ಯಾಬ್ ಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಹಾಲಿ ಇರುವ ದರಕ್ಕಿಂತ ಶೇಕಡ 20ರಷ್ಟು ಹೆಚ್ಚಳವಾಗಲಿದೆ. ಬ್ರ್ಯಾಂಡ್‌ವಾರು ಬೆಲೆ ಹೆಚ್ಚಳದ ವಿವರ ಇಲ್ಲಿದೆ ನೋಡಿ..
ಕಾಂಗ್ರೆಸ್ ಸರ್ಕಾರದ ಅಬಕಾರಿ ಸುಂಕ ಹೆಚ್ಚಳ ಹಿನ್ನೆಲೆಯಲ್ಲಿ ಮದ್ಯದ ದರ ದುಬಾರಿ ಆಗಲಿದೆ. ಇನ್ನು ಈ ದುಬಾರಿ ಹೊಸ ದರ ಜುಲೈ 20ರಿಂದಲೇ ಜಾರಿಯಾಗುವ ಸಾಧ್ಯತೆಯಿದೆ. ಅಬಕಾರಿ ಸುಂಕ ಹೆಚ್ಚಳ ಕುರಿತಂತೆ ಸರಕಾರ ಕರಡು ಪ್ರಕಟಿಸಿದೆ. 7 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿದೆ. ಬ್ರಾಂದಿ, ವಿಸ್ಕಿ, ರಮ್, ಜಿನ್ ಎಲ್ಲಾ ಬಗೆಯ ಮದ್ಯದ ಬೆಲೆ ಸೇರಿದಂತೆ ಹಾಲಿ ಇರುವ ಸುಂಕಕ್ಕಿಂದ ಶೇ.20 ಏರಿಕೆ ಆಗುತ್ತಿದೆ. ಇನ್ನು ಬಿಯರ್ ಮೇಲಿನ ಅಬಕಾರಿ ಸುಂಕ ಶೇ.10ರಷ್ಟು ಏರಿಕೆಯನ್ನು ಪ್ರಸ್ತಾಪಿಸಲಾಗಿದೆ. ಭಾರತೀಯ ಮದ್ಯ (ಐಎಂಎಲ್) ಒಂದು ಪೆಗ್ (60ಎಂಲ್) ಗೆ 10 ರಿಂದ 20 ರೂಪಾಯಿ ಹೆಚ್ಚಳವಾಗಲಿದೆ. ಬಿಯರ್ ಬೆಲೆ ಪ್ರತಿ ಬಾಟಲ್ ಗೆ 3 ರಿಂದ 5 ರೂ ಹೆಚ್ಚಳವಾಗುವ ಸಾಧ್ಯತೆ ಇದೆ.
Karnataka Budget 2023 ಅಬಕಾರಿ ಸುಂಕ ಶೇ.20 ಹೆಚ್ಚಳ: ಮದ್ಯದ ದರ ಭಾರಿ ಏರಿಕೆ
ಬ್ರಾಂಡ್ ಗಳು - ಇಂದಿನ ಬೆಲೆ - ಏರಿಕೆಯಾಗಲಿರು ಬೆಲೆ
ಹೈವಾಟ್ಸ್ ಪಂಚ್ -
ಈಗಿನ ಬೆಲೆ - 70
ಏರಿಯ ಬೆಲೆ -80
ಬಟ್ ವೈಸರ್-
ಈಗಿನ ಬೆಲೆ - 220
ಏರಿಕೆ ಬೆಲೆ - 240
ಕಿಂಗ್ ಫಿಷರ್ ಪ್ರಿಮಿಯನ್
ಈಗಿನ ಬೆಲೆ - 170
ಏರಿಕೆ ಬೆಲೆ -190
ಬ್ಯಾಕ್ ಪೇಪರ್ ವಿಸ್ಕಿ
ಈಗಿನ ಬೆಲೆ - 106
ಏರಿಕೆ ಬೆಲೆ - 120
ಬ್ಲಾಕ್ ಆ್ಯಂಡ್ ವೈಟ್
ಈಗಿನ ಬೆಲೆ - 2,464
ಏರಿಕೆ ಬೆಲೆ - 2,800
ಒಲ್ಡ್ ಮಂಕ್
ಈಗಿನ ಬೆಲೆ - 137
ಏರಿಕೆ ಬೆಲೆ- 155
ಮ್ಯನ್ಷನ್ ಹೌಸ್ ಬ್ರಾಂಡಿ
ಈಗಿನ ಬೆಲೆ - 220
ಏರಿಕೆ ಬೆಲೆ- 240
ಮಾಕ್ ಡುವೆಲ್ದ್ ಬ್ರಾಂಡಿ
ಈಗಿನ ಬೆಲೆ - 170
ಏರಿಕೆ ಬೆಲೆ - 190
ಇಂಪಿಯರಿಯಲ್ ಬ್ಲೂ
ಈಗಿನ ಬೆಲೆ - 220
ಏರಿಕೆ ಬೆಲೆ - 240
ಒಲ್ಡ್ ಟವರ್ ವಿಸ್ಕಿ
ಈಗಿನ ಬೆಲೆ - 87
ಏರಿಕೆ ಬೆಲೆ - 100
ಜಾನಿ ವಾಕರ್ ಬ್ಲಾಕ್ ಲೇಬಲ್
ಈಗಿನ ಬೆಲೆ - 6,250
ಏರಿಕೆ ಬೆಲೆ - 7,150
BENGALURU: ಭಿಕ್ಷಾಟನೆ ಬಿಟ್ಟು ರಾಬರಿಗಿಳಿದ ಮಂಗಳಮುಖಿಯರು: ಟೆಕ್ಕಿಗಳೇ ಇವರ ಟಾರ್ಗೆಟ್