Mysuru: ಜೆಡಿಎಸ್‌ ಜಿಲ್ಲಾಧ್ಯಕ್ಷರಿಂದ ಕಾಂಗ್ರೆಸ್‌ಗೆ ಬೆಂಬಲ

By Kannadaprabha News  |  First Published Apr 23, 2023, 1:04 PM IST

ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ ಪರ ಬೆಂಬಲ ಘೋಷಿಸಿದರು.


 ನಂಜನಗೂಡು :  ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ ಪರ ಬೆಂಬಲ ಘೋಷಿಸಿದರು.

ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ ಮಾತನಾಡಿ, ಅವರು ಸಜ್ಜನ ರಾಜಕಾರಣಿ, ಅವರು ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೆ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲರೊಡನೆ ಒಡನಾಟ ಹೊಂದಿದ್ದರು. ಸದಾಕಾಲ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಅವರ ಹಠಾತ್‌ ನಿಧನ ಮತ್ತು ಅವರ ಪತ್ನಿ ವೀಣಾ ಅವರ ನಿಧನದಿಂದ ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಅಭ್ಯರ್ಥಿ ಹಾಕದೆ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ದರ್ಶನ್‌ ಧ್ರುವನಾರಾಯಣ ಗೆಲುವಿಗೆ ಶ್ರಮಿಸಬೇಕು ಎಂದರು.

Latest Videos

undefined

ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ್‌ ಮಾತನಾಡಿ, 2019ರ ಲೋಕಸಭೆ ಚುನಾವಣೆಯ ವೇಳೆಯೂ ಜೆಡಿಎಸ್‌ ಪಕ್ಷ ನನ್ನ ತಂದೆಗೆ ಸಹಕಾರ ನೀಡಿತ್ತು. ಕ್ಷೇತ್ರದಲ್ಲಿ 2018ರ ಉಪ ಚುನಾವಣೆಯಲ್ಲಿಯೂ ಅಭ್ಯರ್ಥಿ ನಿಯೋಜಿಸದೆ ಸಹಕಾರ ನೀಡಿತ್ತು. ಈ ಬಾರಿ ನನ್ನ ತಂದೆ ತಾಯಿಯನ್ನು ಕಳೆದುಕೊಂಡಿರುವ ನನಗೆ ಸಾಂತ್ವನ ಹೇಳಲು ಅಭ್ಯರ್ಥಿ ಹಾಕದೆ ಬೆಂಬಲ ನೀಡಿರುವುದಕ್ಕೆ ಮೊದಲು ಜೆಡಿಎಸ್‌ ವರಿಷ್ಠರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀವೆಲ್ಲರೂ ಯಾವುದೇ ಭಿನ್ನಾಭಿಪ್ರಾಯವಿದ್ದರೂ ಮರೆದು ಒಟ್ಟಾಗಿ ದುಡಿದು ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಸಹಕರಿಸಿ ನಾನು ಚುನಾವಣೆಯಲ್ಲಿ ಆರಿಸಿ ಬಂದಲ್ಲಿ ಜೆಡಿಎಸ್‌ ಕಾರ್ಯಕರ್ತರನ್ನೂ ಸಹ ಗೌರವಯುತವಾಗಿ ನಡೆಸಿಕೊಳ್ಳುತ್ತೇನೆ ಎಂದರು.

ಉಸ್ತುವಾರಿ ಶ್ರೀಕಂಠು ಮಾತನಾಡಿ, ಕ್ಷೇತ್ರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿ ಇಲಾಖೆಯಲ್ಲಿಯೂ ಲಂಚ ಕೊಡದೆ ಕೆಲಸ ಆಗುತ್ತಿಲ್ಲ. ನಗರಸಭೆ, ಗ್ರಾಪಂನಲ್ಲಿ ಖಾತೆ ಬದಲಾವಣೆಗೆ 254 ರಿಂದ 30 ಸಾವಿರ ಲಂಚ ಕೊಡಬೇಕಾದ ಅನಿವಾರ್ಯತೆ ಇದೆ. ಈ ಅವ್ಯವಸ್ಥೆ ಹೋಗಲಾಡಿಸಲು ಸಜ್ಜನ ರಾಜಕಾರಣಿಯನ್ನು ಆರಿಸಬೇಕು. ಜೆಡಿಎಸ್‌ ಕಾರ್ಯಕರ್ತರು ಒಟ್ಟಾಗಿ ದುಡಿದು ದರ್ಶನ್‌ ಗೆಲುವಿಗೆ ಶ್ರಮಿಸಬೇಕು ಎಂದರು.

ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕುರಹಟ್ಟಿಮಹೇಶ್‌, ಸಿ.ಎಂ. ಶಂಕರ್‌, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ಕಾರ್ಮಿಕ ಮುಖಂಡ ಗೋವಿಂದರಾಜು, ನಗರಸಭಾ ಸದಸ್ಯರಾದ ಗಾಯತ್ರಿ, ಖಲಿದ್‌ ಅಹಮದ್‌, ಮುಖಂಡರಾದ ಶ್ರೀಧರ್‌, ವಿಜಯ್‌ಕುಮಾರ್‌, ನಾಗರಾಜಯ್ಯ, ರಾಚಪ್ಪ, ಬಸವಣ್ಣ, ಶ್ರೀನಿವಾಸಮೂರ್ತಿ, ಜೆಡಿಎಸ್‌ ಮುಖಂಡರಾದ ಸತೀಶ್‌, ಸಂಜಯ್‌ಗೌಡ, ರಜತ್‌ಗೌಡ, ಲತಾ ಮುದ್ದುಮೋಹನ್‌ ಮೊದಲಾದವರು ಇದ್ದರು.

ಬಿಜೆಪಿಗೆ ಮೀಸಲಾತಿ ನಿರ್ಧಾರವೇ ಇಂಜಿನ್

ಬೆಂಗಳೂರು (ಏ.21): ಬರೋಬ್ಬರಿ 35 ಲಕ್ಷ ಜನರು ನೀಡಿರುವ ಆನ್‌ಲೈನ್‌ ಸಮೀಕ್ಷೆಯಲ್ಲಿ ಹಲವು ಪ್ರಮುಖ ವಿಚಾರಗಳ ಬಗ್ಗೆ 'ಜನಮತ' ಕೇಳಲಾಗಿತ್ತು. ಇದರಲ್ಲಿ ಮುಖ್ಯವಾಗಿದ್ದು ಮೀಸಲಾತಿ ವಿಚಾರ. ಇನ್ನೇನು ಚುನಾವಣೆ ಘೋಷಣೆಯಾಗೋಕೆ ಕೆಲವೇ ದಿನಗಳು ಇರೋವಾಗ ಬಹುಮುಖ್ಯ ಮೀಸಲಾತಿ ನಿರ್ಧಾರವನ್ನು ಮಾಡಿತ್ತು. ಆ ಮೂಲಕ ಮತಬೇಟೆಗೆ ಸಜ್ಜಾಗಿತ್ತು. ಆದರೆ, ಈ ನಿರ್ಧಾರ ಚುನಾವಣೆಯಲ್ಲಿ ಅವರಿಗೆ ಎಷ್ಟು ಪ್ರಮಾಣದಲ್ಲಿ ಲಾಭ ತಂದುಕೊಡಲಿದೆ ಎನ್ನುವ ಪ್ರಶ್ನೆಯನ್ನೂ ಕೇಳಲಾಗಿತ್ತು. ವಿರೋಧ ಪಕ್ಷಗಳು ಬಿಜೆಪಿಯ 40 ಪರ್ಸೆಂಟ್‌ ಕಮೀಷನ್‌ ಕರಪ್ಷನ್‌ ಎನ್ನುತ್ತಿದ್ದರೆ, ಬಿಜೆಪಿ ಪಾಲಿಗೆ ಮೀಸಲಾತಿ ನಿರ್ಧಾರವೇ ಚುನಾವಣೆಗೆ ಇಂಜಿನ್‌ ಆಗುವ ಸಾಧ್ಯತೆ ಇದೆ.  ಮುಸ್ಲಿಂ ಮೀಸಲಾತಿ ರದ್ದುಗೊಳಿಸಿ ಆ ಪ್ರಮಾಣವನ್ನು ಒಕ್ಕಲಿಗ, ಲಿಂಗಾಯತರಿಗೆ ಹಂಚಿಕೆ ಮಾಡಿದ ಬಿಜೆಪಿ ಸರ್ಕಾರದ ನಿರ್ಧಾರ ಸರಿಯೇ ಎನ್ನುವ ಪ್ರಶ್ನೆಯನ್ನು ವೆಬ್‌ಸೈಟ್‌ನಲ್ಲಿ ಕೇಳಲಾಗಿತ್ತು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಕನ್ನಡ ವೆಬ್‌ಸೈಟ್‌ನಲ್ಲಿ ಶೇ. 62ರಷ್ಟು ಮಂದಿ ಇದು ಸರಿಯಾದ ನಿರ್ಧಾರ ಎಂದಿದ್ದರೆ, ಶೇ. 26ರಷ್ಟು ಮಂದಿ ಬಿಜೆಪಿ ಸರ್ಕಾರ ಮಾಡಿರುವ ಈ ನಿರ್ಧಾರ ತಪ್ಪು ತಂದಿದ್ದಾರೆ. ಇನ್ನು ಶೇ. 12 ರಷ್ಟು ಮಂದಿ ಇದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಇದೇ ಪ್ರಶ್ನೆಗೆ ಇಂಗ್ಲೀಷ್‌ ವೆಬ್‌ಸೈಟ್‌ನಲ್ಲಿ ಶೇ 48ರಷ್ಟು ಮಂದಿ ಮುಸ್ಲಿಂ ಮೀಸಲಾತಿ ರದ್ದು ಮಾಡಿರುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಶೇ. 26ರಷ್ಟು ಮಂದಿ ಇದು ತಪ್ಪು ನಿರ್ಧಾರ ಎಂದಿದ್ದರೆ, ಶೇ. 18 ರಷ್ಟು ಮಂದಿ ಇದನ್ನು ಹೇಳೋಕೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ನಿಮ್ಮ ಪ್ರಕಾರ ಯಾವುದು ಹೆಚ್ಚು ಭ್ರಷ್ಟ ಸರ್ಕಾರ? ಎನ್ನುವ ಪ್ರಶ್ನೆಗೆ, ಕನ್ನಡ ವೆಬ್‌ಸೈಟ್‌ನಲ್ಲಿ ಶೇ. 19ರಷ್ಟು ಮಂದಿ ಈಗಿರುವ ಬಸವರಾಜ್‌ ಬೊಮ್ಮಾಯಿ ಅವರ ಸರ್ಕಾರವೇ ಭ್ರಷ್ಟ ಎಂದಿದ್ದರೆ, ಶೇ.17 ರಂದು ಮಂದಿ ಇದಕ್ಕೂ ಹಿಂದಿನ ಯಡಿಯೂರಪ್ಪ ಸರ್ಕಾರ ಭಷ್ಟ ಸರ್ಕಾರವಾಗಿತ್ತು ಎಂದಿದ್ದಾರೆ. ಶೇ. 18 ರಂದು ಮಂದಿ ಕಾಂಗ್ರೆಸ್‌-ಜೆಡಿಎಸ್‌ನ ಮೈತ್ರಿ ಸರ್ಕಾರ ಅತ್ಯಂತ ಭ್ರಷ್ಟವಾಗಿತ್ತು ಎಂದಿದ್ದಾರೆ. ಇನ್ನು ಶೇ.46ರಷ್ಟು ಮಂದಿ ಹಾಲಿ ವಿಧಾನಭೆಯಲ್ಲಿ ಅಧಿಕಾರ ನಡೆಸಿದ ಎಲ್ಲಾ ಮೂರೂ ಸರ್ಕಾರಗಳು ಭ್ರಷ್ಟವಾಗಿತ್ತು ಎಂದಿದ್ದಾರೆ. ಇಂಗ್ಲೀಷ್‌ ವೆಬ್‌ಸೈಟ್‌ನಲ್ಲೂ ಬಹುತೇಕ ಇದೇ ರೀತಿಯ ಜನಾಭಿಪ್ರಾಯ ವ್ಯಕ್ತವಾಗಿದೆ. ಶೇ. 48 ರಷ್ಟು ಮಂದಿ ಮೂರೂ ಸರ್ಕಾರ ಭ್ರಷ್ಟವಾಗಿತ್ತು ಎಂದಿದ್ದರೆ, ಮೈತ್ರಿ ಸರ್ಕಾರ ಶೇ. 19, ಬಿಎಸ್‌ವೈ ಸರ್ಕಾರ ಶೇ. 16 ಹಾಗೂ ಬೊಮ್ಮಾಯಿ ಸರ್ಕಾರ ಶೇ. 17ರಷ್ಟು ಮಂದಿ ಭ್ರಷ್ಟವಾಗಿತ್ತು ಎಂದು ತೀರ್ಪು ನೀಡಿದ್ದಾರೆ.

click me!