Mysuru : ರೋಪ್‌ ವೇ ನಿರ್ಮಾಣಕ್ಕೆ ಗುಪ್ತಕಾರ್ಯಸೂಚಿ

By Kannadaprabha News  |  First Published Feb 10, 2023, 5:50 AM IST

ಸಾಂಸ್ಕೃತಿಕ ನಗರಿ ಮೈಸೂರಿಗೆ ಕಿರೀಟಪ್ರಾಯದಂತಿರುವ ಚಾಮುಂಡಿಬೆಟ್ಟದಲ್ಲಿ ರೋಪ್‌ ವೇ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಗುಪ್ತ ಕಾರ್ಯಸೂಚಿ ಕೈಗೊಂಡಿದೆ ಎಂದು ನಗರಪಾಲಿಕೆಯ ಮಾಜಿ ಸದಸ್ಯ ಹಾಗೂ ಜೆಡಿಎಸ್‌ ಮುಖಂಡ ಕೆ.ವಿ. ಮಲ್ಲೇಶ್‌ ಆರೋಪಿಸಿದ್ದಾರೆ.


  ಮೈಸೂರು :  ಸಾಂಸ್ಕೃತಿಕ ನಗರಿ ಮೈಸೂರಿಗೆ ಕಿರೀಟಪ್ರಾಯದಂತಿರುವ ಚಾಮುಂಡಿಬೆಟ್ಟದಲ್ಲಿ ರೋಪ್‌ ವೇ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಗುಪ್ತ ಕಾರ್ಯಸೂಚಿ ಕೈಗೊಂಡಿದೆ ಎಂದು ನಗರಪಾಲಿಕೆಯ ಮಾಜಿ ಸದಸ್ಯ ಹಾಗೂ ಜೆಡಿಎಸ್‌ ಮುಖಂಡ ಕೆ.ವಿ. ಮಲ್ಲೇಶ್‌ ಆರೋಪಿಸಿದ್ದಾರೆ.

ಬದಲಾದ ಕಾಲಘಟ್ಟದಲ್ಲಿ ಕೇವಲ ಹಣಕ್ಕೆ ಪ್ರಾಮುಖ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರವು ಪರಿಸರ ಪರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನ ಮಾಡುವಲ್ಲಿ ವಿಫಲವಾಗಿದ್ದು, ಪರಿಸರದ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಮಾನವನ ದುರಾಸೆಯಿಂದಾಗಿ ಹವಾಮಾನ ವೈಪರಿತ್ಯ ಉಂಟಾಗಿ ಈಗಾಗಲೇ ಗಾಳಿ, ನೀರು ಭಾಗಶಃ ಮಲೀನಗೊಂಡಿರುವ ಈ ಹೊತ್ತಿನಲ್ಲಿ ಪರಿಸರವನ್ನು ಕಾಪಾಡಲೇಬೇಕೆಂಬ ಕನಿಷ್ಠ ಕಾಳಜಿಯೂ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಇಲ್ಲದಿರುವುದು ದುದೈರ್‍ವ ಎಂದು ಅವರು ಕಿಡಿಕಾರಿದ್ದಾರೆ.

Latest Videos

undefined

ನಿರ್ವಹಣೆ ಕೊರತೆ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದ ರಸ್ತೆ ಪದೇ ಪದೆ ಕುಸಿದುಬಿದ್ದು, ಇಡೀ ಸಂಚಾರ ವ್ಯವಸ್ಥೆಯೇ ಸ್ಥಗಿತಗೊಂಡಿರುವುದು ಕಣ್ಣಮುಂದಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಚಾಮುಂಡಿಬೆಟ್ಟದಲ್ಲಿ ರೋಪ್‌ ವೇ ಮಾಡುವ ಪ್ರಸ್ತಾವನೆ ಇಟ್ಟಿರುವುದು ಮೈಸೂರಿನ ಪರಿಸರ ನಾಶಕ್ಕೆ ಕೈಗೊಂಡಿರುವ ಯೋಜನೆ ಇದಾಗಿದೆ. ಪ್ರಸಾದ ಯೋಜನೆಯಲ್ಲಿ ಈಗಾಗಲೇ ಚಾಮುಂಡಿಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಳ್ಳುವ ಮೂಲಕ ಇಡೀ ಬೆಟ್ಟಪರಿಸರ ವಿರೋಧಿ ತಾಣವಾಗಿದೆ. ಮಾತ್ರವಲ್ಲ, ಪ್ರಕೃತಿಗೆ ವಿರುದ್ಧವಾದ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ದೂರಿದ್ದಾರೆ.

ಪರಿಸ್ಥಿತಿ ಹೀಗಿದ್ದರೂ, ಇದೀಗ ಮತ್ತೆ ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಮಾಡುವ ಯೋಜನೆ ಪ್ರಸ್ತಾಪ ಮಾಡಿರುವುದು ಅರ್ಥಹೀನ ಮಾತ್ರವಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ಹಾಗೂ ಪರಿಸರ ವಿರೋಧಿ ನಡೆಯಾಗಿದೆ. ಮೈಸೂರಿನ ಪ್ರಜ್ಞಾವಂತ ನಾಗರೀಕರು ಈ ಕೂಡಲೇ ಎಚ್ಚೆತ್ತುಕೊಂಡು ಚಾಮುಂಡಿಬೆಟ್ಟಉಳಿಸುವ ಸಂಕಲ್ಪ ಮಾಡದಿದ್ದಲ್ಲಿ ಐತಿಹಾಸಿಕ ನಗರಿಯೊಂದು ಭವಿಷ್ಯದಲ್ಲಿ ನಾಮಾವಶೇಷವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಪರಿಸರದ ಬಗ್ಗೆ ಕಾಳಜಿಯುಳ್ಳ ನಾಗರೀಕರು, ಸಂಘ, ಸಂಸ್ಥೆಗಳು ಕೂಡಲೇ ಇದರ ವಿರುದ್ಧ ಧನಿಯೆತ್ತದಿದ್ದಲ್ಲಿ ಕೆಲವರು ತಮ್ಮ ಸ್ವಾರ್ಥ ಸಾಧನೆಗಾಗಿ ಮೈಸೂರನ್ನು ಹಾಳುಗೆಡವುದರಲ್ಲಿ ಯಾವುದೇ ರೀತಿಯ ಸಂಶಯ ಇಲ್ಲ. ಈ ಕುರಿತು ಪ್ರತಿ ಸಂಘಸಂಸ್ಥೆಗಳು ಹೋರಾಟಕ್ಕಿಳಿಯುವುದು ಒಂದೆಡೆಯಾದರೆ, ನ್ಯಾಯಾಲಯದ ಮೂಲಕವೇ ಈ ರಾಜಕೀಯ ಹಿತಾಸಕ್ತಿಯನ್ನು ಕಟ್ಟಿಹಾಕುವ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.

ನಂದಿ ಬೆಟ್ಟದ ಭೂಮಿ ಪೂಜೆ ಇದೇ ತಿಂಗಳಲ್ಲಿ

ಚಿಕ್ಕಬಳ್ಳಾಪುರ (ಫೆ.4) : ಇದೇ ತಿಂಗಳಿನಲ್ಲಿ ವಿಶ್ವ ವಿಖ್ಯಾತ ನಂದಿಬೆಟ್ಟಕ್ಕೆ ಪ್ರವಾಸ್ಯೋದ್ಯಮ ಇಲಾಖೆ ವತಿಯಿಂದ ಮಂಜೂರು ಆಗಿರುವ ರೋಪ್‌ ವೇ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಡಾ.ಕೆ.ಸುಧಾಕರ್‌ ತಿಳಿಸಿದರು.

ತಾಲೂಕಿನ ನÜಂದಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, 85 ಕೋಟಿ ವೆಚ್ಚದಲ್ಲಿ ನಂದಿಬೆಟ್ಟಕ್ಕೆ ರೋಪ್‌ ವೇ ನಿರ್ಮಾಣಕ್ಕೆ ಟೆಂಡರ್‌ ಆಗಿದ್ದು, ರೋಪ್‌ ವೇ ನಿರ್ಮಾಣದ ನಂತರ ಈ ಭಾಗದ ಭೂಮಿ ಬೆಲೆ ಗಗನಕ್ಕೆ ಏರಲಿದೆ. ಹಾಗಾಗಿ ರೈತರು ಭೂಮಿ ಮಾರಾಟ ಮಾಡಬಾರದೆಂದು ಸಚಿವಸ ಸುಧಾಕರ್‌ ಮನವಿ ಮಾಡಿದರು.

Chikkaballapur: ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್‌: ಸಚಿವ ಸುಧಾಕರ್‌

ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರು ಬಿಜೆಪಿ ಸಿದ್ಧಾತ, ಸರ್ಕಾರದ ಆಡಳಿತ ವೈಖರಿ ಮತ್ತು ತಮ್ಮ ಹತ್ತು ವರ್ಷಗಳ ಅಭಿವೃದ್ಧಿ ಕಂಡು ಬಿಜೆಪಿ ಸೇರುತ್ತಿದ್ದಾರೆ, ಪೋಶೆಟ್ಟಿಹಳ್ಳಿ ಗ್ರಾಪಂನ ಗುಂಗಿರ್ಲಹಳ್ಳಿ ಮತ್ತು ನಂದಿ ಹೋಬಳಿಗಳಿಂದ ಹೆಚ್ಚಿನ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷ ಸೇರುತ್ತಿದ್ದು, ಪರಿವರ್ತನೆ ನಮ್ಮ ಕಡೆ ಆಗುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ವೈಟ್‌ ವಾಶ್‌ ಆಗುವ ದಿನಗಳು ಸಮೀಪಿಸಿದೆ ಎಂದರು.

369 ನಿವೇಶನ ಸಿದ್ಧ :

ನಂದಿ ಗ್ರಾಪಂ ವ್ಯಾಪ್ತಿಯಲ್ಲಿ ಭೂಮಿ ತುಂಬಾ ದುಬಾರಿಯಾಗಿದ್ದು, ಒಂದು ನಿವೇಶನದ ಬೆಲೆ 15 ಲಕ್ಷಕ್ಕೂ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಜಮೀನು ಗುರ್ತಿಸಿ 369 ನಿವೇಶನ ಸಿದ್ಧಪಡಿಸಿದ ಎಲ್ಲ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಸಚಿವರು, ಕಳೆದ ಮೂರು ವರ್ಷದಿಂದ ಅಧಿಕಾರಿಗಳು ಶ್ರಮಿಸಿ ಈ ನಿವೇಶನಗಳನ್ನು ಗುರುತಿಸಿದ್ದಾರೆ ಎಂದರು.

click me!