ಕೆ.ಆರ್‌. ಕ್ಷೇತ್ರದಲ್ಲಿ ನಾನು ಬಿಜೆಪಿ ಟಿಕೆಟ್‌ ಆಕಾಂಕ್ಷಿ : ಎಚ್‌.ವಿ. ರಾಜೀವ್‌

By Kannadaprabha News  |  First Published Feb 10, 2023, 5:46 AM IST

ಈ ಬಾರಿ ಕೆ.ಆರ್‌. ಕ್ಷೇತ್ರದಲ್ಲಿ ನಾನು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಅದರ ಪ್ರಯತ್ನ ಕೂಡ ನಡೆಯುತ್ತಿದೆ ಎಂದು ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ತಿಳಿಸಿದರು.


 ಮೈಸೂರು :  ಈ ಬಾರಿ ಕೆ.ಆರ್‌. ಕ್ಷೇತ್ರದಲ್ಲಿ ನಾನು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಅದರ ಪ್ರಯತ್ನ ಕೂಡ ನಡೆಯುತ್ತಿದೆ ಎಂದು ಎಂಡಿಎ ಮಾಜಿ ಅಧ್ಯಕ್ಷ ಎಚ್‌.ವಿ. ರಾಜೀವ್‌ ತಿಳಿಸಿದರು.

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೂಡ ಕೆ.ಆರ್‌. ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದು, ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತ ಬಂದಿದ್ದೇನೆ. ಚಾಮರಾಜನಗರ ಜಿಲ್ಲೆಯ ನಮ್ಮೂರಿನಲ್ಲಿ ಬೂತ್‌ ಏಜೆಂಟ್‌ ಆಗಿ ಕೆಲಸ ಮಾಡಿಕೊಂಡು ಬಂದ ನಾನು, ಅಲ್ಲಿಂದ ರಾಜಕೀಯ ಜೀವನ ಆರಂಭಿಸಿದ್ದೇನೆ ಎಂದರು.

Latest Videos

undefined

ನನ್ನ ನಾಯಕ ಅವರ ಜೊತೆ ಹೆಜ್ಜೆಗೆ ಹೆಜ್ಜೆ ಇಟ್ಟುಕೊಂಡು ದಲ್ಲಿ ಬೆಳೆಯುತ್ತ ಬಂದಿದ್ದೇನೆ. ಕಳೆದ ಬಾರಿ ಅವರು ಕೆಜೆಪಿ ಪಕ್ಷ ಕಟ್ಟಿದ್ದರು. ಅವರ ಜೊತೆ ಹೋಗಿದ್ದೆ ಮತ್ತೆ ಅವರು, ಬಿಜೆಪಿ ವಾಪಸ್‌ ಬಂದ್ರು ನಾನೂ ಬಿಜೆಪಿಗೆ ಬಂದೆ. ಕಳೆದ ಬಾರಿ ಚುನಾವಣೆಯಲ್ಲಿ ನಾನು ಬಾರಿ ಪೈಪೋಟಿ ನೀಡಿ ಪರಾಜಿತನಾಗಿದ್ದೇನೆ ಎಂದು ಅವರು ಹೇಳಿದರು. ಕೆ.ಆರ್‌. ಕ್ಷೇತ್ರದ ಜನ ನನ್ನನ್ನ ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಅಲ್ಲದೆ, ಈಗ ನಾನು ಕೂಡ ಕೆ.ಆರ್‌. ಕ್ಷೇತ್ರದ ಆಕಾಂಕ್ಷಿ ಆಗಿರುವುದು ಸತ್ಯ. ಆ ಮೂಲಕ ಪಕ್ಷ ಸಂಘಟನೆ ಸಾಮಾಜಿಕ ಕೆಲಸ ಕಾರ್ಯಗಳು, ಜನಸಾಮಾನ್ಯರ ಜೊತೆ ನಿರಂತರ ಸಂಪರ್ಕ, ಸಮಾಜ ಸೇವಾ ಕೆಲಸಗಳನ್ನು ಮಾಡುತ್ತ ಬಂದಿದ್ದೇನೆ ಎಂದರು.

ಎಚ್‌ಡಿಕೆಗೆ ತಿರುಗೇಟು

ರಾಜ್ಯದಲ್ಲಿ ಮೂರನೇ ಸ್ಥಾನಕ್ಕೆ ಬಂದವರು ಮುಖ್ಯಮಂತ್ರಿ ಆಗುವುದಾದರೆ, ನಾವೇಕೆ ಮುಖ್ಯಮಂತ್ರಿ ಆಗಬಾರದು? ಸಂವಿಧಾನದಲ್ಲಿ ಯಾರು ಬೇಕಾದರು ಮುಖ್ಯಮಂತ್ರಿಯಾಗಬಹುದು, ಪ್ರಧಾನ ಮಂತ್ರಿಯಾಗಬಹುದು. ಸಂವಿಧಾನದಲ್ಲಿ ಅದಕ್ಕೆ ಅವಕಾಶವಿದೆ. ಯಾವುದೋ ಸಾವಿರ ವರ್ಷಗಳ ವಿಚಾರ ಇಟ್ಟುಕೊಂಡು ರಾಜಕಾರಣಿಗಳು ರಾಜಕೀಯ ಮಾಡೋದು ಅಪ್ರಸ್ತುತ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಮಾತಿಗೆ ಎಚ್‌.ವಿ. ರಾಜೀವ್‌ ತಿರುಗೇಟು ನೀಡಿದರು.

ಶಿರಾ ಕ್ಷೇತ್ರಕ್ಕೆ ನಾನು ಆಕಾಂಕ್ಷಿ

ಶಿರಾ :  ಶಿರಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಕಳೆದ 18 ವರ್ಷಗಳಿಂದ ಹಗಲು ಇರುಳೆನ್ನದೆ ಬಹಳಷ್ಟುಶ್ರಮಿಸಿದ್ದೇನೆ. ಕಳೆದ 2018ರ ವಿಧಾನಸಭಾ ಚುನಾವಣೆ ಹಾಗೂ ಉಪ ಉಪಚುನಾವಣೆಯಲ್ಲಿ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಸಹಾ, ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ ಟಿಕೆಟ್‌ ತ್ಯಾಗ ಮಾಡಿದ್ದೇನೆ. ಆದರೆ ಈ ಬಾರಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ಸಂಘನಾತ್ಮಕ ಮಧುಗಿರಿ ಜಿಲ್ಲೆಯ ಜಿಲ್ಲಾಧ್ಯಕ್ಷ ಬಿ.ಕೆ. ಮಂಜುನಾಥ್‌ ಹೇಳಿದರು.

ತಮ್ಮ ಕಚೇರಿಯಲ್ಲಿ ಪ್ರತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನನಗೀಗ 60 ವರ್ಷ ವಯಸ್ಸಾಗಿದೆ ಹಾಗಾಗಿ ನಾನು ಕೊನೆ ಬಾರಿ ಟಿಕೆಟ್‌ ಕೇಳುತ್ತಿದ್ದೇನೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಈ ಬಗ್ಗೆ ಬಿಜೆಪಿ ವರಿಷ್ಠರಿಗೂ ಮನವಿ ಮಾಡಿದ್ದೇನೆ. ಪಕ್ಷ ನನಗೆ ಟಿಕೆಟ್‌ ನೀಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಎಸ್‌. ಆರ್‌. ಗೌಡ ಅವರಿಗೆ ಪಕ್ಷದಿಂದ ಟಿಕೆಟ್‌ ನೀಡಲಾಗಿತ್ತು, ಆಗ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡದೆ ತಟಸ್ಥನಾಗಿದ್ದೆ. ನಂತರ ನಡೆದ ಉಪ ಉಪಚುನಾವಣೆಯಲ್ಲಿಯೂ ಸಹ ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಪಕ್ಷ ಡಾ. ಸಿಎಂ ರಾಜೇಶ್‌ ಗೌಡ ಅವರಿಗೆ ಟಿಕೆಟ್‌ ನೀಡಿತು. ಆಗಲೂ ಸಹ ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿ vರಾಜೇಶ್‌ ಗೌಡ ಅವರ ಗೆಲುವಿಗೆ ಶ್ರಮಿಸಿದ್ದೇನೆ. ಈ ಬಾರಿ ನಾನು ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ವರಿಷ್ಠರಿಗೂ ನನ್ನ ಮನವಿಯನ್ನು ಸಲ್ಲಿಸಿದ್ದೇನೆ. ಪಕ್ಷದ ವರಿಷ್ಠರು ಸಮೀಕ್ಷೆ ಮಾಡಿ ಟಿಕೆಟ್‌ ನೀಡುವುದಾಗಿ ತಿಳಿಸಿದ್ದಾರೆ. ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂ¨ದು ತಿಳಿಸಿದರು.

click me!