Latest Videos

ಗ್ರಾಮಾಂತರಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ದೇಶದ ಆಸ್ತಿ

By Kannadaprabha NewsFirst Published Apr 15, 2023, 5:54 AM IST
Highlights

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ದೇಶದ ಆಸ್ತಿಯಾಗಿದ್ದು, ಅವರ ತತ್ವ ಸಿದ್ಧಾಂತ ಹಾಗೂ ಚಿಂತನೆಗಳು ಸದಾ ಕಾಲಕ್ಕೂ ಪ್ರಸ್ತುತವಾಗಿದ್ದು, ಅವರ ಉದಾತ್ತ ಜೀವನ ಶೈಲಿ ಪ್ರತಿಯೊಬ್ಬ ನಾಗರೀಕರಿಗೂ ಆದರ್ಶವಾಗಿದೆ ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.

 ನಂಜನಗೂಡು :  ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ದೇಶದ ಆಸ್ತಿಯಾಗಿದ್ದು, ಅವರ ತತ್ವ ಸಿದ್ಧಾಂತ ಹಾಗೂ ಚಿಂತನೆಗಳು ಸದಾ ಕಾಲಕ್ಕೂ ಪ್ರಸ್ತುತವಾಗಿದ್ದು, ಅವರ ಉದಾತ್ತ ಜೀವನ ಶೈಲಿ ಪ್ರತಿಯೊಬ್ಬ ನಾಗರೀಕರಿಗೂ ಆದರ್ಶವಾಗಿದೆ ಎಂದು ಶಾಸಕ ಬಿ. ಹರ್ಷವರ್ಧನ್‌ ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅವರ ಜಯಂತಿ ಪ್ರಯುಕ್ತ ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಬಳಿ ಇರುವ ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಸಮಾನತೆಯ ಸಮಾಜ ನಿರ್ಮಾಣದ ಸಲುವಾಗಿ ವಿಶ್ವದಲ್ಲೇ ಶ್ರೇಷ್ಟ ವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಬಾಬಾ ಸಾಹೇಬ್‌ ಅಂಬೇಡ್ಕರ್‌ ತಮ್ಮ ಜೀವಿತಾವಧಿಯ ಉದ್ದಕ್ಕೂ ಶೋಷಿತ ಸಮುದಾಯಗಳ ಜನರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಿದರು. ಸಧೃಢ ಭಾರತ ನಿರ್ಮಾಣಕ್ಕೆ ಬಾಬಾ ಸಾಹೇಬರ ಕೊಡುಗೆ ಅನನ್ಯವಾದುದು, ಹೀಗಾಗಿ ಅವರ ಆದರ್ಶ ಹಾಗೂ ಸಂದೇಶಗಳು ಎಂದೆಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ನಗರಸಭಾಧ್ಯಕ್ಷ ಎಚ್‌.ಎಸ್‌. ಮಹದೇವಸ್ವಾಮಿ, ಬಿಜೆಪಿ ಮಾಜಿ ಅಧ್ಯಕ್ಷ ಬಾಲಚಂದ್ರು, ನಗರಸಭೆ ಸದಸ್ಯರಾದ ಮಹದೇವಮ್ಮ, ಬಾಲಚಂದ್ರ, ರಂಗಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಮಹದೇವ್‌ ಇದ್ದರು.

ರಾಷ್ಟ್ರದ ಪ್ರತಿಯೊಬ್ಬರು ಸಹೋದರತ್ವದಿಂದ, ಸಮಾನತೆಯಿಂದ ಬದುಕಬೇಕು ಎಂಬ ಕನಸ್ಸು ಕಂಡವರು ಡಾ.ಬಿ.ಆರ್‌. ಅಂಬೇಡ್ಕರ್‌

ಸರಗೂರು :  ತಮ್ಮನ್ನು ಶೋಷಣೆ, ದೌರ್ಜನ್ಯ ಮಾಡಿದ ಸಮಾಜದ ವಿರುದ್ಧ ಎಂದಿಗೂ ಪ್ರತಿಕಾರದಿಂದ ಸಿಡಿದು ನಿಂತವರಲ್ಲ. ಬದಲಿಗೆ ಅವರ ಗುರಿ ಈ ರಾಷ್ಟ್ರದ ಪ್ರತಿಯೊಬ್ಬರು ಸಹೋದರತ್ವದಿಂದ, ಸಮಾನತೆಯಿಂದ ಬದುಕಬೇಕು ಎಂಬ ಕನಸ್ಸು ಕಂಡವರು ಡಾ.ಬಿ.ಆರ್‌. ಅಂಬೇಡ್ಕರ್‌ ಎಂದು ಭಾರತ ರತ್ನ ಡಾ.ಬಿ.ಆರ್‌.ಅಂಬೇಡ್ಕರ್‌ ಸ್ವಸಹಾಯಕ ಸಂಘ ಅಧ್ಯಕ್ಷ ಭೋಗಯ್ಯ ತಿಳಿಸಿದರು.

ಪಟ್ಟಣದ 4ನೇವಾರ್ಡನಲ್ಲಿ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 132ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್‌ ಶೋಷಿತ ಸಮುದಾಯಗಳ ಏಳಿಗೆಗಾಗಿ ನಿರಂತವಾಗಿ ಶ್ರಮಿಸಿ ಚಳುವಳಿ ಮಾಡಿದವರು. ಜಾಗೃತಿ ಮತ್ತು ಜ್ಞಾನದ ದೀಪವಾಗಿ ಈ ದೇಶದ ಅಭಿವೃದ್ಧಿಗೆ ದಾರಿಯಾದರು. ಅಂತಹ ಮಹನೀಯರು ಕೇವಲ ಒಂದು ವರ್ಗಕ್ಕೆ ಸೀಮಿತವಲ್ಲ ಅವರು ದೇಶದ ಆಸ್ತಿ ಎಂದರು.

ಕಾರ್ಯದರ್ಶಿ ಮೂರ್ತಿ ಮಾತನಾಡಿ, ವಿಧಾನಸಭಾ ಚುನಾವಣ ಕಾರಣದಿಂದ ಕಾರ್ಯಕ್ರಮದಲ್ಲಿ ಹೆಚ್ಚು ಜನ ಸೇರಲು ಸಾಧ್ಯವಾಗಿಲ್ಲ. ಆದರು ಅಂಬೇಡ್ಕರ್‌ ಅವರ ಆದರ್ಶಗಳು ಸಾಮಾನ್ಯ ಜನರಿಗೆ, ರೈತಾಪಿ ವರ್ಗದವರಿಗೆ ತಲುಪುವ ಕೆಲಸವನ್ನು ಇಂದಿನ ಯುವಪೀಳೆಗೆ ಗಮನಹರಿಬೇಕು. ಇಂತಹ ಮಹನೀಯರ ಜಯಂತಿ ಆಚರಿಸಿ, ಅವರ ಆದÜರ್ಶ ಪಾಲಿಸೋಣ ಎಂದು ಅವರು ಹೇಳಿದರು.

ಸಂಘದ ಉಪಾದ್ಯಕ್ಷ ಮಹದೇವ, ಗೌರವಾಧ್ಯಕ್ಷ ಗೋಪದಾಸಿ, ಕಾರ್ಯದರ್ಶಿ ಮೂರ್ತಿ, ಖಜಾಂಚಿ ನಂಜುಡಸ್ವಾಮಿ, ಸಹಕಾರ್ಯದರ್ಶಿ ಹನುಮಂತ, ಬಾಲರಾಜು, ಆದಿಶೇಷ, ಸತೀಶ್‌, ಮಹೇಶ್‌, ಶಿವನಂಜು, ಶಿವಕುಮಾರ, ಯಜಮಾನರಾದ ಶಿವಣ್ಣ, ಪಪಂ ಸದಸ್ಯ ಎಸ್‌.ಎಲ್‌. ರಾಜಣ್ಣ, ಅಂಬೇಡ್ಕರ್‌ ಟ್ರಸ್ಟ್‌ ಅಧ್ಯಕ್ಷ ಇದೀಯಪ್ಪ, ಮಾಜಿ ಯಜಮಾನ ಗೋಪಾಲ್‌, ಮುಖಂಡ ಚನ್ನಿಪುರ ಮಲ್ಲೇಶ್‌ ಮೊದಲಾದವರು ಇದ್ದರು.

click me!