ಕಾರ್ಮಿಕ ಸಮಸ್ಯೆ ನಿವಾರಣೆಗೆ ಬದ್ದ : ಕಾಂಗ್ರೆಸ್‌ ಅಭ್ಯರ್ಥಿ ವೆಂಕಟೇಶ್‌

By Kannadaprabha News  |  First Published Apr 15, 2023, 5:42 AM IST

ಪಾವಗಡದ ವಿವಿಧ ವಲಯಗಳ ಕಾರ್ಮಿಕರ ಸಮಸ್ಯೆ ನಿವಾರಣೆಗೆ ಬದ್ಧರಾಗಿದ್ದು, ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಇಲ್ಲಿನ ವಿಧಾನ ಸಭೆ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಮನವಿ ಮಾಡಿದರು.


  ಪಾವಗಡ :  ಪಾವಗಡದ ವಿವಿಧ ವಲಯಗಳ ಕಾರ್ಮಿಕರ ಸಮಸ್ಯೆ ನಿವಾರಣೆಗೆ ಬದ್ಧರಾಗಿದ್ದು, ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ಇಲ್ಲಿನ ವಿಧಾನ ಸಭೆ ಚುನಾವಣೆಯ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಮನವಿ ಮಾಡಿದರು.

ಬುಧವಾರ ತಂದೆ ಶಾಸಕ ವೆಂಕಟರಮಣಪ್ಪ ಹಾಗೂ ತಾಲೂಕು ಕೈಪಡೆ ಅಧ್ಯಕ್ಷ ಸುದೇಶ್‌ಬಾಬು ಅವರ ಸಮ್ಮುಖದಲ್ಲಿ ನಗರದ ಆಟೋಚಾಲಕರು, ಬಸ್ಟ್ಯಾಂಡ್‌ ಹಮಾಲಿ ಕಾರ್ಪೆಂಟರ್ಸ್‌ ಹಾಗೂ ಇತರೆ ಬಡವಾಣೆಗಳ ಸಾವಿರಾರು ಮಂದಿ ಕಾರ್ಮಿಕರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ ಬಳಿಕ ಅವರು ಮಾತನಾಡಿದರು. ಆಟೋ ಕಾರ್ಪೆಂಟರ್‌ ಹಮಾಲಿ ಇತರೆ ವಲಯಗಳ ಕಾರ್ಮಿಕರು ತಮ್ಮ ಸಮಸ್ಯೆ ತಿಳಿಸಿದ್ದು, ನಿಮ್ಮ ಸಮಸ್ಯೆ ನಿವಾರಣೆಗೆ ಬದ್ದನಾಗಿದ್ದೇನೆ. ಕಾರ್ಮಿಕರ ಸಹಕಾರಕ್ಕೆ ಋುಣಿಯಾಗಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಪರಿಪ್ರಮಾಣದಕ್ಕೆ ಕಾಂಗ್ರೆಸ್‌ ಸೇರ್ಪಡೆ ಸಂತಸ ತಂದಿದೆ. ನಮ್ಮ ತಂದೆ ಶಾಸಕ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವೆ. ಮೇ 10ರ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಿ ಕಾಂಗ್ರೆಸ್‌ ಗೆಲುವಿಗೆ ಸಹಕರಿವಂತೆ ಕೈಜೋಡಿಸಿ ಕಾರ್ಮಿಕರಲ್ಲಿ ವಿನಂತಿಸಿಕೊಂಡರು.

Tap to resize

Latest Videos

ಇದೇ ವೇಳೆ ತಾಲೂಕಿನ ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರು ಮೆಕ್ಯಾನಿಕ್‌ ಆಯೋಸಿಯೇಷನ್‌ ಕೂರಚ ಇತರೆ ಸಮುದಾಯದ ಮುಖಂಡರು ಚುನಾವಣಾ ಪೂರ್ವ ಸಭೆ ನಡೆಸಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಅವರಿಗೆ ಬೆಂಬಲ ಘೋಷಿಸಿ ಅತ್ಯಧಿಕ ಮತಗಳಿಂದ ಗೆಲ್ಲಿಸುವುದಾಗಿ ಹೇಳಿದರು.

ಇದೇ ವೇಳೆ ಮುಖಂಡರಾದ ತಾಲೂಕಿನ ಅಚ್ಚಮ್ಮನಹಳ್ಳಿ ಗ್ರಾಮದ ಮಂಜುನಾಥ್‌, ದವಡಬೆಟ್ಟಮಾರಪ್ಪ, ಮದ್ದೇಟಪ್ಪ, ಆರ್‌.ಹೊಸಕೋಟೆ ಅಂಜಿ, ಮೇಗಲಪಾಳ್ಯ ಹಾಗೂ ಬೂದಿಬೆಟ್ಟಗ್ರಾಮದ ನೂರಾರು ಮಂದಿ ಕಾರ್ಯಕರ್ತರು ಸೇರಿ ನಗರದ ಕೊರಚ ಸಮುದಾಯದ 40ಕ್ಕಿಂತ ಹೆಚ್ಚು ಮಂದಿ ಮುಖಂಡರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

ಈ ವೇಳೆ ತಾಲೂಕು ಕಾಂಗ್ರೆಸ್‌ ನಗರಾಧ್ಯಕ್ಷ ಸುದೇಶ್‌ಬಾಬು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಮಾಂಜಿನಪ್ಪ, ಪುರಸಭೆ ಸದಸ್ಯರಾದ ಪಿ.ಎಚ್‌.ರಾಜೇಶ್‌, ಮಹಮ್ಮದ್‌ ಇಮ್ರಾನ್‌, ತೆಂಗಿನಕಾಯಿ ರವಿ, ತಾಪಂ ಉಪಾಧ್ಯಕ್ಷ ಐ.ಜಿ.ನಾಗರಾಜ್‌, ಮುಖಂಡ ಆರ್‌.ಎ.ಹನುಮಂತರಾಯಪ್ಪ, ಎನ್‌.ಹೊಸಹಳ್ಳಿ ಮಂಜುನಾಥ್‌, ಸೇರಿದಂತೆ ನಗರದ ಆಟೋ ಚಾಲಕರ ಸಂಘದ ಬೇಕರಿ ನಾಗರಾಜ್‌, ಆಟೋ ಚಾಲಕರ ಸಂಘದ ಉಪಾಧ್ಯಕ್ಷ, ಸದಸ್ಯರು ಸೇರಿ ತಾಲೂಕು ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರಿದ್ದರು.

ಶಿರಾ ಅಭಿವೃದ್ಧಿಯಲ್ಲಿ ನನ್ನದೆ ಸಿಂಹಪಾಲು

ಶಿರಾ (ಏ.13): ಶಿರಾ ನಗರವನ್ನು ಜಿಲ್ಲಾ ಕೇಂದ್ರವಾಗಿಸುವುದು ನನ್ನ ಸಂಕಲ್ಪ ಆ ನಿಟ್ಟಿನಲ್ಲಿ ನನ್ನ ಅಧೀಕಾರದ ಅವಧಿಯಲ್ಲಿ ಸುಮಾರು 3250 ಕೋಟಿ ರೂಪಾಯಿ ಅನುದಾನ ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಮಾಡಿದ್ದೇನೆ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಹೇಳಿದರು. ಅವರು ತಾಲೂಕಿನ ಗೌಡಗೆರೆ ಹೋಬಳಿಯ ಉದ್ದರಾಮನಹಳ್ಳಿ ಗೇಟ್‌ ಬಳಿ ತಾಲೂಕು ಕಾಂಗ್ರೆಸ್‌ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಹೆಂದೊರೆ, ನಾದೂರು, ಹೊಸಹಳ್ಳಿ, ಮೇಲ್ಕುಂಟೆ ಮತ್ತು ಬಂದಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂತ್‌ ಮಟ್ಟದ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸ್ಥಾಪನೆ ಮಾಡಬೇಕು. ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯ. ಬೆಲೆ ಏರಿಕೆ ಮಾಡುವ ಮೂಲಕ ಬಡ ಕುಟುಂಬಗಳಿಗೆ ಸಂಕಷ್ಟತಂದೊಡ್ಡಿರುವ ಭ್ರಷ್ಟಬಿಜೆಪಿ ಸರಕಾರ ತೊಲಗಿಸುವ ಸಂಕಲ್ಪ ಪ್ರತಿಯೊಬ್ಬ ಮತದಾರರು ಮಾಡಬೇಕಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಬಿಪಿಎಲ್‌ ಕಾರ್ಡ್‌ ಹೊಂದಿದ ಪ್ರತಿ ಕುಟುಂಬದ ಸದಸ್ಯರಿಗೆ 10 ಕೆಜಿ ಅಕ್ಕಿ ಉಚಿತ ಜೊತೆಗೆ ಗೃಹಲಕ್ಷಿತ್ರ್ಮೕ ಯೋಜನೆ ಇಡೀ ಕುಟುಂಬ ನಿರ್ವಹಣೆ ಮಾಡುವ ಮಹಿಳೆಗೆ 2 ಸಾವಿರ ರೂಪಾಯಿ ಮಾಸಿಕ ವೇತನ ನೀಡುವ ಮೂಲಕ ಬಡ ಕುಟುಂಬಗಳ ಆರ್ಥಿಕ ಸುಭದ್ರತೆಗೆ ಸಂಕಲ್ಪ ಮಾಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಮತ ನೀಡುವ ಮೂಲಕ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನ ಮೇಲಿದೆ ಎಂದರು.

ಸಂಪರ್ಕ ಕೊರತೆಯಿಂದಾಗಿ ರಘುಪತಿ ಭಟ್ಟರಿಗೆ ವಿಷಯ ತಿಳಿಸಲು ಸಾಧ್ಯವಾಗಿಲ್ಲ: ಕೋಟ ಶ್ರೀನಿವಾಸ ಪೂಜಾರಿ

ಮಾಜಿ ಜಿ.ಪಂ ಸದಸ್ಯ ಸಿ.ಆರ್‌.ಉಮೇಶ್‌ ಮಾತನಾಡಿ ಹೆಚ್‌.ಡಿ.ಕುಮಾರಸ್ವಾಮಿಯವರಿಗೆ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಏಕೆಂದರೆ ಅವರು ನನಗೆ ಜಡಿಎಸ್‌ನಲ್ಲಿ ಟಿಕೇಟ್‌ ನೀಡಿದ್ದರೆ. ನನ್ನ ರಾಜಕೀಯ ಗುರುಗಳಾದ ಟಿ.ಬಿ.ಜಯಚಂದ್ರ ಅವರ ಸೇವೆ ಮಾಡಲು ಆಗುತ್ತಿರಲಿಲ್ಲ. 2018ರಲ್ಲಿ ಹೆಚ್‌.ಡಿ.ಕುಮಾರಸ್ವಾಮಿಯವರು ಮುಂದಿನ ದಿನಗಳಲ್ಲಿ ನಮಗೆ ಟಿಕೇಟ್‌ ಕೊಡುವುದಾಗಿ ಹೇಳಿದ್ದರು. ಆದರೆ ಟಿಕೇಟ್‌ ನೀಡಲಿಲ್ಲ. ಅದರಿಂದ ನನಗೆ ಬೇಸರವಿಲ್ಲ. ಟಿಬಿ ಜಯಚಂದ್ರ ಅವರ ಅಭಿವೃದ್ಧಿ ಕಾರ್ಯ ಮೆಚ್ಚಿ ಮತ್ತೊಮ್ಮೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ ಎಂದರು.

click me!