ಜಿಲ್ಲೆಯಲ್ಲಿ ಹೊಸದಾಗಿ ರಚಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕು ಪತ್ರ ವಿತರಿಸಲಾಗಿದ್ದು, ಜಿಲ್ಲೆಯ 2 ಕಂದಾಯ ಗ್ರಾಮಗಳ 2364 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವುದಾಗಿ ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ತಿಳಿಸಿದರು.
ಮೈಸೂರು : ಜಿಲ್ಲೆಯಲ್ಲಿ ಹೊಸದಾಗಿ ರಚಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕು ಪತ್ರ ವಿತರಿಸಲಾಗಿದ್ದು, ಜಿಲ್ಲೆಯ 2 ಕಂದಾಯ ಗ್ರಾಮಗಳ 2364 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವುದಾಗಿ ಜಿಲ್ಲಾಧಿಕಾರಿ ಡಾ.ಕೆ ವಿ ರಾಜೇಂದ್ರ ತಿಳಿಸಿದರು.
ಜಿಪಂ ಸಭಾಂಗಣದಲ್ಲಿ ಕಂದಾಯ ಇಲಾಖೆ ಮತ್ತು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲೆಯಲ್ಲಿ ಹೊಸದಾಗಿ ರಚಿಸಲಾದ ಕಂದಾಯ ಗ್ರಾಮಗಳ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
undefined
ಕಂದಾಯ ಇಲಾಖೆಯು ಗೊಲ್ಲರಹಟ್ಟಿ, ತಾಂಡ ಹಾಗೂ ಹಾಡಿಗಳನ್ನು ಕಾನೂನಾತ್ಮಕವಾಗಿ ಕಂದಾಯ ಗ್ರಾಮಗಳನ್ನಾಗಿ ಮಾಡಿ ಹಕ್ಕು ಪತ್ರ ನೀಡುತ್ತಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ 1016, ಸರಗೂರು ತಾಲೂಕಿನಲ್ಲಿ 646, ಎಚ್.ಡಿ. ಕೋಟೆ ತಾಲೂಕಿನಲ್ಲಿ 248 ಹಾಗೂ ಟಿ. ನರಸೀಪುರ ತಾಲೂಕಿನಲ್ಲಿ 323 ಫಲಾನುಭವಿಗಳು ಸೇರಿದಂತೆ ಇತರೆ ತಾಲೂಕುಗಳ ಫಲಾನುಭವಿಗಳು ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಅಲ್ಲದೆ ಇನ್ನೂ 58 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನು ರಚಿಸಬೇಕಿದೆ. ಇದನ್ನು ಚುನಾವಣೆ ಮುಗಿದ ನಂತರ ಮಾಡಲಾಗುವುದು. ಈ ಗ್ರಾಮಗಳಿಗೆ ಸರ್ಕಾರದ ಎಲ್ಲಾ ಸೌಲಭ್ಯ ನೀಡಲಾಗುವುದು. ವೇದಿಕೆಯ ಮೇಲೆ ಸಾಂಕೇತಿಕವಾಗಿ 10 ಜನರಿಗೆ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗುವುದು. ಉಳಿದ ಎಲ್ಲಾ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ತಾಲೂಕು ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದರು.
ರಾಜ್ಯಾದ್ಯಂತ ಏಕಕಾಲಕ್ಕೆ ಈ ಕಾರ್ಯಕ್ರಮ ನಡೆಸಲಾಯಿತು. ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿತ್ತು. ವೇದಿಕೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್, ಉಪ ವಿಭಾಗಾಧಿಕಾರಿ ಕಮಲಾಬಾಯಿ, ಭೂಕಂದಾಯ ಇಲಾಖೆ ಉಪ ನಿರ್ದೇಶಕಿ ಸೀಮಂತಿನಿ ಇದ್ದರು.
ಅಶೋಕ್‌ಗೆ ಅಭಿವೃದ್ಧಿ ಎಂದರೇನು ಗೊತ್ತಿಲ್ಲ
ರಾಮನಗರ (ಮಾ.05): ರಾಜ್ಯದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಅಭಿವೃದ್ಧಿ ಎಂದರೆ ಏನೆಂದು ಗೊತ್ತಿದೆಯಾ ಕೇಳಿ. ತಾಲೂಕು ಕಚೇರಿ, ಸರ್ವೇ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಲಂಚವನ್ನ ತಡೆಯಲು ಹೇಳಿ. ಆಮೇಲೆ ಅಭಿವೃದ್ಧಿ ಬಗ್ಗೆ ಅಶೋಕ್ ಮಾತಾಡಲಿ ಎಂದು ಸಂಸದ ಡಿ.ಕೆ. ಸುರೇಶ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಕೆಂಗಲ್ ಆಂಜನೇಯ ಸ್ವಾಮಿ ಖಾಸಗಿ ಕಲ್ಯಾಣಮಂಟಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಆರ್.ಅಶೋಕ್ ಅವರಿಗೆ ಅಭಿವೃದ್ಧಿ ಎಂದರೆ ಏನೆಂದು ಗೊತ್ತಿದೆಯಾ ಕೇಳಿ. ತಾಲೂಕು ಕಚೇರಿ, ಸರ್ವೇ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಲಂಚವನ್ನ ತಡೆಯಲು ಹೇಳಿ. ಆಮೇಲೆ ಅಭಿವೃದ್ಧಿ ಬಗ್ಗೆ ಅಶೋಕ್ ಮಾತಾಡಲಿ. ರಾಜ್ಯದಲ್ಲಿ ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಪ್ರಚಾರಕ್ಕೆ ಹೊರಟಿದ್ದಾರೆ. ಒಂದು ಕಡೆ ಜೆಡಿಎಸ್ ಪಂಚರತ್ನಯಾತ್ರೆ ಅಂತ ಹೋಗ್ತಿದ್ದಾರೆ, ಅದು ಪಂಚತಂತ್ರ ಎನ್ನಬಹುದು. ಬಿಜೆಪಿಯವರು ವಿಜಯಸಂಕಲ್ಪ ಯಾತ್ರೆ ಮೂಲಕ 40% ಸರ್ಕಾರ ಕೊಡುವುದಾಗಿ ಹೊರಟಿದ್ದಾರೆ. ಆದರೆ, ಕಾಂಗ್ರೆಸ್ ಅಭಿವೃದ್ಧಿ, ಭ್ರಷ್ಟಾಚಾರಮುಕ್ತ ಆಡಳಿತ ಕೊಡುವುದಾಗಿ ಜನರ ಮುಂದೆ ಹೋಗಿದ್ದೇವೆ ಎಂದು ಹೇಳಿದರು.
ಹಾಸನ ಕೋಟೆಯೊಳಗೆ ಕೈ-ತೆನೆ, ಅಣ್ತಮ್ಮಾಸ್ ಸಂಘರ್ಷ: ರೇವಣ್ಣ ರಣರಂಗಕ್ಕೆ ನುಗ್ಗಿದ ಕನಕಪುರದ ಡಿಕೆ ಬ್ರದರ್ಸ್!
ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಕುಂಟೆತ್ತುಗಳು: ಡಿ.ಕೆ. ಶಿವಕುಮಾರ್ ಹಾಗೂ ಎಚ್.ಡಿ. ಕುಮಾರಸ್ವಾಮಿ ಈಗ ಜೋಡೆತ್ತುಗಳಲ್ಲ. ಅವರು ಈಗ ಕುಂಟೆತ್ತು ಆಗಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಆದರೆ, ಅವರ ಜೊತೆಯಲ್ಲಿರುವವರೆಲ್ಲಾ ಕುಂಟುಕೊಂಡೇ ಓಡಾಡುತ್ತಾರೆ. ಬಿಜೆಪಿ ಎಲ್ಲಾ ವಿಚಾರದಲ್ಲೂ ಕುಂಟುಕೊಂಡು ಬಂದಿದೆ. ಮಾಧ್ಯಮದಲ್ಲಿ ತೋರಿಸಿದ್ದೀರಾ ಯಾರು ಯಾರ ಸಿಡಿ ಬಂತು. ಯಾರು ಲಂಚದಲ್ಲಿ ಸಿಕ್ಕಿಹಾಕಿಕೊಂಡು ರಾಜೀನಾಮೆ ಕೊಟ್ಟರು..? ಎಂಬುದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಕಾರ್ಯಕರ್ತರ ಆತ್ಮಹತ್ಯೆಗೆ ಯಾರು ಕಾರಣ ಆದರು ಎಂದು ಎಲ್ಲರಿಗೂ ಗೊತ್ತಿದೆ. ಸುಮಾರು 8 ಕೋಟಿ ಹಣ ವಿಚಾರದಲ್ಲಿ ಅವರ ಕುಂಟೆತ್ತು. ಜೋಡೆತ್ತು ಹೇಳಬೇಕೇ ಹೊರತು ಬೇರೆ ಅಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ, ಡಿಕೆಶಿ ನಿರುದ್ಯೋಗಿಗಳು: ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ನಿರುದ್ಯೋಗಿಗಳಾಗುತ್ತಾರೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳೀಲ್ ಕುಮಾರ್ ಕಟೀಲು ಹೇಳಿಕೆ ಬಗ್ಗೆ ಮಾತನಾಡಿ, ಬಿಜೆಪಿ ಅವರಿಗೆ ಭಯ ಇದೆ, ರಾಜ್ಯದ ದೇಶದ ಜನ ನಿರುದ್ಯೋಗಿಗಳಾಗಿ ಮಾಡಿದ್ದೇವೆ ಅಂತ ಗೊತ್ತಿದೆ. ಯುವಕರು ಬುದ್ದಿವಂತರಾಗಿದ್ದಾರೆ. ನೀವು ಹಾಕಿದ ನಿರುದ್ಯೋಗ ಟೋಪಿಯನ್ನ ಯುವಕರು ನಿಮಗೆ ಹಾಕುತ್ತಾರೆ. ಜಿಲ್ಲೆಯ ಅಭಿವೃದ್ಧಿ ಮಾಡದ ಇವರು ಜಗಳಕ್ಕೆ ಮಾತ್ರ ಸೀಮಿತ ಆಗಿದ್ದಾರೆ ಎಂದು ಕಿಡಿ ಕಾರಿದರು.