Mysuru Dasara 2022: ಕುಶಾಲತೋಪು ಶಬ್ದಕ್ಕೆ ಹೊಂದಿಕೊಳ್ಳುತ್ತಿರುವ ಗಜಪಡೆ

By Govindaraj S  |  First Published Sep 16, 2022, 9:26 PM IST

ವಿಶ್ವವಿಖ್ಯಾತ ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ತಾಲೀಮು ಚುರುಕುಗೊಳಿಸಲಾಗಿದೆ. ಇವತ್ತು ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಎರಡನೇ ಹಂತದ ಸಿಡಿ ಮದ್ದು ಸಿಡಿಸಿ ಅಭ್ಯಾಸ ನಡೆಸಲಾಯ್ತು.‌ 


ಮೈಸೂರು (ಸೆ.16): ವಿಶ್ವವಿಖ್ಯಾತ ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ತಾಲೀಮು ಚುರುಕುಗೊಳಿಸಲಾಗಿದೆ. ಇವತ್ತು ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಎರಡನೇ ಹಂತದ ಸಿಡಿ ಮದ್ದು ಸಿಡಿಸಿ ಅಭ್ಯಾಸ ನಡೆಸಲಾಯ್ತು.‌ ಇದೇ ಮೊದಲ ಬಾರಿಗೆ ಸ್ಥಳ ಬದಲಿಸಿ ತಾಲೀಮು ನಡೆಸಿದರೆ, ಚೈತ್ರ, ಲಕ್ಷ್ಮೀ ಮಾತ್ರ ದೂರವೇ ಉಳಿದಿದ್ದವು. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಎಷ್ಟೇ ಶಬ್ಧ ಬಂದ್ರೂ ಡೋಂಟ್ ಕೇರ್. ಸಿಡಿಮದ್ದು ಸಿಡಿಸಿದ್ರೂ ನೋ ಇಶ್ಯೂ. ಹೌದು! ಇದು ದಸರಾ ಗಜಪಡೆಯ ಗತ್ತು ಗಮ್ಮತ್ತು. ಇದು ಸಿಡಿಮದ್ದು ತಾಲೀಮಿನ‌ ಹೈಲೈಟ್ಸ್. 

ವಿಶ್ವವಿಖ್ಯಾತ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ  ಆನೆಗಳಿಗೆ ಇಂದು ಎರಡನೇ ಹಂತದ ಸಿಡಿಮದ್ದು ತಾಲೀಮು ನಡೆಸಲಾಯಿತು. ವಿಜಯದಶಮಿ ದಿನದಂದು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ಮತ್ತು ರಾಷ್ಟ್ರಗೀತೆ ನುಡಿಸುವಾಗ ಗೌರವಾರ್ಥವಾಗಿ 3 ಸುತ್ತಿನಲ್ಲಿ 21 ಕುಶಾಲ ತೋಪುಗಳನ್ನು ಸಿಡಿಸುವುದು ಸಂಪ್ರದಾಯ. ಹೀಗೆ ಸಿಡಿಮದ್ದು ಸಿಡಿಸಿದಾಗ ಉಂಟಾಗುವ ಭಾರೀ ಶಬ್ದದಿಂದ ಆನೆಗಳು ಕುದುರೆಗಳು ಬೆದರುತ್ತವೆ, ವಿಚಲಿತಗೊಳ್ಳುತ್ತವೆ. ಹೀಗಾಗಿ ಆನೆಗಳು ಕುದುರೆಗಳು ಈ ಸಿಡಿಮದ್ದು ಶಬ್ದಕ್ಕೆ ಹೊಂದಿಕೊಳ್ಳಲು ಈ ತಾಲೀಮು ನಡೆಸಲಾಯಿತು. 

Latest Videos

undefined

Mysuru Dasara 2022: ಸೆ.19ರಿಂದ ರಂಗ ಸಂಗೀತ, ದಸರಾ ರಂಗೋತ್ಸವ

ಈ ಬಾರಿಯ ತಾಲೀಮಿನಲ್ಲಿ ಲಕ್ಷ್ಮೀ ಆನೆ ಪುತ್ರ ಸಂತಾನವಾದ ಹಿನ್ನಲೆ ಗೈರಾಗಿದ್ದರೆ ಇದರೊಟ್ಟಿಗೆ ಚೈತ್ರ ಆನೆಯನ್ನು ಇರಿಸಲಾಗಿತ್ತು. ಇನ್ನೂ ಇದೇ ಮೊದಲ ಬಾರಿಗೆ ವಸ್ತು ಪ್ರದರ್ಶನದ ಪಾರ್ಕಿಂಗ್ ಆವರಣದಲ್ಲಿ ದಸರಾ ಸಿಡಿಮದ್ದು ತಾಲೀಮು ನಡೆಸಲಾಯ್ತು. ಅರಮನೆ ಗೋಡೆಗಳು ಹಳೆಯದಾಗಿರೋ ಹಿನ್ನಲೆ ಭಾರಿ ಶಬ್ಧಕ್ಕೆ ಗೋಡೆಗಳಿಗೆ ಸಮಸ್ಯೆಯಾಗಬಹುದು ಅನ್ನೋ ಅರಮನೆ ಆಡಳಿತ ಮಂಡಳಿ ಸಲಹೆ ಮೇರೆಗೆ ವಸ್ತುಪ್ರದರ್ಶನದ ಪಾರ್ಕಿಂಗ್ ಆವರಣದಲ್ಲಿ ಎರಡನೇ ಬಾರಿಗೆ ತಾಲೀಮು ನಡೆಸಲಾಯ್ತು. ತಾಲೀಮಿನಲ್ಲಿ 93.5 ಡೆಸಿಬಲ್ ಶಬ್ಧ ದಾಖಲಾಗಿತ್ತು. ತಾಲೀಮಿನಲ್ಲಿ 12 ಆನೆಗಳು ಭಾಗಿಯಾಗಿದ್ದವು. ಒಟ್ಟಿನಲ್ಲಿ ಎರಡನೇ ಹಂತದ ಸಿಡಿಮದ್ದು ತಾಲೀಮು ಸಂಪೂರ್ಣ ಯಶಸ್ವಿಯಾಗಿದೆ. ಮೂರನೇ ತಾಲೀಮು ವಸ್ತು ಪ್ರದರ್ಶನದ ಆವರಣದಲ್ಲಿಯೇ ನಡೆಯಲಿದೆ. 

ಕುಶಾಲತೋಪು ಸಿಡಿಸುವ 2ನೇ ಹಂತದ ತಾಲೀಮಿನ ವೇಳೆ ಪಾರ್ಥಸಾರಥಿ ಆನೆ ಸ್ವಲ್ಪ ಬೆದರಿತು. ಉಳಿದೆಲ್ಲಾ ಆನೆಗಳು ಯಾವುದೇ ಅಳುಕಿಲ್ಲದೇ ತಾಲೀಮಿನಲ್ಲಿ ಭಾಗಿಯಾದವು. ಅರಮನೆ ಹಾಗೂ ಕೋಟೆ ಮಾರಮ್ಮನ ದೇವಸ್ಥಾನ ಅತ್ಯಂತ ಪುರಾತನ ಕಟ್ಟಡಗಳಾಗಿರುವುದರಿಂದ ಯಾವುದೇ ಧಕ್ಕೆಯಾಗದಿರಲೆಂದು ಅರಮನೆ ಮಂಡಳಿ ಸೂಚನೆ ಮೇರೆಗೆ ವಸ್ತುಪ್ರದರ್ಶನ ಆವರಣದಲ್ಲಿ ತಾಲೀಮು ನಡೆಸಲಾಗಿದೆ. ಸೆ.23 ರಂದು ಸಹ ಕುಶಾಲತೋಪು ತಾಲೀಮು ಕೂಡ ಇಲ್ಲೇ ನಡೆಯುತ್ತದೆ.
- ಡಾ.ವಿ. ಕರಿಕಾಳನ್‌, ಡಿಸಿಎಫ್‌

Mysuru Dasara 2022: ಜಂಬೂ ಸವಾರಿ ಆನೆ ಲಕ್ಷ್ಮೀಗೆ ಗಂಡು ಮರಿ: ಮೈಸೂರಿನಲ್ಲಿ ಸಂಭ್ರಮ

ಗಜಪಡೆ, ಅಶ್ವಪಡೆಗೆ ಎರಡನೇ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿ ನಡೆದಿದೆ. ಪ್ರತಿಬಾರಿ ಅರಮನೆ ಬಳಿ ಮಾಡುತ್ತಿದ್ದೆವು. ಅರಮನೆಯ ಗೋಡೆಗಳಿಗೆ ತೊಂದರೆಯಾಗಲಿದೆ ಎನ್ನುವ ಕಾರಣಕ್ಕೆ ವಸ್ತುಪ್ರದರ್ಶನದ ಆವರಣದಲ್ಲಿ ಮಾಡಿದ್ದೇವೆ. ಈ ಬಾರಿ ಶಬ್ದಕ್ಕೆ ಯಾವ ಆನೆಗಳೂ ಹೆಚ್ಚಾಗಿ ಬೆದರಲಿಲ್ಲ.
- ಶಿವರಾಜ್‌, ಸಿಎಆರ್‌ ಡಿಸಿಪಿ

click me!