ಬಾನು ಮುಸ್ತಾಕ್ ಚಾಮುಂಡಿ ದೇವಿನ ಒಪ್ಪಿದ್ರೆ ದಸರಾ ಉದ್ಘಾಟನೆ ಮಾಡ್ಲಿ: ಬಿಜೆಪಿ ಶಾಸಕ ಸುರೇಶ್ ಗೌಡ

Published : Aug 25, 2025, 04:19 PM IST
Banu Mushtaq

ಸಾರಾಂಶ

ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವುದನ್ನು ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಖಂಡಿಸಿದ್ದಾರೆ. ನಾಸ್ತಿಕರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಸರ್ಕಾರ ಹಿಂದೂ ಧರ್ಮವನ್ನು ಅವಮಾನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ತುಮಕೂರು :ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕ್ ರನ್ನು ಆಯ್ಕೆ ಮಾಡಿರೋದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಕಾಂಗ್ರೆಸ್ ನಾಯಕರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಸುರೇಶ್ ಗೌಡ ಅವರು, “ಸರ್ಕಾರವು ಬರಗೂರು ರಾಮಚಂದ್ರಪ್ಪನಂತಹ ನಾಸ್ತಿಕರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಹಿಂದೂ ಧರ್ಮವನ್ನು ಅವಮಾನಿಸಿದೆ. ಚಾಮುಂಡಿ ದೇವಿಗೆ ದೀಪ ಹಚ್ಚಲು ನಿರಾಕರಿಸುವವರನ್ನು ಕರೆದು ಕಾರ್ಯಕ್ರಮ ಉದ್ಘಾಟನೆ ಮಾಡಿಸುತ್ತಿರುವುದು ನಂಬಿಕೆಗಳ ಮೇಲೆ ಹೊಡೆತ ನೀಡುವಂತೆ ಇದೆ ಎಂದು ಆರೋಪಿಸಿದರು.

ಸಚಿವ ಜಮೀರ್ ಅಹ್ಮದ್ ಕೋಮುವಾದಿ. ಆದರೇ ರಾಜಕೀಯ ಸ್ಟಂಟ್ ಗೆ ಜನರ ಮುಂದೆ ಭಾಷಣ ಹೋಡಿತಿರ್ತಾರೆ. ಸಿಎಂ ನನ್ನ ಹೆಸರಲ್ಲೇ ಸಿದ್ಧರಾಮ ಇದೆ ಅಂತ ಹೇಳ್ತಿರ್ತಾರೆ. ಅವರು ಮಾಡೊ ಕೆಲಸಗಳನ್ನು ನೋಡಿದ್ರೆ, ಬರಗೂರು ರಾಮಚಂದ್ರಪ್ಪ ಅವರನ್ನು ಕರೆಸಿ ದಸರಾ ಉದ್ಘಾಟನೆ ಮಾಡುಸ್ತಾರೆ. ಅವರು ದೀಪ ಹಚ್ಚಲ್ಲಾ ಅಂತಾರೆ. ಇಂತಹ ನಾಸ್ತಿಕರನ್ನು ಕರೆದುಕೊಂಡು ಹೋಗಿ. ಹಿಂದೂ ಧರ್ಮದ ಮೇಲೆ ಪದೇ ಪದೇ ಹೊಡೆತ ಕೊಡೊ ಕೆಲಸ ಮಾಡುತಿದ್ದಾರೆ. ಈಗ ಬಾನು ಮುಸ್ತಾಕ್ ನ ಕರೆದುಕೊಂಡು ಹೊಗ್ತೀನಿ ಅಂತಿದಾರೆ. ಇಸ್ಲಾಂ ಧರ್ಮ ಏನು ಹೇಳುತ್ತೇ? ಬಾನು ಮುಸ್ತಾಕ್ ಅವರು ಚಾಮುಂಡಿ ದೇವಿನ ಒಪ್ಕೊಳ್ತಿನಿ ಅಂದ್ರೆ ಬಂದು ಮಾಡ್ಲಿ. ಅವರು ಬಂದು ಹೇಳಲಿ. ಚಾಮುಂಡಿ ದೇವಿ ಮೇಲೆ ನಂಬಿಕೆ ಇದೆ ಎಂದು ಹೇಳಿ ಉದ್ಘಾಟನೆ ಮಾಡಲಿ ನಾವು ಒಪ್ಪಿಕೊಳ್ತೀವಿ. ಇಂತಹ ನಾಸ್ತಿಕರನ್ನು ಕರ್ಕೊಂಡು ಹೋಗಿ ಹಿಂದೂ ಧರ್ಮದ ಮೇಲೆ ಎಷ್ಟು ಹೊಡೆತ ಕೊಡ್ತಾರೆ.  ನಾಸ್ತಿಕರ ಮೂಲಕ ದಸರಾ ಕಾರ್ಯಕ್ರಮವನ್ನು ನಡೆಸುವುದು ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತದೆ. ಎಂದು ಕಿಡಿಕಾರಿದರು.

ಎಸ್ ಐಟಿ ತನಿಖೆ ಮಾಡಿ ಧರ್ಮಸ್ಥಳದ ಮೇಲೆ ಹೊಡೆದರು. ನ್ಯಾಷನಲ್, ಇಂಟರ್ ನ್ಯಾಷನಲ್ ಸುದ್ದಿ ಆಗೋ ಹಾಗೆ ಮಾಡಿದರು. ಅಪಪ್ರಚಾರ ಮಾಡಿದರು. ಬುರುಡೆ ವ್ಯಕ್ತಿ ಹೇಳುತ್ತಿದ್ದಾನೆ. ಕಾಸ್ ಕೊಟ್ಟು ಪ್ರಚೋದನೆ ಮಾಡಿದ್ರು ಅಂತ. ಎಸ್ ಐಟಿ ತನಿಖೆ ಮಾಡುವಾಗ ಬುರುಡೆ ಎಲ್ಲಿತ್ತು. ಎಲ್ಲಿಂದ ಬಂತು ಅಂತ  ಯಾಕೆ ಸಿದ್ದರಾಮಯ್ಯರವರಿಗೆ ಗೊತ್ತಿರಲ್ವಾ? ಅವನನ್ನು ಒದ್ದು ಒಳಗಡೆ ಹಾಕಿದ್ರೆ ಸತ್ಯ ಹೇಳುತಿದ್ದ. ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡಿ. ಅಲ್ಲಿರುವ ನಂಬಿಕೆ ಹಾಳು ಮಾಡಿ. ಇವತ್ತು ಎಸ್ ಐಟಿ ತನಿಖೆ ಮಾಡಿದ್ದಕ್ಕೆ ಅದು ಕಳಂಕ ಮುಕ್ತವಾಗಿ ಬಂತು ಅಂತ ಕಾಂಗ್ರೆಸ್ ನವರು ಬುರುಡೆ ಬಿಡೊದನ್ನ ನಿಲ್ಲಿಸಬೇಕು .

ಸಿದ್ದರಾಮಯ್ಯ ಬಂದ ಮೇಲೆ ಹಿಂದೂ ಧರ್ಮದ ಮೇಲೆ ಒಂದಲ್ಲ ಒಂದು ದಾಳಿ ಮಾಡಿದ್ದಾರೆ. ನಾವಿದನ್ನು ಖಂಡಿಸುತ್ತೀವಿ. ಬಾನು ಮುಸ್ತಾಕ್, ನಾಸ್ತಿಕರಾದ ಬರಗೂರು ರಾಮಚಂದ್ರಪ್ಪರನ್ನು ಕರ್ಕೊಂಡು ಬಂದು ದೀಪ ಹಚ್ಚಲ್ಲ ಅನ್ನುವವರನ್ನು ಯಾಕ್ರಿ ಕರ್ಕೊಂಡು ಬರ್ತಿರಾ ಸಿದ್ದರಾಮಯ್ಯನವರೇ. ಹಿಂದೂಗಳ ಮೇಲೆ ಎಷ್ಟು ಅಂತ ದಾಳಿ ಮಾಡಿಸ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸರಾ ಮೈಸೂರು ಮಹಾರಾಜರಿಂದ ಕಾಲದಿಂದ ನಡೆದುಕೊಂಡು ಬಂದಿರೋದು. ಚಾಮುಂಡಿಗೆ ಕಾರ್ಯಕ್ರಮದಲ್ಲಿ ಭಕ್ತ ಸಮರ್ಪಣೆ ಮಾಡುವಂತದ್ದು. ಭಕ್ತರ ಮೇಲೆ ದಾಳಿ ಮಾಡುವ ಕೆಲಸವನ್ನು ಪದೇ ಪದೇ ಮಾಡುತಿದ್ದಾರೆ. ಈ ಸರ್ಕಾರ ತೊಲಗಬೇಕು. ನಾಸ್ತಿಕರನ್ನು ಇಟ್ಟುಕೊಂಡು ಹಿಂದೂ ಧರ್ಮದ ಮೇಲೆ ದಾಳಿ ಮಾಡುವ ಸಿದ್ಧರಾಮಯ್ಯಗೆ ಆ ಚಾಮುಂಡಿ ದೇವಿನೆ ನೋಡ್ಕೊಳಮ್ಮ ಎಂದು ಪೂಜೆ ಮಾಡ್ತಿವಿ. ಭಾ ಮುಸ್ತಾಕ್ ಳನ್ನು ಮಸೀದಿಯಲ್ಲಿ ಕರೆದುಕೊಂಡು ಹೋಗಿ ಗುರುತಿಸಿ. ಮುಸ್ಲಿಂಮರಿರುತ್ತಾರಲ್ಲ ಮಸೀದಿಯಲ್ಲಿ ಉದ್ಘಾಟನೆ ಮಾಡಿಸಲಿ. ದರ್ಗಾದಲ್ಲಿ ಉದ್ಘಾಟನೆ ಮಾಡಿಸಲಿ ಯಾರಾದ್ರೂ ಬೇಡ ಅಂತಾರಾ?

ನಮ್ಮದು ಸನಾತನ ಧರ್ಮ. ಸಾವಿರಾರು ವರ್ಷಗಳಿಂದ ನಮ್ಮ ಖುಷಿಮುನಿಗಳು ನಡೆಸಿಕೊಂಡು ಬಂದಿದ್ದಾರೆ. ಐನೂರು ವರ್ಷದಿಂದ ಮಹಾರಾಜರು ನಡೆಸಿಕೊಂಡು ಬಂದಿದ್ದಾರೆ. ಮುಸಲ್ಮಾನರು ಮಸೀದಿಗೆ ಹಿಂದೂಗಳನ್ನು ಕರೆದುಕೊಂಡು ಹೋಗಿ ಉದ್ಘಾಟನೆ ಮಾಡಿಸುತ್ತಾರಾ. ಆಗಾತ್ತಾ?ಸಾಧ್ಯಾನಾ? ಸಿದ್ಧರಾಮಯ್ಯನವರು ಏನು ತಿಳ್ಕೊಂಡು ಬಿಟ್ಟಿದಾರೆ. ಈ ರೀತಿ ಆದ್ರೆ ಜನರೇ ಸಿದ್ಧರಾಮಯ್ಯ ಮೇಲೆ ದಾಳಿ ಮಾಡ್ತಾರೆ ಎಂದು ಎಚ್ಚರಿಕೆ ನೀಡಿದರು.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ