ಮೈಸೂರು ದಸರಾ: ಸೂರ್ಯಕಿರಣ್ ತಂಡದಿಂದ ಅ.18, 19ಕ್ಕೆ ಏರ್‌ಶೋ, ಡ್ರೋನ್‌ ಹಾರಾಟಕ್ಕೆ ಎಚ್ಚರಿಕೆ ಕೊಟ್ಟ ಸೆಸ್ಕ್‌

Gowthami K   | Kannada Prabha
Published : Oct 16, 2026, 11:31 AM IST
air show

ಸಾರಾಂಶ

ಐತಿಹಾಸಿಕ ಮೈಸೂರು ದಸರಾ ಉತ್ಸವದಲ್ಲಿ ಅಕ್ಟೋಬರ್ 18 ಮತ್ತು 19ರಂದು ಭಾರತೀಯ ವಾಯುಸೇನೆಯ ಸೂರ್ಯಕಿರಣ್ ತಂಡವು ಆಕರ್ಷಕ ವೈಮಾನಿಕ ಪ್ರದರ್ಶನ ನೀಡಲಿದೆ. 9 'ಹಾಕ್ ಎಂಕೆ 132' ವಿಮಾನಗಳು ಬಾನಂಗಳದಲ್ಲಿ ತ್ರಿವರ್ಣ ಮೂಡಿಸಿ, ವಿವಿಧ ಕಸರತ್ತುಗಳ ಮೂಲಕ ಜನರನ್ನು ರೋಮಾಂಚನಗೊಳಿಸಲಿವೆ. ಇದು ಯುವಜನತೆಗೆ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಸ್ಫೂರ್ತಿ ನೀಡಲಿದೆ.

ಬೆಂಗಳೂರು: ಐತಿಹಾಸಿಕ ಮೈಸೂರು ದಸರಾ ಉತ್ಸವದ ಅ.18, 19ರಂದು ಭಾರತೀಯ ವಾಯುಸೇನೆಯ ‘ಸೂರ್ಯಕಿರಣ್ ಏರೋ ಬ್ಯಾಟಿಕ್ ತಂಡ’ ಮೈನವಿರೇಳಿಸುವ ಆಕರ್ಷಕ ವೈಮಾನಿಕ ಪ್ರದರ್ಶನವನ್ನು ನೀಡಲಿದೆ. ಎಚ್‌ಎಎಲ್ ನಿರ್ಮಿತ 9 ‘ಹಾಕ್ ಎಂಕೆ 132’ ವಿಮಾನಗಳು ಪರಸ್ಪರ ಸಂಯೋಜನೆಯೊಂದಿಗೆ, ಅತ್ಯಂತ ಸಮೀಪದಲ್ಲಿ ವಿವಿಧ ಲೂಪ್‌ಗಳು, ಬ್ಯಾರಲ್ ರೋಲ್, ಉಲ್ಟಾ ಹಾರಾಟ, ಹೃದಯ ಚಿನ್ಹೆ ಸೇರಿದಂತೆ ವಿವಿಧ ಮಾದರಿಯ ರೋಮಾಂಚಕ ಪ್ರದರ್ಶನಗಳನ್ನು ನೀಡಲಿವೆ. ಕೇಸರಿ, ಬಿಳಿ, ಹಸಿರು ಬಣ್ಣದೊಂದಿಗೆ ಮೈಸೂರಿನ ಆಕಾಶಕ್ಕೆ ಬಣ್ಣ ಬಳಿಯಲಿವೆ. ಭಾರತೀಯ ಯುವಜನತೆ ಉನ್ನತವಾದದನ್ನು ಸಾಧಿಸಲು ಮತ್ತು ಭಾರತೀಯ ವಾಯುಪಡೆಯಲ್ಲಿ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಈ ತಂಡವು ಸ್ಫೂರ್ತಿ ನೀಡುತ್ತದೆ.

ಮೈಸೂರಿನಲ್ಲಿ ದಸರಾ ವೀಕ್ಷಣೆಗೆ ಸೇರಿರುವ ಜನತೆಗೆ ತನ್ನ ವಿಶಿಷ್ಟ ವೈಮಾನಿಕ ಕಸರತ್ತುಗಳ ಮೂಲಕ ರೋಮಾಂಚನಗೊಳಿಸಲು ಸೂರ್ಯಕಿರಣ್ ಏರೋಬ್ಯಾಟಿಕ್ ತಂಡವು ಕಾತರದಿಂದ ಕಾಯುತ್ತಿದೆ ಎಂದು ಭಾರತೀಯ ಸೇನೆಯ ಬೆಂಗಳೂರು ವಿಭಾಗ ತಿಳಿಸಿದೆ.

ಡ್ರೋನ್‌ ಪ್ರದರ್ಶನ ಚಿತ್ರೀಕರಿಸಿದರೆ ಕಠಿಣ ಕ್ರಮ, ಸೆಸ್ಕ್‌ ನಿಂದ ಸಾರ್ವಜನಿಕರಿಗೆ ಎಚ್ಚರಿಕೆ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ (ಸೆಸ್ಕ್) ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಅ.17, 18, 20 ಹಾಗೂ 21 ರಂದು ಅತ್ಯಾಕರ್ಷಕ ಡ್ರೋನ್ ಪ್ರದರ್ಶನವನ್ನು ಆಯೋಜಿಸಲಾಗಿದೆ.

ಆದರೆ, ಡ್ರೋನ್ ಪ್ರದರ್ಶನ ನಡೆಯುವ ಸಂದರ್ಭದಲ್ಲಿ ಹಲವು ಖಾಸಗಿ ವ್ಯಕ್ತಿಗಳು ಹಾಗೂ ಸಂಸ್ಥೆಗಳು ತಮ್ಮ ಡ್ರೋನ್‌ ಗಳನ್ನು ಹಾರಿಸಿ, ಸೆಸ್ಕ್ ವತಿಯಿಂದ ನಡೆಸುವ ಡ್ರೋನ್ ಪ್ರದರ್ಶನದ ದೃಶ್ಯಗಳನ್ನು ಸೆರೆ ಹಿಡಿಯುವುದು ಹಾಗೂ ಡ್ರೋನ್‌ ಗಳ ಮೂಲಕ ಚಿತ್ರೀಕರಿಸಿದ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವುದಕ್ಕೆ ನಿರ್ಬಂಧ ಹೇರಲಾಗಿದೆ.

ಆದ್ದರಿಂದ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಖಾಸಗಿ ಡ್ರೋನ್‌ ಗಳನ್ನು ಹಾರಿಸಿ, ಸೆಸ್ಕ್ ವತಿಯಿಂದ ನಡೆಸಲಾಗುತ್ತಿರುವ ಬೃಹತ್‌ಡ್ರೋನ್ ಪ್ರದರ್ಶನದ ದೃಶ್ಯಗಳನ್ನು ಡ್ರೋನ್‌ ಗಳ ಮೂಲಕ ಚಿತ್ರೀಕರಿಸಿ ಹಾಗೂ ಡ್ರೋನ್ ಮೂಲಕ ಚಿತ್ರೀಕರಣ ಮಾಡಲಾಗುವ ದೃಶ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಸಕ್ಷಮ ಪ್ರಾಧಿಕಾರದಿಂದ ಕಠಿಣ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

ಪ್ರಾಧಿಕಾರದ ಅನುಮತಿ ಅಗತ್ಯ

ಯಾವುದೇ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಸೆಸ್ಕ್ ವತಿಯಿಂದ ನಡೆಸುತ್ತಿರುವ ಡ್ರೋನ್ ಪ್ರದರ್ಶನದ ದೃಶ್ಯಾವಳಿಗಳನ್ನು ಡ್ರೋನ್‌ ಗಳ ಮೂಲಕ ಅನಧಿಕೃತವಾಗಿ ಚಿತ್ರೀಕರಣ ಮಾಡುವುದಕ್ಕೆ ನಿರ್ಬಂಧವಿದೆ. ಒಂದೊಮ್ಮೆ ಸೆಸ್ಕ್ ವತಿಯಿಂದ ನೀಡಲಾಗುವ ಎಚ್ಚರಿಕೆಯ ನಡುವೆಯೂ ಯಾವುದೇ ವ್ಯಕ್ತಿಗಳು ಅಥವಾ ಸಂಸ್ಥೆಗಳು, ಡ್ರೋನ್ ಪ್ರದರ್ಶನದ ದೃಶ್ಯಗಳನ್ನು ಚಿತ್ರೀಕರಿಸಿದರೆ ಅಂತಹ ವ್ಯಕ್ತಿ ಹಾಗೂ ಸಂಸ್ಥೆಗಳ ಡ್ರೋನ್‌ ಗಳನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕವೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಸೆಸ್ಕ್‌ಎಚ್ಚರಿಸಿದೆ.

PREV
Read more Articles on
click me!

Recommended Stories

ನನ್ನ ಕೆಟ್ಟದಾಗಿ ನಿಂದಿಸಿದರೂ ನಾನು ಮೌನವಾಗಿದ್ದೆ: ಕರವೇ ಸಂಘಟನೆ, ಕನ್ನಡಿಗರಿಗೆ ಗಾಯಕ ಸೋನು ನಿಗಮ್ ಬಹಿರಂಗ ಪತ್ರ
First Dosa: ಬೆಂಗಳೂರಿನ ದೋಸೆ ರುಚಿಗೆ ಮನಸೋತ ಕೊರಿಯನ್ ಕುಟುಂಬ! CTR, ರಾಮೇಶ್ವರಂ ಕೆಫೆಯಲ್ಲಿ ಯಾವ ದೋಸೆ ಫೇವರೆಟ್ ಆಯ್ತು?